ಬಳ್ಳಾರಿ ಶಾಸಕರ ಹುಟ್ಟುಹಬ್ಬದ ಸಂಭ್ರಮ : ಬೈಕ್ ರ‍್ಯಾಲಿ
ಬಳ್ಳಾರಿ, 25 ಅಕ್ಟೋಬರ್ (ಹಿ.ಸ.) : ಆ್ಯಂಕರ್ : ಬಳ್ಳಾರಿ ನಗರದ ಯುವ ಶಾಸಕ ನಾರಾ ಭರತರೆಡ್ಡಿ ಅವರ ಹುಟ್ಟು ಹಬ್ಬದ ಅಂಗವಾಗಿ ನಗರಾದ್ಯಂತ ಶನಿವಾರ ಬೆಳಗ್ಗೆಯಿಂದಲೇ ಅನ್ನದಾನ, ರಕ್ತದಾನ, ಆಹಾರ ಕಿಟ್‍ಗಳ ವಿತರಣೆ ಸೇರಿ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ನಗರದ ಅಧಿದೇವತೆ ಶ್ರೀ ಕನಕ
ಬಳ್ಳಾರಿ ಶಾಸಕರ ಹುಟ್ಟುಹಬ್ಬದ ಸಂಭ್ರಮ : ಬೈಕ್ ರ್ಯಾಲಿ


ಬಳ್ಳಾರಿ ಶಾಸಕರ ಹುಟ್ಟುಹಬ್ಬದ ಸಂಭ್ರಮ : ಬೈಕ್ ರ್ಯಾಲಿ


ಬಳ್ಳಾರಿ ಶಾಸಕರ ಹುಟ್ಟುಹಬ್ಬದ ಸಂಭ್ರಮ : ಬೈಕ್ ರ್ಯಾಲಿ


ಬಳ್ಳಾರಿ, 25 ಅಕ್ಟೋಬರ್ (ಹಿ.ಸ.) :

ಆ್ಯಂಕರ್ : ಬಳ್ಳಾರಿ ನಗರದ ಯುವ ಶಾಸಕ ನಾರಾ ಭರತರೆಡ್ಡಿ ಅವರ ಹುಟ್ಟು ಹಬ್ಬದ ಅಂಗವಾಗಿ ನಗರಾದ್ಯಂತ ಶನಿವಾರ ಬೆಳಗ್ಗೆಯಿಂದಲೇ ಅನ್ನದಾನ, ರಕ್ತದಾನ, ಆಹಾರ ಕಿಟ್‍ಗಳ ವಿತರಣೆ ಸೇರಿ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

ನಗರದ ಅಧಿದೇವತೆ ಶ್ರೀ ಕನಕದುರ್ಗಮ್ಮ ದೇವಸ್ಥಾನದಲ್ಲಿ ವಿಶೇಷ ಪೂಜೆ - ಪ್ರಾರ್ಥನೆ ಸಲ್ಲಿಸಿದ ಶಾಸಕ ನಾರಾ ಭರತರೆಡ್ಡಿ ಅವರು ಶನಿವಾರ ಬೆಳಗ್ಗೆಯಿಂದಲೇ ಕಚೇರಿಯಲ್ಲಿ - ಅಭಿಮಾನಿಗಳು ಇರುವ ಸ್ಥಳಗಳಲ್ಲಿ ನಗರಾದ್ಯಂತ ಸಂಚರಿಸಿ, ಕೇಕ್ ಕತ್ತರಿಸಿ, ಬಡ ಮತ್ತು ನಿರ್ಗತಿಕರಿಗೆ ನೆರವಾಗುವ ಮೂಲಕ ತಮ್ಮ ಹುಟ್ಟುವನ್ನು ಸಂಭ್ರಮಿಸಿದ್ದಾರೆ.

ಅಧಿಕಾರಿಗಳು, ಪೊಲೀಸರು, ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು - ಆಪ್ತರು - ಗೆಳೆಯರು ಮತ್ತು ಹಿತೈಷಿಗಳು ಶಾಸಕರಿಗೆ ಶುಭ ಕೋರಲು ದೊಡ್ಡ ಸಾಲಿನಲ್ಲಿದ್ದುದ್ದು ವಿಶೇಷವಾಗಿತ್ತು. ಶಾಸಕರ ಅಭಿಮಾನಿಗಳು ನಗರಾದ್ಯಂತ ಅನ್ನದಾನ, ರಕ್ತದಾನ ಸೇರಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ವಿಶೇಷವಾಗಿತ್ತು.

ಮುಖಂಡ ವೆಂಕಟೇಶ್ ಹೆಗಡೆ ಅವರ ನೇತೃತ್ವದಲ್ಲಿ ಹೆಗಡೆ ಅವರ ಮನೆಯಿಂದ ಶಾಸಕರ ಜನಸಂಪರ್ಕ ಕಚೇರಿಯ ವರೆಗೆ ನೂರಾರು ಯುವಕರು ವಾಹನಗಳ ರ‍್ಯಾಲಿ, ಶಾಸಕರ ಸಮ್ಮುಖದಲ್ಲಿ ಕೇಕ್ ಕತ್ತರಿಸಿ, ಶಾಸಕರಿಗೆ ಶುಭ ಹಾರೈಸಿ ಸಿಹಿ ಹಂಚಿ ಸಂಭ್ರಮಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande