
ಸಿಡ್ನಿ, 25 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ ಮೂರನೇ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ ನಾಯಕ ಮಿಚೆಲ್ ಮಾರ್ಷ್ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದ್ದಾರೆ. ಸರಣಿಯಲ್ಲಿ ಈಗಾಗಲೇ 2-0 ಮುನ್ನಡೆ ಪಡೆದಿರುವ ಆಸ್ಟ್ರೇಲಿಯಾ, ಇಂದು ಸರಣಿ
ಕ್ಲೀನ್ ಸ್ವೀಪ್ ಸಾಧಿಸಲು ಉತ್ಸಾಹದಲ್ಲಿದೆ
ಟಾಸ್ ಬಳಿಕ ಮಾರ್ಷ್ ಮಾತನಾಡಿ, ಮೈದಾನ ಬ್ಯಾಟಿಂಗ್‌ಗೆ ಸೂಕ್ತವಾಗಿದೆ ಮತ್ತು ಹವಾಮಾನವೂ ಉತ್ತಮವಾಗಿದೆ. ನಮ್ಮ ಯುವ ತಂಡದ ಆಟಗಾರರು ಕಳೆದ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಇಂದು ಸರಣಿಯನ್ನು 3-0 ಅಂತರದಿಂದ ಗೆಲ್ಲುವ ವಿಶ್ವಾಸವಿದೆ.” ನಾಥನ್ ಎಲ್ಲಿಸ್ ತಂಡಕ್ಕೆ ಮರಳಿದ್ದು, ಕ್ಸೇವಿಯರ್ ಬಾರ್ಟ್ಲೆಟ್ ಅವರನ್ನು ಕೈಬಿಡಲಾಗಿದೆ ಎಂದರು.
ಭಾರತದ ನಾಯಕ ಶುಭಮನ್ ಗಿಲ್ ಅವರು ಟಾಸ್ ಸೋತ ನಂತರ ಪ್ರತಿಕ್ರಿಯೆ ನೀಡುತ್ತಾ, “ನಾವು ಟಾಸ್ ಗೆದ್ದಿದ್ದರೆ, ನಾವೂ ಮೊದಲು ಬೌಲಿಂಗ್ ಮಾಡುತ್ತಿದ್ದೆವು. ಕಳೆದ ಪಂದ್ಯದಲ್ಲಿ ರನ್‌ಗಳಿದ್ದರೂ ಅವಕಾಶಗಳನ್ನು ಬಳಸಿಕೊಳ್ಳಲು ಸಾಧ್ಯವಾಗಲಿಲ್ಲ. ಇಂದು ನಾವು ಎರಡು ಬದಲಾವಣೆ ಮಾಡಿದ್ದೇವೆ ಕುಲದೀಪ್ ಯಾದವ್ ಮತ್ತು ಪ್ರಸಿದ್ಧ್ ಕೃಷ್ಣ ಅವರನ್ನು ಸೇರಿಸಿದ್ದೇವೆ; ಅರ್ಶ್‌ದೀಪ್ ಸಿಂಗ್ ಮತ್ತು ನಿತೀಶ್ ರೆಡ್ಡಿ ಅವರನ್ನು ಹೊರಗಿಟ್ಟಿದ್ದೇವೆ,” ಎಂದು ಹೇಳಿದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa