ಬೇತಮಂಗಲ ಪಾಲಾರ್ ನದಿ ಪ್ರವಾಸಿ ತಾಣ ಅಭಿವೃದ್ಧಿಗೆ ಕ್ರಮ
ಬೇತಮಂಗಲ ಪಾಲಾರ್ ನದಿ ಪ್ರವಾಸಿ ತಾಣ ಅಭಿವೃದ್ಧಿಗೆ ಕ್ರಮ
ಚಿತ್ರ : ಕೋಲಾರ ಜಿಲ್ಲಾಧಿಕಾರಿ ಎಂ.ಆರ್. ರವಿ ಅವರು ಖುದ್ದಾಗಿ ಪಾಲಾರ್ ನದಿ ಹರಿಯುವ ಗೇಟ್ಗಳ ಮೇಲೆ ಸಂಚರಿಸಿ ಬಿರುಕು ಬಿಟ್ಟಿರುವ ಪಿಲ್ಲರ್ ಗಳನ್ನು ಗಮನಿಸಿದರು.


ಕೋಲಾರ, ೨೩ ಅಕ್ಟೋಬರ್ (ಹಿ.ಸ.) :

ಆ್ಯಂಕರ್ : ಕೋಲಾರ ಜಿಲ್ಲಾಧಿಕಾರಿ ಎಂ.ಆರ್. ರವಿ ಪಾಲಾರ್ ನದಿ ಹರಿಯುವ ಗೇಟ್ಗಳ ಮೇಲೆ ಸಂಚರಿಸಿ ಬಿರುಕು ಬಿಟ್ಟಿರುವ ಪಿಲ್ಲರ್ ಗಳನ್ನು ಗಮನಿಸಿ ಶೀಘ್ರದಲ್ಲಿಯೇ ತಾಂತ್ರಿಕ ತಂಡ ಬಂದು ವರದಿ ನೀಡಿದ ನಂತರ ಮುಂದಿನ ಕ್ರಮ ಕೈಗೊಳ್ಳಲಾ ಗುವುದು. ಅಲ್ಲದೇ ಇದನ್ನು ಪ್ರವಾಸಿ ತಾಣವನ್ನಾಗಿ ಅಭಿವೃದ್ಧಿ ಪಡಿಸಲಾಗುವುದೆಂದು ತಿಳಿಸಿದರು.

ಕೋಲಾರ ಜಿಲ್ಲೆಯ ದೊಡ್ಡ ಕೆರೆಗಳಲ್ಲಿ ಒಂದಾದ ಪಾಲಾರ್ ನದಿಯು ತುಂಬಿ ಹರಿಯುತ್ತಿದ್ದು ಇದೀಗ ಪ್ರವಾಸ ತಾಣವಾಗಿದೆ. ನೆರೆಯ ಆಂಧ್ರ ಪ್ರದೇಶ ಮತ್ತು ತಮಿಳುನಾಡು ಸೇರಿದಂತೆ ಜಿಲ್ಲೆಯ ಭಾಗಗಳಿಂದ ಪ್ರವಾಸಿಗರ ಆಕರ್ಷಣೆ ಹೆಚ್ಚಾಗಿತ್ತಿದೆ

ಕೋಲಾರ ಜಿಲ್ಲೆಯಲ್ಲಿ ಈ ಬಾರಿ ಅಕ್ಟೋಬರ್ ಒಂದರಿಂದ ವಾಡಿಕೆಗಿಂತ ಮಳೆ ಹೆಚ್ಚಾಗಿದ್ದು ಜೆಲ್ಲೆಯ ಅನೇಕ ಕೆರೆಗಳು ತುಂಬಿವೆ ಮತ್ತು ಕೋಡಿ ಹೋಗುತ್ತಿವೆ. ಅದರಲ್ಲಿ ವಿಶೇಷವಾಗಿ ಬೇತಮಂಗಲ ಮತ್ತು ರಾಮಸಾಗರ ಕೆರೆಗಳು ವಿಶೇಷವಾಗಿವೆ ಈ ಭಾಗಕ್ಕೆ ನೀರಿನಲ್ಲಿ ಆಟವಾಡಲು ಹೆಚ್ಚಿನ ಪ್ರವಾಸಿಗರು ಬರುವುದರಿಂದ ಅವರ ಸುರಕ್ಷತೆಯ ದೃಷ್ಟಿ ಯಿಂದ ಮತ್ತು ಸ್ವಚ್ಛತೆಯನ್ನು ಕಾಪಾಡುವ ನಿಟ್ಟಿ ನಲ್ಲಿ ಸ್ಥಳೀಯ ಅಧಿಕಾರಿಗಳಿಗೆ ಮಾರ್ಗದರ್ಶನ ನೀಡಿದ್ದರು ಸಹ ನನಗೆ ಸಮಾಧಾನಕರ ಅನಿಸಲಿಲ್ಲ ಇದರ ವಸ್ತುಸ್ಥಿತಿ ನೋಡಲು ಇಂದು ಬಂದಿದ್ದೇನೆ ಎಂದು ತಿಳಿಸಿದರು.

ಪಾಲಾರ್ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಸೇತುವೆಯನ್ನು ಕರ್ನಾಟರ ನೀರು ಸರಬರಾಜು ಮತ್ತು ಒಳ ಚರಂಡಿ ಮಂಡಳಿ ಅವರು ನಿರ್ವಹಣೆ ಮಾಡುತ್ತಿದ್ದು ಬಿರುಕು ಬಿಟ್ಟಿರುವುದನ್ನು ನಾನು ಗಮನಿಸಿದ್ದೇನೆ ಅನುಭವಿ ಇಂಜಿನಿಯರ್ಸ್ ಬಂದು ಅದನ್ನು ಪರಿಶೀಲಿಸಿ ವರದಿಯನ್ನು ಕೊಡುತ್ತಾರೆ ನಂತರ ಸಭೆ ಮಾಡಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಈ ಒಂದು ಸ್ಥಳವು ಪ್ರವಾಸಿ ತಾಣವಾಗಿಸಲು ಉಪಯುಕ್ತವಾಗಿದ್ದು ಈ ಭಾಗದಲ್ಲಿ ಅನೇಕ ಪ್ರವಾಸಿಗರು ಬರುತ್ತಿರುವುದರಿಂದ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಈಗಾಗಲೇ ಪೊಲೀಸರು ಮತ್ತು ಪ್ರವಾಸಿ ಮಿತ್ರ ಹಾಗೂ ಹೋಮ್ ಗಾರ್ಡ್ ಹಾಗೂ ಕಂದಾಯ ಇಲಾಖೆ, ಪಂಚಾಯಿತಿ ಅಧಿಕಾರಿಗಳನ್ನು ನಿಯೋಜನೆ ಮಾಡಲಾಗಿದ್ದು ಎಲ್ಲರೂ ಸೇರಿ ತಂಡಗಳನ್ನು ಮಾಡಿಕೊಂಡು ಇಲ್ಲಿ ಕೆಲಸವನ್ನು ಮಾಡಬೇಕಾಗಿದೆ ಎಂದರು.

ಇಲ್ಲಿ ಸೂಚನೆಯ ಫಲಕಗಳನ್ನು ಅಳವಡಿಸಬೇಕು. ಜನರು, ಮಕ್ಕಳು ನೀರಿನಲ್ಲಿ ಆಟವಾಡಲು ಸಂದರ್ಭಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲು ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ತಿಳಿಸಿದರು.

ಬಂಗಾರು ತಿರುಪತಿ ಮಾರ್ಗವಾಗಿ ಕೋಡಿಹಳ್ಳಿ ಗ್ರಾಮದ ಒಳಗಿನ ಕೋಡಿ ಹರಿಯುತ್ತಿರುವ ಪ್ರದೇಶಕ್ಕೆ ಹೋಗಬೇಕಾದ ರಸ್ತೆ ಸಂಪೂರ್ಣವಾಗಿ ಹಾಳಾಗಿದ್ದು ಅದನ್ನು ಸರಿಪಡಿಸಲು ಎರಡು ಗಂಟೆಗಳ ಕಾಲಾವಕಾಶ ನೀಡಲಾಗಿದೆ ಎಂದು ಸೂಚಿಸಿದರು.

ಮುಂದಿನ ದಿನಗಳಲ್ಲಿ ಬೋಟಿಂಗ್ ಆರಂಭ ಮಾಡಬಹುದಾಗಿದೆ ಮತ್ತು ಪ್ರವಾಸಿತಾಣವಾಗಿ ಅಭಿವೃದ್ಧಿ ಪಡಿಸುವ ಎಲ್ಲಾ ಅವಕಾಶಗಳು ಮತ್ತು ಸಾಮರ್ಥ್ಯವಿದೆ. ಆದ್ದರಿಂದ ಈಗಾಗಲೇ ಬೇತಮಂಗಲ ಕೆರೆಯನ್ನು ಸಿ.ಎಸ್.ಆರ್.ಅನುದಾನವನ್ನು ಬಳಸಿಕೊಂಡು ಅಭಿವೃದ್ಧಿ ಮಾಡಲಾಗುವುದು ಎಂದರು

ಬೇತಮಂಗಲ ಮತ್ತು ಕೆಜಿಎಫ್ ನಗರಗಳಿಗೆ ಕುಡಿಯುವ ನೀರು ಸರಬರಾಜು ಮಾಡಲು ನಮ್ಮ ಬಳಿ ಸಾಕಷ್ಟು ನೀರಿದೆ. ಆದರೆ ನೀರು ಶುದ್ಧೀಕರಣ ಮತ್ತು ಶೇಖರಣೆ ಮಾಡುವ ಸಾಮರ್ಥ್ಯ ಕಡಿಮೆ ಇರುವುದರಿಂದ ಮುಂದಿನ ದಿನಗಳಲ್ಲಿ ಇದರ ಸಾಮರ್ಥ್ಯವನ್ನು ಹೆಚ್ಚಿಸುವ ಕೆಲಸವನ್ನು ಮಾಡಿ ಎರಡು ನಗರಗಳಿಗೂ ಕುಡಿಯುವ ನೀರಿನ ಸೂಕ್ತ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದರು.

ಪೋಲಿಸ್ ಇಲಾಖೆ ವತಿಯಿಂದ ತುರ್ತು ಸಂದರ್ಭದಲ್ಲಿ ಲೈಟ್ಗಳ ವ್ಯವಸ್ಥೆ ಬೇಕಾಗುತ್ತದೆ ಮತ್ತು ತಕ್ಷಣವೇ ಹೆಚ್ಚು ನೀರು ಹರಿಯುವ ಪ್ರದೇಶಕ್ಕೆ ಯಾರನ್ನು ಬಿಡದೇ ಪೊಲೀಸರನ್ನು ನಿಯೋಜಿಸಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಅನುಭವಿ ಈಜು ಪಟುಗಳನ್ನು ಗುರುತಿಸಿ ನಿಯೋಜಿಸಿ, ತುರ್ತು ಸಂದರ್ಭದಲ್ಲಿ ಬೋಟಿಂಗ್ ವ್ಯವಸ್ಥೆಯನ್ನು ಮಾಡಿಕೊಳ್ಳಬೇಕು ಎಂದರು.

ಅಧಿಕಾರಿಗಳಿಗೆ ಕ್ಲಾಸ್:- ಸುಮಾರು ಅದಿನೈದು ದಿನಗಳಿಂದ ನಿರಂತರವಾಗಿ

ಪಾಲಾರ್ ನದಿಯು ಕೊಡಿ ಹೋಗುತ್ತಿದ್ದು ಸ್ಥಳೀಯ ಗ್ರಾಮ ಪಂಚಾಯಿತಿ,ಕಂದಾಯ ಇಲಾಖೆ,ಜಲಮಂಡಳಿ ,ಪೊಲೀಸ್ ಇಲಾಖೆ ಸೇರಿದಂತೆ ಯಾರೊಬ್ಬರು ಸಹ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳದೆ. ಇರುವುದನ್ನು ಗಮನಿಸಿದ ಜಿಲ್ಲಾಧಿಕಾರಿಗಳು ಸ್ಥಳದಲ್ಲೇ ಇದ್ದಂತ ತಹಶೀಲ್ದಾರ್ ಹಾಗೂ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾ ಅಧಿಕಾರಿ ಯವರಿಗೆ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.

ಎರಡು ಗಂಟೆ ಗಡುವು : ಸುಮಾರು ೧೨ ಗಂಟೆಗೆ ಭೇಟಿ ನೀಡಿದ ಜಿಲ್ಲಾಧಿಕಾರಿಗಳು ಪಾಲಾರ್ ನದಿಯು ಹರಿಯುತ್ತಿದ್ದು ಕೋಡಿಹಳ್ಳಿ ಭಾಗದಲ್ಲಿ ತಾತ್ಕಾಲಿಕವಾಗಿ ಜನರು ಅಂಗಡಿ ಮುಂಗಟ್ಟುಗಳನ್ನು ನಿರ್ಮಾಣ ಮಾಡಿಕೊಂಡು ವ್ಯಾಪಾರ ನಡೆಸುತ್ತಿದ್ದು ಅಂಗಡಿಗಳ ಕಸವನ್ನು ಅಲ್ಲಿಯೇ ಹಾಕಿ ಈ ಪ್ರವಾಸಿ ತಾಣದ ಸೌಂದರ್ಯವನ್ನು ಹಾಳು ಮಾಡುತ್ತಿದೆ. ಆದ್ದರಿಂದ ಸ್ಥಳೀಯ ಗ್ರಾಮ ಪಂಚಾಯಿತಿ ಅಧಿಕಾರಿಗಳು ಮಧ್ಯಾಹ್ನ ೨ ಗಂಟೆಗಳ ಒಳಗಾಗಿ ಸ್ವಚ್ಛತೆಯನ್ನು ಮಾಡಿಸಿ ನಮಗೆ ತಿಳಿಸಬೇಕು ಎಂದು ಸೂಚಿಸಿದರು.

ಕೆರೆಗಳ ಒತ್ತುವರಿ ತೆರವು ಕಾರ್ಯ ಪ್ರಗತಿಯಲಿದ್ದು, ಜಿಲ್ಲೆಯಲ್ಲಿ ಒಟ್ಟು ೩೨೩೨ ಕೆರೆಗಳಿದ್ದು, ಅದರಲ್ಲಿ ೨೭೦೦ ಕೆರೆಗಳ ಸರ್ವೇ ಮಾಡಿ ಜೊತೆಗೆ ಒತ್ತುವರಿ ತೆರವು ಗೊಳಿಸುವ ಕೆಲಸವನ್ನು ಮಾಡಲಾಗುತ್ತಿದೆ ಎಂದರು.

ಈ ಸಂದರ್ಭದಲ್ಲಿ ಕೆ.ಜಿ.ಎಫ್ ತಹಶೀಲ್ದಾರ್ ಭರತ್, ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಾಹಣಾಧಿಕಾರಿ ವೆಂಕಟೇಶಪ್ಪ, ಕರ್ನಾಟಕ ನೀರು ಸರಬರಾಜು ಮತ್ತು ಒಳ ಚರಂಡಿ ಮಂಡಳಿಯ ಕಾರ್ಯಪಾಲಕ ಅಭಿಯಂತರರಾದ ಚಂದ್ರಶೇಖರ್, ಸಹಾಯಕ ಅಭಿಯಂತರರಾದ ಎನ್.ಕೆ ವಿಕ್ರಾಂತ್, ಬೇತಮಂಗಲ ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ವಸಂತ್ ಕುಮಾರ್ ಹಾಗೂ ಅಧ್ಯಕ್ಷ ವಿನುಕಾರ್ತಿಕ್, ಪೊಲೀಸ್ ಸಬ್ ಇನ್ಸ್ಪೆಕ್ಟರ್ ನಾರಾಯಣಸ್ವಾಮಿ, ಹುಳ್ಕೂರು ಗ್ರಾಮ ಪಂಚಾಯ್ತಿ ಸಿಬ್ಬಂದಿ ಹಾಗೂ ಕಂದಾಯ ಇಲಾಖೆ ಸಿಬ್ಬಂದಿ ಉಪಸ್ಥಿತರಿದ್ದರು.

ಚಿತ್ರ : ಕೋಲಾರ ಜಿಲ್ಲಾಧಿಕಾರಿ ಎಂ.ಆರ್. ರವಿ ಅವರು ಖುದ್ದಾಗಿ ಪಾಲಾರ್ ನದಿ ಹರಿಯುವ ಗೇಟ್ಗಳ ಮೇಲೆ ಸಂಚರಿಸಿ ಬಿರುಕು ಬಿಟ್ಟಿರುವ ಪಿಲ್ಲರ್ ಗಳನ್ನು ಗಮನಿಸಿದರು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande