ಶಿಕ್ಷಣ ಮತ್ತು ನಾವೀನ್ಯತೆ ಆಧಾರಿತ ಸಂಶೋಧನೆಯಿಂದ ಭಾರತ ಅಭಿವೃದ್ಧಿಯತ್ತ : ನಿತಿನ್ ಗಡ್ಕರಿ
ನವದೆಹಲಿ, 06 ಅಕ್ಟೋಬರ್ (ಹಿ.ಸ.) : ಆ್ಯಂಕರ್ : ಭಾರತದ ಶಕ್ತಿ ಅದರ ಪ್ರತಿಭಾವಂತ ಹಾಗೂ ಕೌಶಲ್ಯಪೂರ್ಣ ಯುವಕರಲ್ಲಿದೆ. ಈ ಶಕ್ತಿಯನ್ನು ಸಮರ್ಪಕ ಸಂಪನ್ಮೂಲಗಳು ಮತ್ತು ಅವಕಾಶಗಳೊಂದಿಗೆ ಸಂಪರ್ಕಿಸಿದರೆ, ಭಾರತವು ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾಗುವ ಗುರಿಯನ್ನು ತ್ವರಿತವಾಗಿ ಸಾಧಿಸಬಹುದು ಎಂದು ಕೇಂ
Gadkari


ನವದೆಹಲಿ, 06 ಅಕ್ಟೋಬರ್ (ಹಿ.ಸ.) :

ಆ್ಯಂಕರ್ : ಭಾರತದ ಶಕ್ತಿ ಅದರ ಪ್ರತಿಭಾವಂತ ಹಾಗೂ ಕೌಶಲ್ಯಪೂರ್ಣ ಯುವಕರಲ್ಲಿದೆ. ಈ ಶಕ್ತಿಯನ್ನು ಸಮರ್ಪಕ ಸಂಪನ್ಮೂಲಗಳು ಮತ್ತು ಅವಕಾಶಗಳೊಂದಿಗೆ ಸಂಪರ್ಕಿಸಿದರೆ, ಭಾರತವು ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾಗುವ ಗುರಿಯನ್ನು ತ್ವರಿತವಾಗಿ ಸಾಧಿಸಬಹುದು ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಹೇಳಿದರು.

ದೆಹಲಿ‌ನಲ್ಲಿ ನಡೆದ 20ನೇ ಎಫ್‌ಐಸಿಸಿಐ ಉನ್ನತ ಶಿಕ್ಷಣ ಶೃಂಗಸಭೆ – 2025 ರಲ್ಲಿ ಮಾತನಾಡಿದ ಅವರು, “ಶಿಕ್ಷಣ ಮತ್ತು ನಾವೀನ್ಯತೆ ಆಧಾರಿತ ಸಂಶೋಧನೆಯೇ ದೇಶದ ನಿಜವಾದ ಪ್ರಗತಿಯ ದಾರಿ. ಯಾವುದೇ ರಾಷ್ಟ್ರದ ಭವಿಷ್ಯ ಅದರ ಉನ್ನತ ಶಿಕ್ಷಣದ ಮೇಲೆ ನಿಂತಿದೆ,” ಎಂದು ಹೇಳಿದರು.

ಪ್ರಪಂಚದಾದ್ಯಂತ ಅಭಿವೃದ್ಧಿ ಹೊಂದಿದ ದೇಶಗಳು ಶಿಕ್ಷಣ, ಸಂಶೋಧನೆ ಮತ್ತು ನಾವೀನ್ಯತೆಯ ಮೂಲಕವೇ ತಮ್ಮ ಶಕ್ತಿಯನ್ನು ನಿರ್ಮಿಸಿಕೊಂಡಿವೆ. ನಮ್ಮ ಶಿಕ್ಷಣ ವ್ಯವಸ್ಥೆ ಭವಿಷ್ಯ ನಿರ್ದೇಶಿತವಾಗಿರಬೇಕು. ಜಿಲ್ಲೆ ಹಾಗೂ ರಾಜ್ಯ ಮಟ್ಟದಲ್ಲಿ ಸ್ಥಳೀಯ ಅಗತ್ಯಗಳು ಮತ್ತು ಸಂಪನ್ಮೂಲಗಳ ಆಧಾರದ ಮೇಲೆ ಸಂಶೋಧನೆ ನಡೆಯಬೇಕು. ವಿಶ್ವವಿದ್ಯಾಲಯಗಳು ತಮ್ಮ ಪ್ರದೇಶದ ಆರ್ಥಿಕ ಮತ್ತು ಸಾಮಾಜಿಕ ಅಗತ್ಯಗಳಿಗೆ ಅನುಗುಣವಾಗಿ ಶಿಕ್ಷಣವನ್ನು ರೂಪಿಸಿದರೆ, ಅದು ಸ್ಥಳೀಯ ಅಭಿವೃದ್ಧಿಗೆ ನೇರವಾಗಿ ನೆರವಾಗುತ್ತದೆ ಎಂದರು.

ಭಾರತವು ಹಿಂದಿನ ದಿನಗಳಲ್ಲಿ ದಿನಕ್ಕೆ ಕೇವಲ 2 ಕಿ.ಮೀ. ರಸ್ತೆ ನಿರ್ಮಿಸುತ್ತಿದ್ದರೆ, ಈಗ ಅದು ದಿನಕ್ಕೆ 40 ಕಿ.ಮೀ. ತಲುಪಿದೆ. ಮೆಟ್ರೋ, ಸುರಂಗ ಮತ್ತು ಸೇತುವೆ ಯೋಜನೆಗಳಲ್ಲಿ ಭಾರತವು ದೊಡ್ಡ ಹೆಜ್ಜೆ ಇಟ್ಟಿದ್ದರೂ, ಸುರಂಗ ನಿರ್ಮಾಣ ತಂತ್ರಜ್ಞಾನ ಮತ್ತು ಯಂತ್ರೋಪಕರಣಗಳ ಉತ್ಪಾದನೆಯಲ್ಲಿ ನಾವು ಇನ್ನೂ ಸ್ವಾವಲಂಬಿಗಳಾಗಿಲ್ಲ‌ ಎಂದು ಗಡ್ಕರಿ ಹೇಳಿದರು.

ಹೊಸ ತಂತ್ರಜ್ಞಾನ ಉದಾಹರಣೆಯಾಗಿ ಮಲೇಷ್ಯಾದಲ್ಲಿ ಅಭಿವೃದ್ಧಿಪಡಿಸಿದ ನೂತನ ನಿರ್ಮಾಣ ವಿಧಾನವನ್ನು ಉಲ್ಲೇಖಿಸಿ, ಇದರ ಮೂಲಕ ಸೇತುವೆ ಅಥವಾ ಮೆಟ್ರೋ ಕಂಬಗಳ ನಡುವಿನ ಅಂತರವನ್ನು 30 ಮೀಟರ್‌ನಿಂದ 120 ಮೀಟರ್‌ಗಳವರೆಗೆ ವಿಸ್ತರಿಸಬಹುದು. ಈ ತಂತ್ರವು ಸ್ಟೀಲ್ ಫೈಬರ್ ಪ್ರೀಕಾಸ್ಟ್ ರಚನೆಗಳ ಆಧಾರಿತವಾಗಿದ್ದು, ನಿರ್ಮಾಣ ವೆಚ್ಚವನ್ನು ಸುಮಾರು 25% ಕಡಿಮೆ ಮಾಡುತ್ತದೆ. “ಈ ತಂತ್ರವನ್ನು ಚೆನ್ನೈ ಮೆಟ್ರೋ ಯೋಜನೆಯಲ್ಲಿ ಅನುಸರಿಸಿದರೆ 15 ರಿಂದ 20 ಸಾವಿರ ಕೋಟಿ ರೂ.ಗಳ ಉಳಿತಾಯ ಸಾಧ್ಯ, ಎಂದು ಅವರು ತಿಳಿಸಿದ್ದಾರೆ.

ಭಾರತದ ಶಿಕ್ಷಣ ಸಂಸ್ಥೆಗಳು ಪದವಿಗಳ ವಿತರಣೆ ಕೇಂದ್ರಗಳಾಗಿ ಉಳಿಯಬಾರದು. ಅವು ಪ್ರಾಯೋಗಿಕ ಕೌಶಲ್ಯ, ಸಂಶೋಧನೆ ಮತ್ತು ನಾವೀನ್ಯತೆಗಳ ಹಬ್‌ಗಳಾಗಬೇಕು. ಮೂಲಸೌಕರ್ಯ ಅಭಿವೃದ್ಧಿಯನ್ನು ತಾಂತ್ರಿಕ ಸಂಶೋಧನೆ ಮತ್ತು ಕೌಶಲ್ಯ ಆಧಾರಿತ ಶಿಕ್ಷಣದೊಂದಿಗೆ ಸಂಯೋಜಿಸಿದರೆ ಮಾತ್ರ ರಾಷ್ಟ್ರದ ಪ್ರಗತಿ ವೇಗಗೊಳ್ಳುತ್ತದೆ ಎಂದು ನಿತಿನ್ ಗಡ್ಕರಿ ಹೇಳಿದರು.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande