
ನವದೆಹಲಿ, 27 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ಇಂದಿನ ಆರಂಭಿಕ ವಹಿವಾಟಿನಲ್ಲಿ ದೇಶೀಯ ಷೇರು ಮಾರುಕಟ್ಟೆ ಏರಿಕೆ ಕಂಡಿದೆ. ಬೆಳಿಗ್ಗೆ ವಹಿವಾಟು ಪ್ರಾರಂಭವಾದ ಬಳಿಕ ಖರೀದಿ ಬೆಂಬಲ ಹೆಚ್ಚಳ ಕಂಡು, ಸೆನ್ಸೆಕ್ಸ್ 570.06 ಪಾಯಿಂಟ್‌ಗಳ ಏರಿಕೆಯೊಂದಿಗೆ 84,781.94 ಕ್ಕೆ ಮತ್ತು ನಿಫ್ಟಿ 168.40 ಪಾಯಿಂಟ್‌ಗಳ ಏರಿಕೆಯೊಂದಿಗೆ 25,963.55 ಕ್ಕೆ ತಲುಪಿದೆ.
ಎಸ್‌ಬಿಐ ಲೈಫ್, ರಿಲಯನ್ಸ್, ಭಾರ್ತಿ ಏರ್‌ಟೆಲ್, ಟಾಟಾ ಸ್ಟೀಲ್ ಹಾಗೂ ಟಾಟಾ ಮೋಟಾರ್ಸ್ ಮುಂತಾದ ಷೇರುಗಳು ಶೇ. 1 ರಿಂದ 3ರ ವರೆಗೆ ಲಾಭ ಕಂಡಿವೆ. ಇನ್ಫೋಸಿಸ್, ಕೋಟಕ್ ಮಹೀಂದ್ರಾ ಹಾಗೂ ಬಜಾಜ್ ಫೈನಾನ್ಸ್ ಷೇರುಗಳಲ್ಲಿ ಸ್ವಲ್ಪ ನಷ್ಟ ದಾಖಲಾಗಿದೆ.
ಒಟ್ಟಾರೆ 2,626 ಷೇರುಗಳಲ್ಲಿ 1,672 ಹಸಿರು ವಲಯದಲ್ಲಿದ್ದರೆ, 954 ಷೇರುಗಳು ಕೆಂಪು ವಲಯದಲ್ಲಿವೆ. ಸೆನ್ಸೆಕ್ಸ್‌ನ 30 ಷೇರುಗಳಲ್ಲಿ 22 ಲಾಭದಲ್ಲಿದ್ದು, ಮಾರುಕಟ್ಟೆಯಲ್ಲಿ ಖರೀದಿ ಚಟುವಟಿಕೆ ಬಲವಾಗಿ ಮುಂದುವರಿದಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa