
ವಿಜಯಪುರ, 24 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ಹಾಡಹಗಲೇ ಪತ್ನಿ ಮೇಲೆ ಪತಿಯಿಂದ ಮಾರಣಾಂತಿಕ ಹಲ್ಲೆ ನಡೆದಿರುವ ಘಟನೆ ವಿಜಯಪುರ ಜಿಲ್ಲೆಯ ಸಿಂದಗಿ ಪಟ್ಟಣದ ಸಂಗಮ ಬಾರ್ ಮುಂದೆ ನಡೆದಿದೆ.
ಸಿಂದಗಿಯ ಅನಸುಯಾ ಮಾದರ ಮೇಲೆ ಪತಿ ಯಮನಪ್ಪ ಮಾದರ ಹಲ್ಲೆ ಮಾಡಿದ್ದಾನೆ. ಜಮೀನು ವಿಚಾರಕ್ಕೆ ಮಾರಣಾಂತಿಕ ಹಲ್ಲೆ ಮಾಡಲಾಗಿದೆ. ಪತ್ನಿಯನ್ನು ರಸ್ತೆಯಲ್ಲಿ ಅಟ್ಟಾಡಿಸಿ ಮಚ್ಚಿನಿಂದ ಪಾಪಿ ಪತಿ ಹೊಡೆದಿದ್ದಾನೆ.
ನಂತರ ಬಿಡಿಸಲು ಬಂದ ಜನರನ್ನೆ ಪತಿ ಹೆದರಿಸಿದ್ದಾನೆ. ಇನ್ನು ಯಮನಪ್ಪನಿಗೆ ಡೊಣ್ಣೆಯಿಂದ ತಲೆಗೆ ಸಾರ್ವಜನಿಕರು ಹೊಡೆದುರುಳಿಸಿದ್ದಾರೆ. ಸದ್ಯ ಇಬ್ಬರ ಸ್ಥಿತಿ ಗಂಭೀರವಾಗಿದೆ. ಸಿಂದಗಿ ತಾಲೂಕಾ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಸಿಂದಗಿ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.
ಹಿಂದೂಸ್ತಾನ್ ಸಮಾಚಾರ್ / jyothi deshpande