ಮಸ್ಕಿ: ಕಳ್ಳತನ ಪತ್ತೆ ; ಆರೋಪಿಯಿಂದ 2.80 ಲಕ್ಷ ರೂ.ಮೌಲ್ಯದ ಬಂಗಾರ, ಬೆಳ್ಳಿ ಆಭರಣ ವಶ
ಮಸ್ಕಿ, 24 ಅಕ್ಟೋಬರ್ (ಹಿ.ಸ.) : ಆ್ಯಂಕರ್ : ಪಟ್ಟಣದ ಕಂಬಳಿಮಠ ಪ್ರದೇಶದಲ್ಲಿ ನಡೆದ ಕಳ್ಳತನ ಪ್ರಕರಣವನ್ನು ಪೊಲೀಸರು ಪತ್ತೆಹಚ್ಚಿ, ಆರೋಪಿಯನ್ನು ವಶಕ್ಕೆ ಪಡೆದು 2.80 ಲಕ್ಷ ರೂ.ಮೌಲ್ಯದ ಬಂಗಾರ ಮತ್ತು ಬೆಳ್ಳಿ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ. ಪಟ್ಟಣದ ಶೈಲಮ್ಮ ಎಂಬುವರ
ಮಸ್ಕಿ: ಕಳ್ಳತನ ಪತ್ತೆ: ಆರೋಪಿಯಿಂದ 2.80 ಲಕ್ಷ ರೂ.ಮೌಲ್ಯದ ಬಂಗಾರ, ಬೆಳ್ಳಿ ಆಭರಣ ವಶ


ಮಸ್ಕಿ, 24 ಅಕ್ಟೋಬರ್ (ಹಿ.ಸ.) :

ಆ್ಯಂಕರ್ : ಪಟ್ಟಣದ ಕಂಬಳಿಮಠ ಪ್ರದೇಶದಲ್ಲಿ ನಡೆದ ಕಳ್ಳತನ ಪ್ರಕರಣವನ್ನು ಪೊಲೀಸರು ಪತ್ತೆಹಚ್ಚಿ, ಆರೋಪಿಯನ್ನು ವಶಕ್ಕೆ ಪಡೆದು 2.80 ಲಕ್ಷ ರೂ.ಮೌಲ್ಯದ ಬಂಗಾರ ಮತ್ತು ಬೆಳ್ಳಿ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ.

ಪಟ್ಟಣದ ಶೈಲಮ್ಮ ಎಂಬುವರ ಮನೆ ಕಳ್ಳತನವಾದ ಪ್ರಕರಣ ಅ.19ರಂದು ಮಸ್ಕಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿತ್ತು. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ರಾಯಚೂರು ಜಿಲ್ಲಾ ಪೊಲೀಸ್ ಅಧೀಕ್ಷಕ ಪುಟ್ಟಮಾದಯ್ಯ ಮಾರ್ಗದರ್ಶನದಲ್ಲಿ ಬಾಲಚಂದ್ರ ಮಸ್ಕಿ ಸಿಪಿಐ ಡಿ. ಲಕ್ಕಂ, ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಯಿತು. ತಂಡದಲ್ಲಿ ಪಿ.ಎಸ್.ಐ ರಂಗಯ್ಯ ಕೆ., ಸಿಪಿಸಿ ಜಡೆಪ್ಪ, ಸಾಬುದ್ದೀನ್, ಅಡಿವೆಪ್ಪ ಹಾಗೂ ಸಿಚ್.ಸಿ ಸಿದ್ದಾರೆಡ್ಡಿ ಕಾರ್ಯಾಚರಣೆ ನಡೆಸಿ, ಆರೋಪಿತ ಸುಂಕನೂರು ಗ್ರಾಂದ ಶಿವರಾಜಎಂಬಾತನನ್ನು ವಶಕ್ಕೆ ಪಡೆದರು.

ವಿಚಾರಣೆ ವೇಳೆ ಆರೋಪಿಯಿಂದ 10 ಗ್ರಾಂ ಗುಂಡಿನ ಸರ, 10 ಗ್ರಾಂ ಎಳಿ ಸರ, 3 ಗ್ರಾಂ ತಾಳಿ ಮತ್ತು 100 ಗ್ರಾಂ ಬೆಳ್ಳಿ ಆಭರಣ ಸೇರಿದಂತೆ ಒಟ್ಟು 2,80,000 ರೂ.ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಸದ್ಯ ಆರೋಪಿತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande