
ವಿಜಯಪುರ, 25 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ಅಕ್ಟೋಬರ ೨೭ ರಿಂದ ೨೯ರ ವರೆಗೆ ಮೂರು ದಿನಗಳ ಕಾಲ ಮೆಣಸಿನಕಾಯಿ ಬೆಳೆಯ ರಾಷ್ಟ್ರೀಯ ಸಮ್ಮೇಳನ ಹಮ್ಮಿಕೊಳ್ಳಲಾಗುತ್ತಿದೆ ಎಂದು ತೋವಿವಿಯ ಕುಲಪತಿ ಡಾ.ವಿಷ್ಣುವರ್ಧನ ಹೇಳಿದರು.
ಬಾಗಲಕೋಟೆಯ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ನಿರ್ದೇಶನಾಲಯದಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನು ಮಾಹಿತಿ ನೀಡಿದ ಅವರು, ಅಕ್ಟೋಬರ ೨೭ ರಂದು ಮೆಣಸಿನಕಾಯಿ ಬೆಳೆಯ ರಾಷ್ಟ್ರೀಯ ಸಮ್ಮೇಳನಕ್ಕೆ ಕರ್ನಾಟಕ ಕೃಷಿ ಬೆಲೆ ಆಯೋಗದ ನಿವೃತ್ತ ಅಧ್ಯಕ್ಷ ಡಾ.ಅಶೋಕ ದಳವಾಯಿ ಚಾಲನೆ ನೀಡಲಿದ್ದಾರೆ.
ನವದೆಹಲಿಯ ಐಸಿಎಸ್‌ಆರ್‌ನ ಮಾಜಿ ಡಿಡಿಜಿ ಡಾ.ಎನ್.ಕೆ.ಕೃಷ್ಣಕುಮಾರ, ಔರಂಗಾಬಾದನ ಎಟಿಪಿಬಿಆರ್ ನಿರ್ದೇಶಕ ಡಾ.ಸುರಿಂದರ್ ಆಗಮಿಸಲಿದ್ದಾರೆ. ತೋವಿವಿಯ ಕುಲಪತಿಗಳು ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ಈ ಸಂದರ್ಭದಲ್ಲಿ ಸ್ಮರಣ ಸಂಚಿಕೆಯನ್ನು ಸಹ ಬಿಡುಗಡೆ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಮುಖ್ಯವಾಗಿ ರಾಷ್ಟ್ರ ಮಟ್ಟದಲ್ಲಿ ಮೆಣಸಿನಕಾಯಿ ಸಂಶೋಧನೆ, ಉತ್ಪಾದನೆ, ಕೊಯ್ಲೋತ್ತರ ನಿರ್ವಹಣೆ ಮತ್ತು ಮಾರುಕಟ್ಟೆಗೆ ಸಂಬ0ಧಿಸಿದ ವಿವಿಧ ಆಯಾಮಗಳನ್ನು ಚರ್ಚಿಸಲು ರಾಷ್ಟ್ರೀಯ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ. ಸಮ್ಮೇಳನದಲ್ಲಿ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಉತ್ಪಾದನಾ ಪ್ರವೃತ್ತಿಗಳು, ಹವಾಮಾನ ಬದಲಾವಣೆಯ ಪರಿಣಾಮಗಳು, ಮಾರುಕಟ್ಟೆ ಸ್ಥಿರತೆ ಮತ್ತು ಅಸ್ಥಿರತೆ ವಿಶ್ಲೇಷಣೆ ಹಾಗೂ ಉತ್ಪಾದನಾ ಸುಸ್ಥಿರತೆಯನ್ನು ಕಾಯ್ದುಕೊಳ್ಳುವ ತಂತ್ರಜ್ಞಾನಗಳ ಕುರಿತು ಚರ್ಚಿಸಲಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಮೂರು ಪ್ರಮುಖ ಉಪನ್ಯಾಸಗಳು, ೩೮ ಆಹ್ವಾನಿತ ಭಾಷಣಗಳು ಮತ್ತು ೧೭ ಕೈಗಾರಿಕಾ ಪ್ರಸ್ತುತಿಗಳು ಮಂಡನೆಯಾಗಲಿವೆ. ಪ್ರಮುಖ ಭಾಷಣಕಾರರಾಗಿ ಇಂಟರ್ ನ್ಯಾಷನಲ್ ಸೀಡ್ ಫೆಡರೇಶನ್ ಹಾಗೂ ಐಎಎಚ್‌ಎಸ್ ವ್ಯವಸ್ಥಾಪಕ ನಿರ್ದೇಶಕರು ಆರ್ಥರ್ ಸಂತೋಷ ಅತ್ತಾವರ್, ಧಾರವಾಡದ ಸರ್ಪನ್ ಹೈಬ್ರಿಡ್ ಸೀಡ್ಸ್ ಪ್ರೆöÊ.ಲಿಮಿಟೆಡ್‌ನ ಸಂಸ್ಥಾಪಕ ಡಾ.ನಿಜಗುಣದೇವ ಗದ್ದಗಿಮಠ ಮತ್ತು ನಿವೃತ್ತ ತರಕಾರಿ ತಳಿ ಅಭಿವೃದ್ದಿ ತಜ್ಞ ಡಾ.ಎ.ಎ.ದೇಶಪಾಂಡೆ ಭಾಗವಹಿಸಲಿದ್ದಾರೆ. ತೈವಾನ್, ಜಪಾನ್ ಮತ್ತು ತೋವಿವಿ ಬಾಗಲಕೋಟೆಯ ಖ್ಯಾತ ವಿಜ್ಞಾನಿಗಳು ತಮ್ಮ ಅನುಭವಗಳನ್ನು ವ್ಯಕ್ತಪಡಿಸಲಿದ್ದಾರೆ ಎಂದು ತಿಳಿಸಿದರು.
ತೋವಿವಿಯ ಸಂಶೋಧನ ನಿರ್ದೇಶಕ ಡಾ.ಬಿ.ಪಕ್ರುದ್ದಿನ ಮಾತನಾಡಿ ಸಮ್ಮೇಳನವು ೭ ಪ್ರಮುಖ ವಿಷಯಾಧಾರಿತ ವಿಭಾಗಗಳನ್ನು ಒಳಗೊಂಡಿದೆ. ತಳಿ ವೈವಿದ್ಯತೆಯ ಸಂಪತ್ತಿನ ನಿರ್ವಹಣೆ ಮತ್ತು ಉಪಯೋಗ, ಪಾರಂಪರಿಕ ಮತ್ತು ಆಣ್ವಿಕ ತಳಿ ಅಭಿವೃದ್ದಿ ಮೂಲಕ ಉತ್ಪಾದಕತೆ ಮತ್ತು ಗುಣಮಟ್ಟದ ವೃದ್ದಿ, ಜೈವಿಕ ಮತ್ತು ಅಜೈವಿಕ ಒತ್ತಡ ನಿರ್ವಹಣೆ, ನಿಖರ ಉತ್ಪಾದನಾ ತಾಂತ್ರಿಕತೆಗಳು ಮತ್ತು ಪೋಷಕಾಂಶಗಳ ಪರಿಣಾಮಕಾರಿ ಬಳಕೆ, ಕೊಯ್ಲೋತ್ತರ ನಿರ್ವಹಣೆ, ಆಹಾರ ಆಹಾರ ಭದ್ರತೆ, ವ್ಯಾಪಾರ ಮತ್ತು ನೀತಿ ವಿಷಯಗಳು, ಕೈಗಾರಿಕೆ, ನವೋದ್ಯಮ ಹಾಗೂ ಉದ್ಯಮಶೀಲತೆ, ಮತ್ತು ವಿದ್ಯಾರ್ಥಿಗಳ ಸಂಶೋಧನಾ ಪ್ರಸ್ತುತಿಗಳು, ಚರ್ಚಾಗೋಷ್ಠಿಗಳು, ರೈತರ ಸಮಸ್ಯೆಗಳು ಮತ್ತು ತಂತ್ರಜ್ಞಾನ ವಿಸ್ತರಣಾ ಅಗತ್ಯತೆಗಳು, ಪ್ರಮುಖ ಜೈವಿಕ ಒತ್ತಡಗಳು ಮತ್ತು ಬೀಜ ಹಾಗೂ ರಪ್ತು ಕುರಿತಾದ ವಿಷಯಗಳನ್ನು ಒಳಗೊಂಡಿದೆ ಎಂದರು.
ತೋವಿವಿಯ ಪ್ರಾದ್ಯಾಪಕರು ಮತ್ತು ವಿಶ್ವವಿದ್ಯಾಲಯದ ಮುಖ್ಯಸ್ಥ ಡಾ.ವಸಂತ ಗಾಣಿಗೇರಿ ಮಾತನಾಡಿ ತೋವಿವಿಯು ೧೫ ವರ್ಷಗಳಿಂದ ಮೆಣಸಿನಕಾಯಿ ಬಗ್ಗೆ ತರಬೇತಿ, ಪ್ರಾತ್ಯಕ್ಷಿಕೆ ನಡೆಸಲಾಗಿದೆ. ಜಿಲ್ಲೆಯಲ್ಲಿ ೧೮ ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮೆಣಸಿನಕಾಯಿ ಬೆಳೆಯಲಾಗುತ್ತಿದೆ. ಒಟ್ಟು ೧೮೧ ಸಂಕ್ಷಿಪ್ತ ಪ್ರಬಂಧಗಳು ಸ್ವೀಕರಿಸಲ್ಪಟ್ಟಿದ್ದು, ೧೦ ವಿಜ್ಞಾನಿಗಳು, ೩೨ ಖಾಸಗಿ ಪ್ರತಿನಿಧಿಗಳು, ೨೬ ರೈತರು ಮತ್ತು ಉದ್ಯಮಿಗಳು, ೮೫ ಸಂಶೋಧನಾ ವಿದ್ಯಾರ್ಥಿಗಳು ಮತ್ತು ೩೦ ಪ್ರದರ್ಶಕರು ಸಮ್ಮೇಳನದಲ್ಲಿ ಭಾಗವಹಿಸುವ ನಿರೀಕ್ಷೆ ಇದೆ ಎಂದು ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ತೋವಿವಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / jyothi deshpande