ಷೇರು ಮಾರುಕಟ್ಟೆ ಸ್ಥಿರ ಧೋರಣೆ ; ಸೆನ್ಸೆಕ್ಸ್, ನಿಫ್ಟಿ ಅಲ್ಪ ಕುಸಿತ
ನವದೆಹಲಿ, 28 ಅಕ್ಟೋಬರ್ (ಹಿ.ಸ.) : ಆ್ಯಂಕರ್ : ಆರಂಭಿಕ ವಹಿವಾಟಿನಲ್ಲಿ ದೇಶೀಯ ಷೇರು ಮಾರುಕಟ್ಟೆಗಳು ಸ್ಥಿರವಾಗಿವೆ. ಬೆಳಿಗ್ಗೆ 10 ಗಂಟೆಗೆ ಸೆನ್ಸೆಕ್ಸ್ 43.80 ಅಂಕಗಳು (0.052%) ಇಳಿಕೆ ಕಂಡು 84,735.04 ಅಂಕಗಳಲ್ಲಿ, ನಿಫ್ಟಿ 9.30 ಅಂಕಗಳ (0.04%) ಕುಸಿತದಿಂದ 25,956.75 ಅಂಕಗಳಲ್ಲಿ ವಹಿವಾಟು ನ
Stock market


ನವದೆಹಲಿ, 28 ಅಕ್ಟೋಬರ್ (ಹಿ.ಸ.) :

ಆ್ಯಂಕರ್ : ಆರಂಭಿಕ ವಹಿವಾಟಿನಲ್ಲಿ ದೇಶೀಯ ಷೇರು ಮಾರುಕಟ್ಟೆಗಳು ಸ್ಥಿರವಾಗಿವೆ. ಬೆಳಿಗ್ಗೆ 10 ಗಂಟೆಗೆ ಸೆನ್ಸೆಕ್ಸ್ 43.80 ಅಂಕಗಳು (0.052%) ಇಳಿಕೆ ಕಂಡು 84,735.04 ಅಂಕಗಳಲ್ಲಿ, ನಿಫ್ಟಿ 9.30 ಅಂಕಗಳ (0.04%) ಕುಸಿತದಿಂದ 25,956.75 ಅಂಕಗಳಲ್ಲಿ ವಹಿವಾಟು ನಡೆಸುತ್ತಿತ್ತು.

ಹಿಂಡಾಲ್ಕೊ, ಟಾಟಾ ಸ್ಟೀಲ್, ಎಸ್‌ಬಿಐ, ಎಲ್&T ಹಾಗೂ ಎಸ್‌ಬಿಐ ಲೈಫ್ ಲಾಭದಲ್ಲಿದ್ದರೆ, ಐಸಿಐಸಿಐ ಬ್ಯಾಂಕ್, ಬಜಾಜ್ ಫೈನಾನ್ಸ್, ಒಎನ್‌ಜಿಸಿ ನಷ್ಟದಲ್ಲಿವೆ. ಒಟ್ಟು 2,244 ಷೇರುಗಳಲ್ಲಿ 1,349 ಹಸಿರು ವಲಯದಲ್ಲಿದ್ದು, 895 ಕೆಂಪು ವಲಯದಲ್ಲಿ ವಹಿವಾಟು ನಡೆಸುತ್ತಿವೆ.

ಸೋಮವಾರದ ವಹಿವಾಟಿನಲ್ಲಿ ಸೆನ್ಸೆಕ್ಸ್ 84,778.84 ಅಂಕಗಳಿಗೆ ಮತ್ತು ನಿಫ್ಟಿ 25,966.05 ಅಂಕಗಳಿಗೆ ಏರಿಕೆಯಾಗಿತ್ತು.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande