ಭಾರತ–ಯುರೋಪ್ ಒಕ್ಕೂಟ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಶೀಘ್ರ ಸಹಿ ಸಾಧ್ಯತೆ
ನವದೆಹಲಿ, 29 ಅಕ್ಟೋಬರ್ (ಹಿ.ಸ.) : ಆ್ಯಂಕರ್ : ಭಾರತ ಮತ್ತು ಯುರೋಪಿಯನ್ ಒಕ್ಕೂಟದ ನಡುವಿನ ಬಹುಕಾಲದ ನಿರೀಕ್ಷಿತ ಮುಕ್ತ ವ್ಯಾಪಾರ ಒಪ್ಪಂದ ಕುರಿತು ನಡೆದ ಚರ್ಚೆಗಳು ಅಂತಿಮ ಹಂತಕ್ಕೇರಿವೆ. ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಅವರ ಬ್ರಸೆಲ್ಸ್ ಭೇಟಿಯ ಸಂದರ್ಭದಲ್ಲಿ ಈ ಕುರಿತು ಸಕಾರಾತ್
Mou


ನವದೆಹಲಿ, 29 ಅಕ್ಟೋಬರ್ (ಹಿ.ಸ.) :

ಆ್ಯಂಕರ್ : ಭಾರತ ಮತ್ತು ಯುರೋಪಿಯನ್ ಒಕ್ಕೂಟದ ನಡುವಿನ ಬಹುಕಾಲದ ನಿರೀಕ್ಷಿತ ಮುಕ್ತ ವ್ಯಾಪಾರ ಒಪ್ಪಂದ ಕುರಿತು ನಡೆದ ಚರ್ಚೆಗಳು ಅಂತಿಮ ಹಂತಕ್ಕೇರಿವೆ. ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಅವರ ಬ್ರಸೆಲ್ಸ್ ಭೇಟಿಯ ಸಂದರ್ಭದಲ್ಲಿ ಈ ಕುರಿತು ಸಕಾರಾತ್ಮಕ ವಾತಾವರಣದ ಮಾತುಕತೆಗಳಾಗಿದೆ.

ಗೋಯಲ್ ಅವರು ಯುರೋಪಿಯನ್ ಕಮಿಷನ್‌ನ ವಾಣಿಜ್ಯ ಮತ್ತು ಆರ್ಥಿಕ ಭದ್ರತಾ ಕಮಿಷನರ್ ಮಾರೋಸ್ ಸೆಫ್ಕೋವಿಕ್ ಅವರೊಂದಿಗೆ 26 ರಿಂದ 28 ಅಕ್ಟೋಬರ್‌ವರೆಗೆ ಚರ್ಚೆ ನಡೆಸಿದರು. ಎರಡೂ ಕಡೆಯವರು ಈ ವರ್ಷ ಅಂತ್ಯದೊಳಗೆ ಒಪ್ಪಂದ ತಲುಪುವ ಗುರಿಯನ್ನು ದೃಢಪಡಿಸಿದರು.

ಭಾರತವು ಒಪ್ಪಂದವು ಸಮತೋಲಿತ, ಸಮಾನ ಹಾಗೂ ಪಾರದರ್ಶಕವಾಗಿರಬೇಕು ಎಂದು ಒತ್ತಿಹೇಳಿದ್ದು, ಸುಂಕ ಮತ್ತು ಸುಂಕೇತರ ಅಡೆತಡೆಗಳನ್ನು ಸಮನ್ವಯಗೊಳಿಸುವ ಅಗತ್ಯವಿದೆ ಎಂದು ತಿಳಿಸಿದೆ. ಕಾರ್ಮಿಕ–ತೀವ್ರ ವಲಯಗಳಿಗೆ ವಿಶೇಷ ಸಡಿಲಿಕೆ ನೀಡಬೇಕೆಂದು ಗೋಯಲ್ ಒತ್ತಾಯ ಮಾಡಿದರು.

ಉಕ್ಕು, ಆಟೋ, ಹಾಗೂ ಕಾರ್ಬನ್ ಬಾರ್ಡರ್ ಅಡ್ಜಸ್ಟ್ಮೆಂಟ್ ಮೆಕ್ಯಾನಿಸಂ ಕುರಿತಾಗಿ ಮುಂದಿನ ವಾರ ತಾಂತ್ರಿಕ ಮಟ್ಟದ ಚರ್ಚೆಗಳು ನಿಗದಿಯಾಗಿದೆ. ಒಪ್ಪಂದದ ಮೂಲಕ ಭಾರತ–ಇಯು ಆರ್ಥಿಕ ಸಹಕಾರಕ್ಕೆ ಹೊಸ ಬಲ ಸಿಗುವ ನಿರೀಕ್ಷೆಯಿದೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande