
ನವದೆಹಲಿ, 24 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ದೇಶೀಯ ಚಿನಿವಾರ ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ಇಳಿಕೆ ಮುಂದುವರಿದಿದ್ದು, ಇಂದು ಸತತ ಐದನೇ ದಿನವೂ ಚಿನ್ನ ಅಗ್ಗವಾಗಿದೆ.
ಇಂದಿನ ವಹಿವಾಟಿನಲ್ಲಿ ಚಿನ್ನದ ಬೆಲೆ 10 ಗ್ರಾಂಗೆ ₹750 ರಿಂದ ₹810 ರವರೆಗೆ ಇಳಿಕೆಯಾಗಿದೆ. 24 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ ₹1,25,070 ರಿಂದ ₹1,25,220 ನಡುವೆ, 22 ಕ್ಯಾರೆಟ್ ಚಿನ್ನದ ಬೆಲೆ ₹1,14,640 ರಿಂದ ₹1,14,790 ರವರೆಗೆ ಮಾರಾಟವಾಗುತ್ತಿದೆ.
ದೆಹಲಿಯಲ್ಲಿ ಚಿನ್ನದ ಬೆಲೆ ಕ್ರಮವಾಗಿ ₹1,25,220 (24 ಕ್ಯಾರೆಟ್) ಮತ್ತು ₹1,14,790 (22 ಕ್ಯಾರೆಟ್) ದಾಖಲಾಗಿದ್ದು, ಮುಂಬೈ ಮತ್ತು ಚೆನ್ನೈ ಮಾರುಕಟ್ಟೆಗಳಲ್ಲಿ ಕ್ರಮವಾಗಿ ₹1,25,070 ಮತ್ತು ₹1,14,640 ರಂತೆ ಚಿನ್ನ ಮಾರಾಟವಾಗಿದೆ.
ಬೆಳ್ಳಿ ಬೆಲೆಯು ಕುಸಿತ ಕಂಡಿದ್ದು, ದೆಹಲಿ ಮಾರುಕಟ್ಟೆಯಲ್ಲಿ ಪ್ರತಿ ಕಿಲೋಗ್ರಾಂಗೆ ₹1,58,900 ಕ್ಕೆ ತಲುಪಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa