ರೈತರ ಸಹಕಾರಿ ಸಂಸ್ಥೆಗಳನ್ನು ಉಳಿಸಿ ಬೆಳೆಸಲು ಶಾಸಕರ ಕರೆ
ರೈತರ ಸಹಕಾರಿ ಸಂಸ್ಥೆಗಳನ್ನು ಉಳಿಸಿ ಬೆಳೆಸಲು ಶಾಸಕರ ಕರೆ.
ಚಿತ್ರ ; ಕೋಲಾರ ತಾಲೂಕಿನ ವೇಮಗಲ್ ಹೋಬಳಿಯ ವೀರೇನಹಳ್ಳಿ ಗ್ರಾಮದಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಕಟ್ಟಡವನ್ನು ಶಾಸಕ ಕೊತ್ತೂರು ಮಂಜುನಾಥ್ ಉದ್ಘಾಟಿಸಿ ಮಾತನಾಡಿದರು.


ಕೋಲಾರ, 0೯ಅಕ್ಟೋಬರ್ (ಹಿ.ಸ.) :

ಆ್ಯಂಕರ್ : ಕೋಲಾರ ಜಿಲ್ಲೆಯಲ್ಲಿರುವ ಕೃಷಿ ಪತ್ತಿನ ಸಹಕಾರಿ ಸಂಘಗಳು, ತಾಲೂಕು ಸೊಸೈಟಿಗಳು, ಹಾಲಿನ ಡೇರಿಗಳು, ಪಿಎಲ್ಡಿ ಮತ್ತು ಡಿಸಿಸಿ ಬ್ಯಾಂಕುಗಳು ರೈತರ ಜೀವನಾಡಿಯ ಸಂಸ್ಥೆಗಳಾಗಿದ್ದು ಅವುಗಳನ್ನು ಕಾಪಾಡಿಕೊಂಡು ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಶಾಸಕ ಕೊತ್ತೂರು ಮಂಜುನಾಥ್ ತಿಳಿಸಿದರು.

ಕೋಲಾರ ತಾಲೂಕಿನ ವೇಮಗಲ್ ಹೋಬಳಿಯ ವೀರೇನಹಳ್ಳಿ ಗ್ರಾಮದಲ್ಲಿ ಗುರುವಾರ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದ ಅವರು ರೈತರು ಇದ್ದರೆ ಅಷ್ಟೇ ಜೀವನ ಅವರು ಏನಾದರೂ ಆಹಾರ ಬೆಳೆಯದೆ ಹೋದರೆ ಊಟಕ್ಕೂ ತೊಂದರೆಯಾಗುವ ಸಂದರ್ಭ ಬರುತ್ತದೆ ರೈತರು ಯಾವುದೇ ಕಾರಣಕ್ಕೂ ಜಮೀನು ಮಾರಾಟ ಮಾಡಲಿಕ್ಕೆ ಹೋಗಬೇಡಿ ಮುಂದೆ ಜಮೀನುಗಳಿಗೂ ಬಂಗಾರ ಅಂತಹ ಬಲೆ ಬರುತ್ತದೆ ಎಂದರು.

ಹಾಲು ಉತ್ಪಾದಕರು ಕಡ್ಡಾಯವಾಗಿ ಯಶಸ್ವಿನಿ ಯೋಜನೆಯ ಕಾರ್ಡ್ ಮಾಡಿಸಬೇಕು ಡೇರಿಯಲ್ಲಿ ಯಾವುದೇ ಕಾರಣಕ್ಕೂ ರಾಜಕಾರಣ ಮಾಡಬಾರದು ಪಕ್ಷಾತೀತವಾಗಿ ಡೇರಿಯನ್ನು ಮುನ್ನಡೆಸಿಕೊಂಡು ಹೋಗಬೇಕು ಡೇರಿ ವಿಚಾರದಲ್ಲಿ ಸರ್ಕಾರದಿಂದ ಮತ್ತು ಒಕ್ಕೂಟ ದಿಂದ ಸಂಪೂರ್ಣ ಸಹಕಾರ ನೀಡಲಾಗುತ್ತದೆ ಹಾಲು ಉತ್ಪಾದಕರು ಗುಣಮಟ್ಟದ ಹಾಲು ಪೊರೈಸಿ ಸಂಘಕ್ಕೆ ಲಾಭಾಂಶ ಪಡೆಯುವಂತೆ ಮಾಡಿಕೊಳ್ಳಿ ಎಂದರು.

ಎಂಎಲ್ಸಿ ಎಂ.ಎಲ್ ಅನಿಲ್ ಕುಮಾರ್ ಮಾತನಾಡಿ ರೈತರು ಬೆಳೆದ ಯಾವುದೇ ಬೆಳೆಗಳಿಗೂ ನಿಗದಿತ ಬೆಲೆ ಇಲ್ಲ ಆದರೆ ಹಾಲು ಉತ್ಪಾದಕರಿಗೆ ಮಾತ್ರ ನಿಗದಿತ ಬೆಲೆ ಇದೆ ೧೫ ದಿನಗಳಿಗೆ ಒಮ್ಮೆ ಉತ್ಪಾದಕರಿಗೆ ಹಣ ಕೈಸೇರುತ್ತೆ ಜಿಲ್ಲೆಯಲ್ಲಿ ಸಹಕಾರಿ ಸಂಘಗಳು ರೈತರ ಆದಾಯದ ಮೂಲವಾಗಿದೆ ಮುಂದೆ ಒಕ್ಕೂಟದಿಂದ ಸೋಲಾರ್ ಘಟಕ, ಎಂವಿಕೆ ಡೇರಿ ಪ್ರಾರಂಭವಾಗಿ ಹಾಲು ಉತ್ಪಾದಕರಿಗೆ ಹೆಚ್ಚಿನ ಪೋತ್ಸಾಹ ಸಿಗುವಂತಾಗುತ್ತದೆ ಹೈನುಗಾರಿಕೆಗೆ ಸರ್ಕಾರದಿಂದ ಸಹ ಹೆಚ್ಚಿನ ನೆರವು ಸಿಗುತ್ತದೆ ಎಂದರು.

ಕೋಮುಲ್ ನಿರ್ದೇಶಕ ಚಂಜಿಮಲೆ ರಮೇಶ್ ಮಾತನಾಡಿ ಹಾಲು ಉತ್ಪಾದಕರ ಸಂಘಗಳು ರೈತರ ಸಂಸ್ಥೆಗಳಾಗಿವೆ ಕೊರೊನಾ ಅಂತಹ ಸಂಧರ್ಭದಲ್ಲಿ ಸಹ ರೈತರನ್ನು ಕೈಹಿಡಿದಿದ್ದು ಹಾಲು ಉತ್ಪಾದನೆ ಮಾತ್ರ ಹಾಲಿಗೆ ಯಾರು ಕೂಡ ನೀರು ಹಾಕಬೇಡಿ ಕಲಬೆರಕೆ ಹಾಲಿಗೆ ಬೆಲೆ ಇಲ್ಲ ಹಾಲು ಉತ್ಪಾದಕರಿಗೆ ಒಕ್ಕೂಟದಿಂದ ಸಿಗುವ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಳ್ಳುವಂತೆ ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ವೀರೇನಹಳ್ಳಿ ಡೇರಿ ಅಧ್ಯಕ್ಷ ಎ.ಕೃಷ್ಣಪ್ಪ, ವೇಮಗಲ್ ನರಸಾಪುರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಉರಟ ಅಗ್ರಹಾರ ಚೌಡರೆಡ್ಡಿ, ಸಿಂಡಿಕೇಟ್ ಸದಸ್ಯ ಸೀಸಂದ್ರ ಗೋಪಾಲಗೌಡ, ಕೋಮುಲ್ ಉಪ ವ್ಯವಸ್ಥಾಪಕ ಡಾ ಮಹೇಶ್, ಅಹಮದ್ ಅಸ್ವಕ್, ವಿಸ್ತರಣಾಧಿಕಾರಿ ಶಿವಕುಮಾರ್, ನಾಗೇಂದ್ರ, ಮುಖಂಡರಾದ ಮೈಲಾಂಡಹಳ್ಳಿ ಮುರಳಿ, ಮೇಡಹಾಳ ಮುನಿಅಂಜಿ, ರಾಮುಶಿವಣ್ಣ, ಕುಮಾರ್, ಚೌಡಪ್ಪ, ವೀರೇಂದ್ರ ಪಾಟೀಲ್, ಸೇರಿದಂತೆ ಡೇರಿ ನಿರ್ದೇಶಕರು ಹಾಲು ಉತ್ಪಾದಕರು ಗ್ರಾಮಸ್ಥರು ಇದ್ದರು.

ಚಿತ್ರ ; ಕೋಲಾರ ತಾಲೂಕಿನ ವೇಮಗಲ್ ಹೋಬಳಿಯ ವೀರೇನಹಳ್ಳಿ ಗ್ರಾಮದಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಕಟ್ಟಡವನ್ನು ಶಾಸಕ ಕೊತ್ತೂರು ಮಂಜುನಾಥ್ ಉದ್ಘಾಟಿಸಿ ಮಾತನಾಡಿದರು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande