ದೀಪದ ಬೆಂಕಿ ಹೊತ್ತಿ ಮಹಿಳೆ ಸಾವು
ವಿಜಯಪುರ, 23 ಅಕ್ಟೋಬರ್(ಹಿ.ಸ.) : ಆ್ಯಂಕರ್ : ದೇವರ ಮುಂದೆ ಇರಿಸಲಾಗಿದ್ದ ದೀಪದ ಕಿಡಿ ಆಕಸ್ಮಿಕವಾಗಿ ತಗುಲಿದ ಪರಿಣಾಮ ಮಹಿಳೆಯೋರ್ವರು ಮೃತಪಟ್ಟ ಘಟನೆ ವಿಜಯಪುರ ಜಿಲ್ಲೆಯ ನಿಡಗುಂದಿ ತಾಲೂಕಿನ ಅರಳದಿನ್ನಿಯಲ್ಲಿ ಘಟನೆ ಸಂಭವಿಸಿದೆ. ಅರಳದಿನ್ನಿ ಗ್ರಾಮದ ಮೃತ ಮಹಿಳೆಯನ್ನು ಚಂದ್ರವ್ವ ಮಲ್ಲಪ್ಪ ಮಾದರ (೫೦
ದೀಪದ ಬೆಂಕಿ ಹೊತ್ತಿ ಮಹಿಳೆ ಸಾವು


ವಿಜಯಪುರ, 23 ಅಕ್ಟೋಬರ್(ಹಿ.ಸ.) :

ಆ್ಯಂಕರ್ : ದೇವರ ಮುಂದೆ ಇರಿಸಲಾಗಿದ್ದ ದೀಪದ ಕಿಡಿ ಆಕಸ್ಮಿಕವಾಗಿ ತಗುಲಿದ ಪರಿಣಾಮ ಮಹಿಳೆಯೋರ್ವರು ಮೃತಪಟ್ಟ ಘಟನೆ ವಿಜಯಪುರ ಜಿಲ್ಲೆಯ ನಿಡಗುಂದಿ ತಾಲೂಕಿನ ಅರಳದಿನ್ನಿಯಲ್ಲಿ ಘಟನೆ ಸಂಭವಿಸಿದೆ.

ಅರಳದಿನ್ನಿ ಗ್ರಾಮದ ಮೃತ ಮಹಿಳೆಯನ್ನು ಚಂದ್ರವ್ವ ಮಲ್ಲಪ್ಪ ಮಾದರ (೫೦) ಎಂದು ಗುರುತಿಸಲಾಗಿದೆ.

ಮಧ್ಯಾಹ್ನ ದೇವರ ಮುಂದೆ ಹಚ್ಚಿಟ್ಟಿದ್ದ ದೀಪದ ಕಿಡಿ ಆಕಸ್ಮಿಕವಾಗಿ ಮಹಿಳೆಗೆ ತಾಕಿದ್ದು ಇದರಿಂದ ತೀವ್ರವಾಗಿ ಗಾಯಗೊಂಡಿದ್ದ ಮಹಿಳೆಯನ್ನು ನಿಡಗುಂದಿ ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿತ್ತು. ಹೆಚ್ಚಿನ ಉಪಚಾರಕ್ಕಾಗಿ ವಿಜಯಪುರ ಜಿಲ್ಲಾ ಆಸ್ಪತ್ರೆಗೂ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮಹಿಳೆ ಅಸುನೀಗಿದ್ದಾಳೆ. ಪ್ರಕರಣಕ್ಕೆ ಸಂಬಂಧಿಸಿದಂತೆ ನಿಡಗುಂದಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರೆದಿದೆ.

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande