
ನವದೆಹಲಿ, 29 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ದೆಹಲಿ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸೇರಿದಂತೆ ಮೂವರು ಆರೋಪಿಗಳ ವಿರುದ್ಧ ಸರ್ಕಾರಿ ಆಸ್ತಿ ವಿರೂಪಗೊಳಿಸಿದ ಪ್ರಕರಣದ ತನಿಖೆಯನ್ನು ತ್ವರಿತಗೊಳಿಸಲು ದೆಹಲಿ ಪೊಲೀಸರಿಗೆ ರೌಸ್ ಅವೆನ್ಯೂ ನ್ಯಾಯಾಲಯ ನಿರ್ದೇಶನ ನೀಡಿದೆ. ಡಿಸೆಂಬರ್ 3ರೊಳಗೆ ತನಿಖೆಯ ಸ್ಥಿತಿವಿವರ ಸಲ್ಲಿಸಲು ನ್ಯಾಯಾಲಯ ಆದೇಶಿಸಿದೆ.
2019ರಲ್ಲಿ ದಾಖಲಾಗಿದ ಈ ಪ್ರಕರಣದಲ್ಲಿ ಕೇಜ್ರಿವಾಲ್, ಮಾಜಿ ಶಾಸಕ ಗುಲಾಬ್ ಸಿಂಗ್ ಮತ್ತು ಆಗಿನ ಕೌನ್ಸಿಲರ್ ನಿಕಿತಾ ಶರ್ಮಾ ಆರೋಪಿಗಳಾಗಿದ್ದಾರೆ. ದೂರುದಾರ ಶಿವಕುಮಾರ್ ಸಕ್ಸೇನಾ ಅವರ ಅರ್ಜಿಯ ಆಧಾರದ ಮೇಲೆ ನ್ಯಾಯಾಲಯ ಮಾರ್ಚ್ 11ರಂದು ಎಫ್‌ಐಆರ್ ದಾಖಲಿಸಲು ಆದೇಶಿಸಿತ್ತು.
ತನಿಖಾಧಿಕಾರಿಯ ಪ್ರಕಾರ ಕೇಜ್ರಿವಾಲ್ ದೆಹಲಿಯಲ್ಲಿ ಇಲ್ಲದ ಕಾರಣ ವಿಚಾರಣೆ ವಿಳಂಬವಾಗಿದೆ. ಆದರೆ ನ್ಯಾಯಾಲಯ ತನಿಖೆಯನ್ನು ಶೀಘ್ರ ಪೂರ್ಣಗೊಳಿಸಲು ಸೂಚಿಸಿದೆ. 2019ರಲ್ಲಿ ದ್ವಾರಕಾದಲ್ಲಿ ಅಕ್ರಮ ಜಾಹೀರಾತು ಹೋರ್ಡಿಂಗ್‌ಗಳಿಂದ ಸಾರ್ವಜನಿಕ ಆಸ್ತಿ ಹಾನಿಗೊಳಿಸಿರುವ ಆರೋಪ ಈ ಪ್ರಕರಣಕ್ಕೆ ಸಂಬಂಧಿಸಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa