


ಕವಿತಾಳ, 25 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ರಾಯಚೂರು ಸೌಹಾರ್ದ ಪತ್ತಿನ ಸಹಕಾರಿ ನಿಯಮಿತ ರಾಯಚೂರು, ಕವಿತಾಳ ಶಾಖೆಯ ನೂತನ ಕಟ್ಟಡವನ್ನು ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಸಚಿವರಾದ ಎನ್ಎಸ್ ಬೋಸರಾಜು ಹಾಗೂ ಮಾನ್ವಿ ವಿಧಾನ ಸಭಾ ಕ್ಷೇತ್ರದ ಶಾಸಕ ಹಂಪಯ್ಯ ನಾಯಕ ಅವರು ನೂತನ ಶಾಖೆಯನ್ನು ಉದ್ಘಾಟಿಸಿದರು.
ರಾಯಚೂರು ಸೌಹಾರ್ದ ಪತ್ತಿನ ಸಹಕಾರಿ ನಿಯಮಿತ ರಾಯಚೂರಿನ ಅಧ್ಯಕ್ಷರಾದ ವಿಶ್ವನಾಥ ಹಿರೇಮಠ ಅವರಿಗೆ ವ್ಯವಹಾರ ವಹಿವಾಟಿನಲ್ಲಿ ಸಹಕಾರಿ ಇನ್ನು ಎತ್ತರಕ್ಕೆ ಬೆಳೆಯಲಿ ಎಂದು ಶುಭ ಕೋರಿದರು.
ಈ ಸಂದರ್ಭದಲ್ಲಿ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಕಿರಿ ಲಿಂಗಪ್ಪ ಕವಿತಾಳ, ಬಲವಂತರಾಯ ಗೌಡ, ಶೇಖರಪ್ಪ ಹಟ್ಟಿ, ವಿಜಯ ಮಹಾಂತೇಶ, ಕರಿಯಪ್ಪ, ರವಿ, ರಮೇಶ, ಶಾಂತಮೂರ್ತಿ ಸ್ವಾಮಿ, ವೀರಯ್ಯ ಸ್ವಾಮಿ, ಸೇರಿದಂತೆ ರಾಯಚೂರು ಸೌಹಾರ್ದ ಪತ್ತಿನ ಸಹಕಾರಿ ನಿಯಮಿತ ಸಿಬ್ಬಂದಿ ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್