ಪೋಲೀಯೋ ಅಂತ್ಯಗೊಳಿಸಲು ಸೈಕಲ್ ಯಾತ್ರೆ
ಪೋಲೀಯೋ ಅಂತ್ಯಗೊಳಿಸಲು ಸೈಕಲ್ ಯಾತ್ರೆ
ಚಿತ್ರ ; ಪೋಲೀಯೋ ಅಂತ್ಯಗೊಳಿಸಲು ತಿರುಪತಿ ಸೈಕಲ್ ಯಾತ್ರೆಗೆ ಕೋಲಾರದಲ್ಲಿ ಸಿಎಂಆರ್ ಶ್ರೀನಾಥ್ ಚಾಲನೆ ನೀಡಿದರು.


ಕೋಲಾರ, ೨೫ ಅಕ್ಟೋಬರ್ (ಹಿ.ಸ.) :

ಆ್ಯಂಕರ್ : ಜಗತ್ತಿನಿಂದ ಪೋಲೀಯೋವನ್ನು ನಿರ್ಮೂಲನೆ ಮಾಡಲು ಶ್ರಮಿಸುತ್ತಿರುವ ರೋಟರಿ ಸಂಸ್ಥೆಯ ಹಿರಿಯ ಸದಸ್ಯರು ಕೋಲಾರ ನಗರದಿಂದ ತಿರುಪತಿಗೆ ಸೈಕಲ್ ಯಾತ್ರೆಯನ್ನು ಶನಿವಾರ ಆರಂಭಿಸಿದರು.

ರೋಟರಿ ಸೆಂಟ್ರಲ್ ಮಾಜಿ ಅಧ್ಯಕ್ಷ ಹಾಗೂ ಹಾಲಿ ಕಾಮಧೇನು ಯೋಜನೆ ಅಧ್ಯಕ್ಷ ಸಿ.ಎಂ.ಆರ್.ಶ್ರೀನಾಥ್, ಅಧ್ಯಕ್ಷ ಸೈನ್ಸ್ ನಾಗರಾಜ್, ವಲಯ ಕಾರ್ಯದರ್ಶಿ ಎಸ್.ಸುಧಾಕರ್ ಹಾಗೂ ವಲಯ ಅಧ್ಯಕ್ಷ ರವೀಂದ್ರನಾಥ್ ಸೈಕಲ್ ತಂಡಕ್ಕೆ ಪೋಲೀಯೋ ನಿರ್ಮೂಲನೆ ಸಂದೇಶದ ಕೆಂಪು ಬಾವುಟವನ್ನು ಪ್ರದರ್ಶಿಸಿ ಚಾಲನೆ ನೀಡಿದರು.

ಬೆಂಗಳೂರಿನ ವಿವಿಧ ರೋಟರಿ ಕ್ಲಬ್ಗಳ ಹಿರಿಯ ಸದಸ್ಯರು ಹಾಗೂ ಪದಾಕಾರಿಗಳ ತಂಡವು ಪೊಲೀಯೋ ನಿರ್ಮೂಲನೆಗಾಗಿ ರೋಟರಿ ಸಂಸ್ಥೆಯೊಂದಿಗೆ ಶ್ರಮಿಸುತ್ತಿದ್ದು, ಇದೀಗ ಪೊಲೀಯೋ ಭಾರತ ದೇಶದಿಂದ ಸಂಪೂರ್ಣವಾಗಿ ನಿರ್ಮೂಲನೆಯಾಗುತ್ತಿರುವ ಸಂದರ್ಭದಲ್ಲಿ ಪೊಲೀಯೋ ಅಂತ್ಯಗೊಳಿಸೋಣ ಸಂದೇಶದ ಸೈಕಲ್ ಯಾತ್ರೆ ಮಾಡಲು ತೀರ್ಮಾನಿಸಿದ್ದರು.

ಶುಕ್ರವಾರ ಸಂಜೆಯೇ ಕೋಲಾರ ನಗರಕ್ಕೆ ಆಗಮಿಸಿ ವಾಸ್ತವ್ಯ ಇದ್ದ ಸೈಕಲ್ ಯಾತ್ರಿಕರ ತಂಡವು ಶನಿವಾರ ಬೆಳಿಗ್ಗೆ ೬ ಗಂಟೆ ಸುಮಾರಿಗೆ ಕೊಂಡರಾಜನಹಳ್ಳಿ ಆಂಜನೇಯಸ್ವಾಮಿ ದೇವಾಲಯದ ಬಳಿ ತಮ್ಮ ಸೈಕಲ್ಗಳೊಂದಿಗೆ ಸೇರಿಕೊಂಡರು.

ವರಪ್ರಸಾದ ಆಂಜನೇಯಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸಿದ ನಂತರ ಮಂಗಳಾರತಿ ಪಡೆದುಕೊಂಡು ತಿರುಪತಿ ಯಾತ್ರೆ ಹೊರಡಲು ಸಜ್ಜಾದರು.

ರೋಟರಿ ಸೆಂಟ್ರಲ್ ಮುಖ್ಯಸ್ಥರಾದ ಸಿ.ಎಂ.ಆರ್.ಶ್ರೀನಾಥ್, ಸೈಕಲ್ ಯಾತ್ರಿಕರಿಗೆ ಹೂಗುಚ್ಛ ಮತ್ತು ಶಕ್ತಿವರ್ಧಕ ಪಾನೀಯಗಳನ್ನು ನೀಡಿ ಶುಭ ಕೋರಿದರು. ನಂತರ ರೋಟರಿ ಪೊಲೀಯೋ ಅಂತ್ಯಗೊಳಿಸೋಣ ಧ್ವಜವನ್ನು ತೋರಿಸುವ ಮೂಲಕ ತಿರುಪತಿ ಸೈಕಲ್ ಯಾತ್ರೆಗೆ ಚಾಲನೆ ನೀಡಿದರು.

ರೋಟರಿ ಸೆಂಟ್ರಲ್ ಕಾರ್ಯದರ್ಶಿ ಎಸ್.ಸುಧಾಕರ್ ಮಾತನಾಡಿ, ರೋಟರಿ ಸಂಸ್ಥೆಯು ಪೊಲೀಯೂ ನಿರ್ಮೂಲನೆಗಾಗಿ ಕೋಲಾರ ಜಿಲ್ಲೆ ಸೇರಿದಂತೆ ಜಗತ್ತಿನಾದ್ಯಂತ ಅನೇಕ ಕಾರ್ಯಕ್ರಮಗಳನ್ನು ನಡೆಸಿದ್ದರ ಫಲವಾಗಿ ಇದೀಗ ಅಂತ್ಯಗೊಳಿಸುವ ಕಾಲ ಸನ್ನಿಹಿತವಾಗಿದೆ, ಈ ಹಿನ್ನೆಲೆಯಲ್ಲಿ ಬೆಂಗಳೂರು ರೋಟರಿ ಹಿರಿಯ ಪದಾಕಾರಿಗಳು ತಿರುಪತಿ ಯಾತ್ರೆ ಮಾಡುತ್ತಿದ್ದು, ಮೊದಲ ದಿನ ಕೋಲಾರದಿಂದ ಚಿತ್ತೂರು ಸೇರಿಕೊಂಡು ಅಲ್ಲಿ ಹೊಸ ರೋಟರಿ ಕ್ಲಬ್ ಆರಂಭೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸುವರು. ಆನಂತರ ಕಾಣಿಪಾಕಂ ಗಣೇಶ ದೇವಾಲಯ ದರ್ಶನ ಮತ್ತು ಅಲ್ಲಿಯೂ ರೋಟರಿ ಕ್ಲಬ್ ಆರಂಭಿಸುವ ಕಾರ್ಯಕ್ರಮದಲ್ಲಿ ಭಾಗವಹಿಸಿ ತಿರುಪಿತಗೆ ತೆರಳುವರು. ಮೂರನೇ ದಿನ ತಿರುಪತಿಗೆ ತೆರಳಿ ಆನಂತರ ಬೆಂಗಳೂರಿಗೆ ವಾಪಸ್ಸಾಗುವ ಪ್ರವಾಸ ಹೊಂದಲಾಗಿದೆ ಎಂದು ತಿಳಿಸಿದರು.

ಇಪ್ಪತ್ತು ಮಂದಿಗೂ ಹೆಚ್ಚು ಮಂದಿ ತಂಡದಲ್ಲಿ ೯ ಮಂದಿ ಸೈಕಲ್ ಯಾತ್ರಿಕರಾಗಿ ಭಾಗವಹಿಸುತ್ತಿದ್ದು, ಉಳಿದವರು ವಿವಿಧ ವಾಹನಗಳಲ್ಲಿ ಅವರಿಗೆ ಬೆಂಗಾವಲಾಗಿ ಯಾತ್ರೆಯಲ್ಲಿ ಭಾಗವಹಿಸುತ್ತಿದ್ದಾರೆ.

ಬೆಂಗಳೂರು ಜಿಲ್ಲಾ ರೋಟರಿ ರಾಜ್ಯಪಾಲ ಶ್ರೀಧರ್ ಈ ಸೈಕಲ್ ಯಾತ್ರೆಯ ನೇತೃತ್ವವಹಿಸಿಕೊಂಡಿದ್ದರು.

ಚಿತ್ರ ; ಪೋಲೀಯೋ ಅಂತ್ಯಗೊಳಿಸಲು ತಿರುಪತಿ ಸೈಕಲ್ ಯಾತ್ರೆಗೆ ಕೋಲಾರದಲ್ಲಿ ಸಿಎಂಆರ್ ಶ್ರೀನಾಥ್ ಚಾಲನೆ ನೀಡಿದರು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande