ಪುನೀತ್ ರಾಜ್‍ಕುಮಾರ್ 4ನೇ ಪುಣ್ಯಸ್ಮರಣೆ
ಬೆಂಗಳೂರು, 29 ಅಕ್ಟೋಬರ್ (ಹಿ.ಸ.) : ಆ್ಯಂಕರ್ : ಕರ್ನಾಟಕ ರತ್ನ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ 4ನೇ ಪುಣ್ಯಸ್ಮರಣೆಯ ಸಂದರ್ಭದಲ್ಲಿ ಇಂದು ಕಂಠೀರವ ಸ್ಟುಡಿಯೋ ಭಾವಪೂರ್ಣ ವಾತಾವರಣದಿಂದ ಕಂಗೊಳಿಸಿತು. ಪತ್ನಿ ಅಶ್ವಿನಿ ಪುನೀತ್ ರಾಜಕುಮಾರ್ ಅವರ ನೇತೃತ್ವದಲ್ಲಿ ದೊಡ್ಮನೆ ಕುಟುಂಬದವರು ಅಪ್ಪು ಸಮ
Commemoration


ಬೆಂಗಳೂರು, 29 ಅಕ್ಟೋಬರ್ (ಹಿ.ಸ.) :

ಆ್ಯಂಕರ್ : ಕರ್ನಾಟಕ ರತ್ನ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ 4ನೇ ಪುಣ್ಯಸ್ಮರಣೆಯ ಸಂದರ್ಭದಲ್ಲಿ ಇಂದು ಕಂಠೀರವ ಸ್ಟುಡಿಯೋ ಭಾವಪೂರ್ಣ ವಾತಾವರಣದಿಂದ ಕಂಗೊಳಿಸಿತು.

ಪತ್ನಿ ಅಶ್ವಿನಿ ಪುನೀತ್ ರಾಜಕುಮಾರ್ ಅವರ ನೇತೃತ್ವದಲ್ಲಿ ದೊಡ್ಮನೆ ಕುಟುಂಬದವರು ಅಪ್ಪು ಸಮಾಧಿಗೆ ಪೂಜೆ ಸಲ್ಲಿಸಿದರು. ಹಿರಿಯ ನಟ ಶಿವರಾಜಕುಮಾರ್–ಗೀತಾ ದಂಪತಿ, ರಾಘವೇಂದ್ರ ರಾಜ್‌ಕುಮಾರ್ ದಂಪತಿ, ಯುವರಾಜ್‌ಕುಮಾರ್ ಹಾಗೂ ವಿನಯ್ ರಾಜ್‌ಕುಮಾರ್ ಸೇರಿದಂತೆ ಕುಟುಂಬದ ಎಲ್ಲ ಸದಸ್ಯರು ಉಪಸ್ಥಿತರಿದ್ದರು.

ಪುನೀತ್ ರಾಜಕುಮಾರ ಇಷ್ಟವಾದ ತಿನಿಸುಗಳನ್ನು ಸಮಾಧಿಯ ಬಳಿ ಇಟ್ಟು ಪೂಜೆ ನೆರವೇರಿಸಲಾಯಿತು. ಬಿಳಿ ಮತ್ತು ಗುಲಾಬಿ ಹೂವುಗಳಿಂದ ಸಮಾಧಿಯನ್ನು ಅಲಂಕರಿಸಲಾಗಿತ್ತು.

ರಾಜ್ಯದ ಮೂಲೆ ಮೂಲೆಗಳಿಂದ ಸಾವಿರಾರು ಅಭಿಮಾನಿಗಳು ಕಂಠೀರವ ಸ್ಟುಡಿಯೋಗೆ ಆಗಮಿಸಿ “ಅಪ್ಪು ಅಪ್ಪು” ಎಂದು ಘೋಷಣೆಗಳೊಂದಿಗೆ ತಮ್ಮ ಪ್ರೀತಿಪಾತ್ರ ನಟನಿಗೆ ನಮನ ಸಲ್ಲಿಸಿದರು.

ಪೂಜೆ ಬಳಿಕ ಕುಟುಂಬಸ್ಥರು ಡಾ. ರಾಜ್‌ಕುಮಾರ್ ಮತ್ತು ಪಾರ್ವತಮ್ಮ ರಾಜ್‌ಕುಮಾರ್ ಸಮಾಧಿಗಳಿಗೆ ಸಹ ಪೂಜೆ ಸಲ್ಲಿಸಿದರು.

ಇಂದು ದಿನವಿಡೀ ಕಂಠೀರವ ಸ್ಟುಡಿಯೋ ಆವರಣದಲ್ಲಿ ಅನ್ನಸಂತರ್ಪಣೆ, ರಕ್ತದಾನ ಹಾಗೂ ನೇತ್ರದಾನ ಶಿಬಿರಗಳನ್ನು ಅಭಿಮಾನಿ ಸಂಘಟನೆಗಳು ಆಯೋಜಿಸಿದ್ದು, ಸಾವಿರಾರು ಜನರು ಭಾಗವಹಿಸಿದ್ದರು.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande