ದಾನಕ್ಕಾಗಿ ‘ರಾಮಾಯಣ’ ಶುಲ್ಕ ತ್ಯಜಿಸಿದ ಬಾಲಿವುಡ್ ವಿವೇಕ್ ಒಬೆರಾಯ್
ಮುಂಬಯಿ, 28 ಅಕ್ಟೋಬರ್ (ಹಿ.ಸ.) : ಆ್ಯಂಕರ್ : ಬಾಲಿವುಡ್ ನಟ ವಿವೇಕ್ ಒಬೆರಾಯ್ ತಮ್ಮ ಉದಾರ ಮನೋಭಾವದಿಂದ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ. ರಣಬೀರ್ ಕಪೂರ್ ಅಭಿನಯದ ಬಹುನಿರೀಕ್ಷಿತ ಚಿತ್ರ ‘ರಾಮಾಯಣ: ಭಾಗ 1’ ನಲ್ಲಿ ಪ್ರಮುಖ ಪಾತ್ರ ವಹಿಸಿರುವ ವಿವೇಕ್, ಈ ಚಿತ್ರದಿಂದ ಪಡೆದಿರುವ ಸಂಪೂರ್ಣ ಸಂಭಾವನೆಯನ್
Oberay


ಮುಂಬಯಿ, 28 ಅಕ್ಟೋಬರ್ (ಹಿ.ಸ.) :

ಆ್ಯಂಕರ್ : ಬಾಲಿವುಡ್ ನಟ ವಿವೇಕ್ ಒಬೆರಾಯ್ ತಮ್ಮ ಉದಾರ ಮನೋಭಾವದಿಂದ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ. ರಣಬೀರ್ ಕಪೂರ್ ಅಭಿನಯದ ಬಹುನಿರೀಕ್ಷಿತ ಚಿತ್ರ ‘ರಾಮಾಯಣ: ಭಾಗ 1’ ನಲ್ಲಿ ಪ್ರಮುಖ ಪಾತ್ರ ವಹಿಸಿರುವ ವಿವೇಕ್, ಈ ಚಿತ್ರದಿಂದ ಪಡೆದಿರುವ ಸಂಪೂರ್ಣ ಸಂಭಾವನೆಯನ್ನು ಕ್ಯಾನ್ಸರ್ ಪೀಡಿತ ಮಕ್ಕಳ ಚಿಕಿತ್ಸೆಗೆ ದಾನ ಮಾಡುವ ನಿರ್ಧಾರ ತೆಗೆದುಕೊಂಡಿದ್ದಾರೆ.

ಪ್ರಸ್ತುತ ತಮ್ಮ ಕಾಮಿಕ್ ಫ್ರಾಂಚೈಸ್ “ಮಸ್ತಿ 4” ಚಿತ್ರದ ಪ್ರಚಾರದಲ್ಲಿ ನಿರತರಾಗಿರುವ ವಿವೇಕ್, ಸಂದರ್ಶನವೊಂದರಲ್ಲಿ ಈ ಕುರಿತು ಮಾತನಾಡಿದರು. ಅವರು ಹೇಳಿದರು “ಈ ಚಿತ್ರಕ್ಕಾಗಿ ನನಗೆ ಒಂದು ಪೈಸೆಯೂ ಬೇಡ ಎಂದು ನಿರ್ಮಾಪಕ ನಮಿತ್ ಮಲ್ಹೋತ್ರಾಗೆ ಸ್ಪಷ್ಟವಾಗಿ ತಿಳಿಸಿದ್ದೆ. ಆ ಹಣವನ್ನು ಕ್ಯಾನ್ಸರ್‌ನಿಂದ ಬಳಲುತ್ತಿರುವ ಮಕ್ಕಳ ಚಿಕಿತ್ಸೆಗೆ ಬಳಸಬೇಕು. ಅದೇ ನಿಜವಾದ ಗಳಿಕೆ” ಎಂದು ಭಾವನಾತ್ಮಕವಾಗಿ ಹೇಳಿದರು.

ವಿವೇಕ್ ಒಬೆರಾಯ್ ‘ರಾಮಾಯಣ: ಭಾಗ 1’ ನಲ್ಲಿ ವಿಭೀಷಣನ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ — ಧರ್ಮದ ಮಾರ್ಗವನ್ನು ಆರಿಸಿಕೊಂಡು ತನ್ನ ಸಹೋದರನ ವಿರುದ್ಧ ನಿಲ್ಲುವ ಪಾತ್ರ. ಚಿತ್ರದಲ್ಲಿನ ಈ ಪಾತ್ರದಂತೆ, ನಿಜ ಜೀವನದಲ್ಲಿಯೂ ಮಾನವೀಯತೆ ಪರ ಹೆಜ್ಜೆ ಇಟ್ಟಿರುವ ವಿವೇಕ್, ಸಾಮಾಜಿಕ ಜವಾಬ್ದಾರಿಯ ಮೆರೆದಿದ್ದಾರೆ.

ನವೆಂಬರ್ 21ರಂದು ಬಿಡುಗಡೆಯಾಗಲಿರುವ “ಮಸ್ತಿ 4” ಚಿತ್ರ ಕುರಿತು ಪ್ರೇಕ್ಷಕರಲ್ಲಿ ಉತ್ಸಾಹ ಹೆಚ್ಚಾಗಿದೆ. ಅಲ್ಲದೆ, ವಿವೇಕ್ ಶೀಘ್ರದಲ್ಲೇ ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ ಪ್ರಭಾಸ್ ಮತ್ತು ತೃಪ್ತಿ ದಿಮ್ರಿ ಅಭಿನಯದ “ಸ್ಪಿರಿಟ್” ಚಿತ್ರದಲ್ಲಿಯೂ ಕಾಣಿಸಿಕೊಳ್ಳಲಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande