ನಂದಿ ಸಕ್ಕರೆ ಕಾರ್ಖಾನೆ ಕಾಮಧೇನು ಕಲ್ಪವೃಕ್ಷ : ರುದ್ರಮುನಿ ಶ್ರೀ
ವಿಜಯಪುರ, 25 ಅಕ್ಟೋಬರ್ (ಹಿ.ಸ.) : ಆ್ಯಂಕರ್ : ವಿಜಯಪುರ ಜಿಲ್ಲೆ ಬಬಲೇಶ್ವರ ತಾಲೂಕಿನ ಕೃಷ್ಣ ನಗರದ ನಂದಿ ಸಹಕಾರಿ ಸಕ್ಕರೆ ಕಾರ್ಖಾನೆಯ ೨೦೨೫-೨೬ ನೇ ಸಾಲಿನ ಕಬ್ಬು ನುರಿಸುವ ಹಂಗಾಮಿನ ಬಾಯ್ಲರ್ ಅಗ್ನಿ ಪ್ರದೀಪನ ಹಾಗೂ ಕೇನ್ ಕ್ಯಾರಿಯರ್ ಪೂಜಾ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಗಿರಿಸಾಗರದ ರುದ್ರಮುನಿ
ಸಕ್ಕರೆ


ವಿಜಯಪುರ, 25 ಅಕ್ಟೋಬರ್ (ಹಿ.ಸ.) :

ಆ್ಯಂಕರ್ : ವಿಜಯಪುರ ಜಿಲ್ಲೆ ಬಬಲೇಶ್ವರ ತಾಲೂಕಿನ ಕೃಷ್ಣ ನಗರದ ನಂದಿ ಸಹಕಾರಿ ಸಕ್ಕರೆ ಕಾರ್ಖಾನೆಯ ೨೦೨೫-೨೬ ನೇ ಸಾಲಿನ ಕಬ್ಬು ನುರಿಸುವ ಹಂಗಾಮಿನ ಬಾಯ್ಲರ್ ಅಗ್ನಿ ಪ್ರದೀಪನ ಹಾಗೂ ಕೇನ್ ಕ್ಯಾರಿಯರ್ ಪೂಜಾ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.

ಗಿರಿಸಾಗರದ ರುದ್ರಮುನಿ ಶಿವಾಚಾರ್ಯರು ಸ್ವಾಮೀಜಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿ, ಕೃಷ್ಣನದಿ ನಮಗೆ ಪಾವನವಾದರೆ, ಅದರಂತೆ ದಿನನಿತ್ಯ ಕಾಯಕದಲ್ಲಿ ನಂದಿ ಸಹಕಾರಿ ಸಕ್ಕರೆ ಕಾರ್ಖಾನೆಯಿಂದ ಈ ಭಾಗದಲ್ಲಿ ಅನೇಕ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ. ನಮ್ಮ ದೇಶದಲ್ಲಿ ಅನೇಕ ಸಹಕಾರಿ ಸಂಘಗಳಿಂದ ರೈತರಿಗೆ ಮತ್ತು ವ್ಯಾಪಾರಿಗಳಿಗೆ ಕಷ್ಟದ ಕಾಲದಲ್ಲಿ ಉಪಯೋಗ ವಾಗುತ್ತಿವೆ. ಹೀಗಾಗಿ ನಮ್ಮ ನಂದಿ ಸಹಕಾರಿ ಸಕ್ಕರೆ ಕಾರ್ಖಾನೆ ಈ ಭಾಗದ ಎಲ್ಲ ರೈತರಿಗೆ ಕಾಮಧೇನು ಕಲ್ಪವೃಕ್ಷದಂತೆ ಇದೆ ಎಂದರು.

ಮಮದಾಪುರದ ಅಭಿನವ ಮುರಗೇಂದ್ರ ಮಹಾಸ್ವಾಮೀಜಿ, ಅಧ್ಯಕ್ಷ ಕುಮಾರ್ ದೇಸಾಯಿ ಜೈನಾಪುರ, ಕಾರ್ಖಾನೆಯ ನಿರ್ದೇಶಕ ಅದೃಷ್ಟಪ್ಪ ದೇಸಾಯಿ, ಪ್ರಭು ತೋಂಟದಾರ್ಯ ಸ್ವಾಮೀಜಿ, ಬೂದಿಹಾಳ (ಎಸ್‌ಜಿ) ಪ್ರಭು ಮಹಾಸ್ವಾಮೀಜಿ, ಜಂಬಗಿ - ಕೆಂಗಲಗುತ್ತಿಯ ಅಡಿವಿ ಸಿದ್ಧೇಶ್ವರ ಶಿವಾಚಾರ್ಯ ಸ್ವಾಮೀಜಿ, ಜತ್ತ ತಾಲೂಕಿನ ಸಂಖ ವಿರಕ್ತ ಮಠದ ಡಾ. ಮಹೇಶ ದೇವರು, ಗುಣದಾಳದ ವಿವೇಕಾನಂದ ದೇವರು, ಬಬಲಾದಿಯ ಸಿದ್ದರಾಮಯ್ಯ ಹೊಳೆಮಠ, ಬಿದರಿಯ ಬಸಯ್ಯ ಹಿರೇಮಠ, ಕಣಬೂರದ ರಾಚಯ್ಯ ಸ್ವಾಮೀಜಿ, ಗಲಗಲಿಯ ರಾಮಾಚಾರಿ ಕಟ್ಟಿ ಇದ್ದರು.

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande