2026ರ ಒಲಿಂಪಿಕ್ಸ್ ಜ್ಯೋತಿ ಧಾರಕರಾಗಿ ಅಭಿನವ್ ಬಿಂದ್ರಾ ಆಯ್ಕೆ
ನವದೆಹಲಿ, 23 ಅಕ್ಟೋಬರ್ (ಹಿ.ಸ.) : ಆ್ಯಂಕರ್ : ಮುಂದಿನ ವರ್ಷ ನಡೆಯಲಿರುವ 2026ರ ಚಳಿಗಾಲದ ಒಲಿಂಪಿಕ್ಸ್‌ಗೆ ಭಾರತದ ಒಲಿಂಪಿಕ್ ಚಿನ್ನದ ಪದಕ ವಿಜೇತ ಅಭಿನವ್ ಬಿಂದ್ರಾ ಅವರನ್ನು ಅಧಿಕೃತ ಟಾರ್ಚ್ ಬೇರರ್ (ಜ್ಯೋತಿ ಧಾರಕ) ಆಗಿ ಆಯ್ಕೆ ಮಾಡಲಾಗಿದೆ. ಈ ಚಳಿಗಾಲದ ಕ್ರೀಡಾಕೂಟವು ಫೆಬ್ರವರಿ 6ರಿಂದ 22, 2026
Bindra


ನವದೆಹಲಿ, 23 ಅಕ್ಟೋಬರ್ (ಹಿ.ಸ.) :

ಆ್ಯಂಕರ್ : ಮುಂದಿನ ವರ್ಷ ನಡೆಯಲಿರುವ 2026ರ ಚಳಿಗಾಲದ ಒಲಿಂಪಿಕ್ಸ್‌ಗೆ ಭಾರತದ ಒಲಿಂಪಿಕ್ ಚಿನ್ನದ ಪದಕ ವಿಜೇತ ಅಭಿನವ್ ಬಿಂದ್ರಾ ಅವರನ್ನು ಅಧಿಕೃತ ಟಾರ್ಚ್ ಬೇರರ್ (ಜ್ಯೋತಿ ಧಾರಕ) ಆಗಿ ಆಯ್ಕೆ ಮಾಡಲಾಗಿದೆ.

ಈ ಚಳಿಗಾಲದ ಕ್ರೀಡಾಕೂಟವು ಫೆಬ್ರವರಿ 6ರಿಂದ 22, 2026ರವರೆಗೆ ಇಟಲಿಯ ಮಿಲಾನ್ ಹಾಗೂ ಕೊರ್ಟಿನಾ ಡಿ'ಅಂಪೆಝೊ ನಗರಗಳಲ್ಲಿ ನಡೆಯಲಿದೆ.

ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ಸಂತೋಷ ವ್ಯಕ್ತಪಡಿಸಿರುವ ಬಿಂದ್ರಾ ಅವರು, “ಮಿಲಾನೊ ಕೊರ್ಟಿನಾ 2026ರ ಒಲಿಂಪಿಕ್ ಜ್ಯೋತಿ ರಿಲೇಗೆ ಜ್ಯೋತಿ ಧಾರಕರಾಗಿ ಆಯ್ಕೆಯಾಗಿರುವುದು ನನಗೆ ಅಪಾರ ಗೌರವ. ಒಲಿಂಪಿಕ್ ಜ್ಯೋತಿ ಎಂದರೆ ನನ್ನ ಹೃದಯಕ್ಕೆ ಹತ್ತಿರವಾದ ಸಂಕೇತ — ಇದು ಕನಸುಗಳು, ಪರಿಶ್ರಮ ಮತ್ತು ಕ್ರೀಡೆಯ ಮೂಲಕ ಜಾಗತಿಕ ಏಕತೆಯ ಪ್ರತೀಕ. ಮತ್ತೆ ಅದನ್ನು ಹೊತ್ತುಕೊಂಡು ಹೋಗುವ ಅವಕಾಶ ದೊರಕಿರುವುದು ನನಗೆ ಸ್ಫೂರ್ತಿದಾಯಕ,” ಎಂದು ಹೇಳಿದ್ದಾರೆ.

ಅಭಿನವ್ ಬಿಂದ್ರಾ ಅವರು 2008ರ ಬೀಜಿಂಗ್ ಒಲಿಂಪಿಕ್ಸ್‌ನಲ್ಲಿ 10 ಮೀಟರ್ ಏರ್ ರೈಫಲ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದು ಭಾರತಕ್ಕೆ ಅತಿಹೆಚ್ಚು ಕೀರ್ತಿ ತಂದುಕೊಟ್ಟಿದ್ದರು.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande