ಬಿಹಾರ ವಿಧಾನ ಸಭೆ ಚುಣಾವಣೆಗೆ ಮುಹೂರ್ತ ನಿಗದಿ
ನವದೆಹಲಿ, 06 ಅಕ್ಟೋಬರ್ (ಹಿ.ಸ.) : ಆ್ಯಂಕರ್ : ಬಿಹಾರ ವಿಧಾನ ಸಭೆಗೆ ಚುನಾವಣೆ ದಿನಾಂಕವನ್ನು ಆಯೋಗವು ಇಂದು ಪ್ರಕಟಿಸಿದೆ. ಎರಡು ಹಂತದಲ್ಲಿ ಮತದಾನ ನಡೆಯಲಿದೆ. ಮೊದಲ ಹಂತವು ನವೆಂಬರ್ 6 ರಂದು, ನವೆಂಬರ್​ 11ಕ್ಕೆ ಎರಡನೇ ಹಂತದ ಮತದಾನ ನಡೆಯಲಿದೆ. ನವೆಂಬರ್​ 14ರಂದು ಮತ ಎಣಿಕೆ ನಡೆಯಲಿದೆ ಎಂದು ಚುನಾವ
EC


ನವದೆಹಲಿ, 06 ಅಕ್ಟೋಬರ್ (ಹಿ.ಸ.) :

ಆ್ಯಂಕರ್ : ಬಿಹಾರ ವಿಧಾನ ಸಭೆಗೆ ಚುನಾವಣೆ ದಿನಾಂಕವನ್ನು ಆಯೋಗವು ಇಂದು ಪ್ರಕಟಿಸಿದೆ. ಎರಡು ಹಂತದಲ್ಲಿ ಮತದಾನ ನಡೆಯಲಿದೆ. ಮೊದಲ ಹಂತವು ನವೆಂಬರ್ 6 ರಂದು, ನವೆಂಬರ್​ 11ಕ್ಕೆ ಎರಡನೇ ಹಂತದ ಮತದಾನ ನಡೆಯಲಿದೆ. ನವೆಂಬರ್​ 14ರಂದು ಮತ ಎಣಿಕೆ ನಡೆಯಲಿದೆ ಎಂದು ಚುನಾವಣಾ ಆಯೋಗ ಘೋಷಿಸಿದೆ.

ಬಿಹಾರದಲ್ಲಿ 7.43 ಕೋಟಿ ಮತದಾರರಿದ್ದು. 3.92 ಕೋಟಿ ಪುರುಷ ಮತದಾರರು, 3.50 ಮಹಿಳಾ ಮತದಾರರು, 1725 ತೃತೀಯ ಲಿಂಗಿ ಮತದಾರರು ಇದ್ದಾರೆ. ಯುವ ಮತದಾರರು 14 ಕೋಟಿ, 14 ಸಾವಿರ ಶತಾಯುಷಿ ಮತದಾರರು ಇದ್ದಾರೆ. ಒಟ್ಟು 90 ಸಾವಿರ ಮತಗಟ್ಟೆ ನಿರ್ಮಿಸಲಾಗುವುದು. 818 ಮತದಾರರಿಗೆ ಒಂದು ಮತಗಟ್ಟೆ ಇರಲಿದೆ ಎಂದು ಚುನಾವಣಾ ಆಯೋಗ ಮಾಹಿತಿ ನೀಡಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೇಂದ್ರ ಚುನಾವಣಾ ಆಯೋಗದ ಆಯುಕ್ತ ಜ್ಞಾನೇಶ್​ಕುಮಾರ್​, 22 ವರ್ಷಗಳ ಬಳಿಕ ರಾಜ್ಯದಲ್ಲಿ ಮತದಾರರ ಪಟ್ಟಿಯನ್ನು ಪರಿಷ್ಕರಣೆ ಮಾಡಲಾಗಿದೆ. ಅನರ್ಹರನ್ನು ಪಟ್ಟಿಯಿಂದ ಕೈಬಿಟ್ಟು ಪಾರದರ್ಶಕ ಚುನಾವಣೆ ನಡೆಸಲು ವೇದಿಕೆ ಸಿದ್ದಪಡಿಸಲಾಗಿದೆ ಸರಳ ಮತ್ತು ಸುಗಮ ಮತದಾನಕ್ಕೆ ಕಾನೂನು ಸುವ್ಯವಸ್ಥೆ ಎಲ್ಲ ಸಿದ್ಧತೆ ನಡೆಸಲಾಗಿದೆ ಎಂದರು.

243 ಸದಸ್ಯ ಬಲದ ಬಿಹಾರ ವಿಧಾನಸಭೆಯ ಅಧಿಕಾರಾವಧಿ ನವೆಂಬರ್ 22ರಂದು ಕೊನೆಗೊಳ್ಳಲಿದೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande