
ವಿಜಯಪುರ, 25 ಅಕ್ಟೋಬರ್ (ಹಿ.ಸ.) :
ವಿಜಯಪುರ : ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಜಿಲ್ಲಾ ಘಟಕದ ಪದಾಧಿಕಾರಿಗಳ ಚುನಾವಣೆಗೆ ವಿವಿಧ ೨೫ ಸ್ಥಾನಗಳಿಗೆ ಒಟ್ಟು ೧೮ ನಾಮಪತ್ರ ಸಲ್ಲಿಕೆಯಾಗಿವೆ ಎಂದು ಜಿಲ್ಲಾ ಚುನಾವಣಾಧಿಕಾರಿ ಟಿ.ಕೆ. ಮಲಗೊಂಡ ಹೇಳಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿದ ಅವರು, ರಾಜ್ಯ ಕಾರ್ಯಕಾರಣಿ ಸ್ಥಾನಕ್ಕೆ ೨, ಜಿಲ್ಲಾ ಅಧ್ಯಕ್ಷ ಸ್ಥಾನಕ್ಕೆ ೧, ಜಿಲ್ಲಾ ಉಪಾಧ್ಯಕ್ಷ ಸ್ಥಾನಕ್ಕೆ ೩, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ೧, ಖಜಾಂಚಿ ಸ್ಥಾನಕ್ಕೆ ೧, ಕಾರ್ಯದರ್ಶಿ ಸ್ಥಾನಕ್ಕೆ ೨, ಜಿಲ್ಲಾ ಕಾರ್ಯಕಾರಿಣಿ ಸ್ಥಾನಕ್ಕೆ ೮ ಸೇರಿ ಒಟ್ಟು ೧೮ ನಾಮಪತ್ರ ಸಲ್ಲಿಕೆಯಾಗಿವೆ. ನಾಮಪತ್ರ ಸಲ್ಲಿಸಲು ಅ. ೨೭ ಮಧ್ಯಾಹ್ನ ೩ ಗಂಟೆ ವರಿಗೆ ಮಾತ್ರ ಕಾಲಾವಕಾಶವಿದ್ದು, ಅ. ೨೮ ರಂದು ನಾಮಪತ್ರ ಪರಿಶೀಲನೆ, ಅ. ೩೦, ೨೦೨೫ ನಾಮಪತ್ರ ವಾಪಸ್ ಪಡೆಯಲು ಕಾಲಾವಕಾಶವಿದೆ. ನ. ೯ ರಂದು ಬೆಳಗ್ಗೆ ೯ ರಿಂದ ಮಧ್ಯಾಹ್ನ ೩ ಗಂಟೆ ವರಿಗೆ ಮತದಾನ ನಡೆಯಲಿದ್ದು, ಅಂದು ಮಧ್ಯಾಹ್ನ ೩.೩೦ ಗಂಟೆಗೆ ಮತ ಎಣಿಕೆ ಕಾರ್ಯ ನಡೆಯಲಿದೆ ಎಂದು ಅವರು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / jyothi deshpande