ಕಾಂತಾರ ಚಿತ್ರ 2025 ರ ಅತ್ಯಧಿಕ ಗಳಿಕೆ ದಾಖಲಿಸಿ ಐತಿಹಾಸಿಕ ಸಾಧನೆ
ಬೆಂಗಳೂರು, 24 ಅಕ್ಟೋಬರ್ (ಹಿ.ಸ.) : ಆ್ಯಂಕರ್ : ಹೊಂಬಾಳೆ ಫಿಲ್ಮ್ಸ್ ನಿರ್ಮಿಸಿದ ‘ಕಾಂತಾರ’ ಅಧ್ಯಾಯ ೧ ಸಿನಿಮಾ ಕನ್ನಡ ಚಿತ್ರರಂಗದಲ್ಲಿ ಸುವರ್ಣಾಕ್ಷರಗಳಲ್ಲಿ ದಾಖಲೆಗಳನ್ನು ನಿರ್ಮಿಸುತ್ತಿದೆ. ರಾಜ್ಯಾದ್ಯಂತ ಹೌಸ್‌ಫುಲ್ ಪ್ರದರ್ಶನ ಮುಂದುವರಿಯುತ್ತಿದ್ದು, ಬಿಡುಗಡೆಯಾದ ಮೂರನೇ ವಾರವೂ ಚಿತ್ರಮಂದಿರಗಳು
Kantara


ಬೆಂಗಳೂರು, 24 ಅಕ್ಟೋಬರ್ (ಹಿ.ಸ.) :

ಆ್ಯಂಕರ್ : ಹೊಂಬಾಳೆ ಫಿಲ್ಮ್ಸ್ ನಿರ್ಮಿಸಿದ ‘ಕಾಂತಾರ’ ಅಧ್ಯಾಯ ೧ ಸಿನಿಮಾ ಕನ್ನಡ ಚಿತ್ರರಂಗದಲ್ಲಿ ಸುವರ್ಣಾಕ್ಷರಗಳಲ್ಲಿ ದಾಖಲೆಗಳನ್ನು ನಿರ್ಮಿಸುತ್ತಿದೆ. ರಾಜ್ಯಾದ್ಯಂತ ಹೌಸ್‌ಫುಲ್ ಪ್ರದರ್ಶನ ಮುಂದುವರಿಯುತ್ತಿದ್ದು, ಬಿಡುಗಡೆಯಾದ ಮೂರನೇ ವಾರವೂ ಚಿತ್ರಮಂದಿರಗಳು ಪ್ರೇಕ್ಷಕರಿಂದ ತುಂಬಿಕೊಂಡಿವೆ.

ಕಾಂತಾರ ಸಿನಿಮಾ ಭಾರತೀಯ ಚಿತ್ರರಂಗದಲ್ಲಿ 2025 ರ ಅತ್ಯಧಿಕ ಗಳಿಕೆ ದಾಖಲೆ ಬರೆದಿದ್ದು, ವಿಶ್ವದಾದ್ಯಂತ 818 ಕೋಟಿ ರೂ. ಗಳಿಕೆ ಮಾಡಿಕೊಂಡಿದೆ. ಇದರಿಂದಾಗಿ, ಕರ್ನಾಟಕ ರಾಜ್ಯದಲ್ಲಿ 250 ಕೋಟಿ ಗಳಿಕೆ ಮೀರಿ ಕನ್ನಡ ಚಿತ್ರವೊಂದರಿಂದ ಸಾಧಿಸಲಾದ ಐತಿಹಾಸಿಕ ಮೈಲಿಗಲ್ಲು ‘ಕಾಂತಾರ’ ಚಿತ್ರಕ್ಕೆ ಸಿಕ್ಕಿದೆ.

ನಾಲ್ಕನೇ ವಾರದಲ್ಲಿ ಸಹ ಚಿತ್ರ ಯಶಸ್ವಿ ದಾಪುಗಾಲಿಟ್ಟು ಪ್ರದರ್ಶನವನ್ನು ಮುಂದುವರೆಸುತ್ತಿದ್ದು, ಪ್ರೇಕ್ಷಕರಿಂದ ಸಿಕ್ಕ ಭರ್ಜರಿ ಪ್ರತಿಕ್ರಿಯೆ ಸಿನಿಮಾದ ಗೆಲುವಿನ ಮತ್ತೊಂದು ಅಂಶವಾಗಿದೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande