ಕಮಲಾಪುರ ಪ.ಪಂಯಿಂದ ಪುರಸಭೆಗೆ ಮೇಲ್ದರ್ಜೆ : ಆಕ್ಷೇಪಣೆ ಸಲ್ಲಿಕೆಗೆ ಅವಕಾಶ
ಹೊಸಪೇಟೆ, 09 ಅಕ್ಟೋಬರ್ (ಹಿ.ಸ.) : ಆ್ಯಂಕರ್ : ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಕಮಲಾಪುರ ಪಟ್ಟಣ ಪಂಚಾಯಿತಿಯನ್ನು ಪುರಸಭೆಯನ್ನಾಗಿ ಮೇಲ್ದರ್ಜೆಗೇರಿಸಲು ಜನಸಂಖ್ಯೆ ಆಧಾರದ ಮೇರೆಗೆ 23 ವಾರ್ಡ್‍ಗಳಾಗಿ ವಿಂಗಡಣೆ ಮಾಡಿದ ಚೆಕ್‍ಬಂದಿ ಹಾಗೂ ಜನಸಂಖ್ಯೆ ವಿವರಗಳನ್ನು ಪ್ರಕಟಣೆ ಹೊರಡಿಸಲಾಗಿದೆ. ಸಾರ
ಕಮಲಾಪುರ ಪ.ಪಂಯಿಂದ ಪುರಸಭೆಗೆ ಮೇಲ್ದರ್ಜೆ : ಆಕ್ಷೇಪಣೆ ಸಲ್ಲಿಕೆಗೆ ಅವಕಾಶ


ಹೊಸಪೇಟೆ, 09 ಅಕ್ಟೋಬರ್ (ಹಿ.ಸ.) :

ಆ್ಯಂಕರ್ : ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಕಮಲಾಪುರ ಪಟ್ಟಣ ಪಂಚಾಯಿತಿಯನ್ನು ಪುರಸಭೆಯನ್ನಾಗಿ ಮೇಲ್ದರ್ಜೆಗೇರಿಸಲು ಜನಸಂಖ್ಯೆ ಆಧಾರದ ಮೇರೆಗೆ 23 ವಾರ್ಡ್‍ಗಳಾಗಿ ವಿಂಗಡಣೆ ಮಾಡಿದ ಚೆಕ್‍ಬಂದಿ ಹಾಗೂ ಜನಸಂಖ್ಯೆ ವಿವರಗಳನ್ನು ಪ್ರಕಟಣೆ ಹೊರಡಿಸಲಾಗಿದೆ. ಸಾರ್ವಜನಿಕರು ಆಕ್ಷೇಪಣೆಗಳಿದ್ದಲ್ಲಿ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ.

ಕರ್ನಾಟಕ ಪುರಸಭೆಗಳ ಕಾಯ್ದೆ 1964 ರ ಕಲಂ 358 ರನ್ವಯ 20ವಾರ್ಡ್‍ಗಳನ್ನು 23 ವಾರ್ಡ್‍ಗಳಾಗಿ ಪುನರ್ ವಿಂಗಡಣೆ ಮಾಡಿರುವ ಚೆಕ್‍ಬಂದಿ ಹಾಗೂ ಜನಸಂಖ್ಯೆ ವಿವರಗಳನ್ನು ಕರ್ನಾಟಕ ರಾಜ್ಯಪತ್ರ ಭಾಗ-6ಸಿ ರಲ್ಲಿ ಜಿಲ್ಲಾಧಿಕಾರಿಗಳು ವಿಜಯನಗರ ಜಿಲ್ಲೆ ರವರ ಕರಡು ಅಧಿಸೂಚನೆಯನ್ನು ಜಿಲ್ಲಾಧಿಕಾರಿಗಳ ಕಾರ್ಯಾಲಯ, ಹೊಸಪೇಟೆ ಉಪವಿಭಾಗದ ಸಹಾಯಕ ಆಯುಕ್ತರು ಕಾರ್ಯಾಲಯ, ಹೊಸಪೇಟೆ ತಾಲೂಕು ಕಚೇರಿ, ಕಮಲಾಪುರ ಪುರಸಭೆ ಕಾರ್ಯಾಲಯ ಸೇರಿದಂಥೆ ಹೊಸಪೇಟೆ ನಗರಸಭೆ ಕಾರ್ಯಾಲಯದಲ್ಲಿ ಪ್ರಕಟಣೆ ಹೊರಡಿಸಲಾಗಿದೆ.

ಈ ಕುರಿತು ಸಾರ್ವಜನಿಕರ ಆಕ್ಷೇಪಣೆಗಳಿದ್ದಲ್ಲಿ ಅಕ್ಟೋಬರ್.13 ರೊಳಗೆ ಪುರಸಭೆ ಕಾರ್ಯಾಲಯ ಕಮಲಾಪುರ, ಜಿಲ್ಲಾ ನಗರಾಭಿವೃದ್ಧಿ ಕೋಶ ಕಚೇರಿಗಳಲ್ಲಿ, ಕಚೇರಿ ಸಮಯದಲ್ಲಿ ಸಲ್ಲಿಸಬಹುದು ಅವಧಿ ಮುಗಿದ ನಂತರ ಬಂದ ಆಕ್ಷೇಪಣೆಗಳನ್ನು ಸ್ವೀಕರಿಸುವುದಿಲ್ಲ ಎಂದು ಜಿಲ್ಲಾ ನಗರಾಭಿವೃದ್ಧಿಕೋಶದ ಯೋಜನಾ ನಿರ್ದೇಶಕರು ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande