ಶಂಕಿತ ಭಯೋತ್ಪಾದಕನ ಮನೆಯಲ್ಲಿ ಬಾಂಬ್ ತಯಾರಿಕಾ ಮಾಹಿತಿಯುಳ್ಳ ಪುಸ್ತಕ ಪತ್ತೆ
ಮುಂಬಯಿ, 29 ಅಕ್ಟೋಬರ್ (ಹಿ.ಸ.) : ಆ್ಯಂಕರ್ : ಅಲ್-ಖೈದಾ ಸಂಘಟನೆಯೊಂದಿಗೆ ಸಂಪರ್ಕ ಹೊಂದಿರುವ ಶಂಕಿತ ಭಯೋತ್ಪಾದಕ ಜುಬೈರ್ ಹಂಗರ್ಗೇಕರ್ (35) ಪುಣೆಯ ಮನೆಯಲ್ಲಿ ಬಾಂಬ್ ತಯಾರಿಕೆ ಹಾಗೂ ಎಕೆ-47 ರೈಫಲ್ ನಿರ್ವಹಣೆಗೆ ಸಂಬಂಧಿಸಿದ ಮಾಹಿತಿಯುಳ್ಳ ದಾಖಲೆಗಳು ಮತ್ತು ಅಲ್-ಖೈದಾ ಇನ್‌ಸ್ಪೈರ್ ನಿಯತಕಾಲಿಕೆ ಪತ
detection


ಮುಂಬಯಿ, 29 ಅಕ್ಟೋಬರ್ (ಹಿ.ಸ.) :

ಆ್ಯಂಕರ್ : ಅಲ್-ಖೈದಾ ಸಂಘಟನೆಯೊಂದಿಗೆ ಸಂಪರ್ಕ ಹೊಂದಿರುವ ಶಂಕಿತ ಭಯೋತ್ಪಾದಕ ಜುಬೈರ್ ಹಂಗರ್ಗೇಕರ್ (35) ಪುಣೆಯ ಮನೆಯಲ್ಲಿ ಬಾಂಬ್ ತಯಾರಿಕೆ ಹಾಗೂ ಎಕೆ-47 ರೈಫಲ್ ನಿರ್ವಹಣೆಗೆ ಸಂಬಂಧಿಸಿದ ಮಾಹಿತಿಯುಳ್ಳ ದಾಖಲೆಗಳು ಮತ್ತು ಅಲ್-ಖೈದಾ ಇನ್‌ಸ್ಪೈರ್ ನಿಯತಕಾಲಿಕೆ ಪತ್ತೆಯಾಗಿವೆ.

ಎಟಿಎಸ್ ಅಧಿಕಾರಿಗಳು ಹಂಗರ್ಗೇಕರ್ ನನ್ನು ಪುಣೆಯ ಕೊಂಡ್ವಾ ಪ್ರದೇಶದಿಂದ ಬಂಧಿಸಿ ನವೆಂಬರ್ 4 ರವರೆಗೆ ವಶಕ್ಕೆ ಪಡೆದಿದ್ದಾರೆ. ಆತನ ಸಹಚರನನ್ನೂ ಪುಣೆ ರೈಲ್ವೆ ನಿಲ್ದಾಣದಲ್ಲಿ ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ.

ತನಿಖೆಯಲ್ಲಿ ಬಿನ್ ಲಾಡೆನ್ ಉರ್ದು ಭಾಷಣದ ಅನುವಾದ, ಹಾಗೂ ಅಲ್-ಖೈದಾ ಸಂಬಂಧಿತ ಡಿಜಿಟಲ್ ವಿಷಯಗಳು ವಶಪಡಿಸಿಕೊಳ್ಳಲಾಗಿದೆ. ಹಂಗರ್ಗೇಕರ್ ಐಟಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು, ಅಲ್-ಖೈದಾ ಸದಸ್ಯರೊಂದಿಗೆ ಸಂಪರ್ಕ ಮತ್ತು ಈ ದಾಖಲೆಗಳನ್ನು ಯಾವ ಉದ್ದೇಶಕ್ಕಾಗಿ ಸಂಗ್ರಹಿಸಿದ್ದ ಎಂಬುದರ ಕುರಿತು ಎಟಿಎಸ್ ತನಿಖೆ ಮುಂದುವರಿಸಿದೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande