
ಸಾರ್ಬ್ರೂಕೆನ್, 28 ಅಕ್ಟೋಬರ್ (ಹಿ.ಸ.):
ಆ್ಯಂಕರ್ : ಜರ್ಮನಿಯ ಹಿಲೋ ಓಪನ್ ಸೂಪರ್ 500 ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಭಾರತೀಯ ಶಟ್ಲರ್‌ಗಳು ಕಠಿಣ ಡ್ರಾವನ್ನು ಎದುರಿಸಲಿದ್ದಾರೆ. ಈ ಪಂದ್ಯಾವಳಿಯ ಬಹುಮಾನ ಮೊತ್ತ US$ 4,75,000.
ಪುರುಷರ ಸಿಂಗಲ್ಸ್‌ನಲ್ಲಿ ಲಕ್ಷ್ಯ ಸೇನ್ ಮೊದಲ ಸುತ್ತಿನಲ್ಲಿ ಫ್ರಾನ್ಸ್‌ನ ಕ್ರಿಸ್ಟೊ ಪೊಪೊವ್ ಅವರನ್ನು ಎದುರಿಸಲಿದ್ದಾರೆ. ಕಿಡಂಬಿ ಶ್ರೀಕಾಂತ್ ತಮ್ಮ ದೇಶದವರಾದ ಕಿರಣ್ ಜಾರ್ಜ್ ವಿರುದ್ಧ ಕಣಕ್ಕಿಳಿಯಲಿದ್ದಾರೆ. ತರುಣ್ ಮಾನೆಪಲ್ಲಿ ಇಂಡೋನೇಷ್ಯಾದ ಜೊನಾಥನ್ ಕ್ರಿಸ್ಟಿ ಅವರನ್ನು ಎದುರಿಸಲಿದ್ದಾರೆ.
ಮಹಿಳಾ ವಿಭಾಗದಲ್ಲಿ ಅನ್ಮೋಲ್ ಖಾರ್ಬ್ ಡೆನ್ಮಾರ್ಕ್‌ನ ಜೂಲಿ ಜಾಕೋಬ್ಸೆನ್, ಉನ್ನತಿ ಹೂಡಾ ಬ್ರೆಜಿಲ್‌ನ ಜೂಲಿಯಾನ ವಿಯೆರಾ, ಹಾಗೂ ಅನುಪಮಾ ಉಪಾಧ್ಯಾಯ ಉಕ್ರೇನ್‌ನ ಪೋಲಿನಾ ಬುಹ್ರೋವಾ ವಿರುದ್ಧ ಆಡಲಿದ್ದಾರೆ. ಆಕರ್ಷಿ ಕಶ್ಯಪ್ ಟರ್ಕಿಯ ನೆಸ್ಲಿಹಾನ್ ಅರಿನ್ ಅವರನ್ನು ಎದುರಿಸಲಿದ್ದಾರೆ.
ಪುರುಷರ ಡಬಲ್ಸ್‌ನಲ್ಲಿ ಪೃಥ್ವಿ ಕೃಷ್ಣಮೂರ್ತಿ ರಾಯ್ – ಸಾಯಿ ಪ್ರತೀಕ್ ಕೆ. ಜೋಡಿ ಫ್ರೆಂಚ್ ಪೊಪೊವ್ ಸಹೋದರರು ಎದುರು ಸೆಣಸಲಿದ್ದಾರೆ. ಮಿಶ್ರ ಡಬಲ್ಸ್‌ನಲ್ಲಿ ರೋಹನ್ ಕಪೂರ್ – ರುತ್ವಿಕಾ ಶಿವಾನಿ ಗದ್ದೆ ಕೆನಡಾದ ಜೋನಾಥನ್ ಲೈ – ಕ್ರಿಸ್ಟಲ್ ಲೈ ವಿರುದ್ಧ ಆಡಲಿದ್ದಾರೆ.
ಭಾರತೀಯ ತಂಡವು ಮೊದಲ ಸುತ್ತಿನಿಂದಲೇ ಕಠಿಣ ಪಂದ್ಯಾವಳಿಯನ್ನು ಎದುರಿಸಲಿದ್ದು, ಉತ್ತಮ ಪ್ರದರ್ಶನದ ಭರವಸೆಯಲ್ಲಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa