ಕಾರ್ಮಿಕರು ಸಂಘಟಿತರಾಗಿ ಹಕ್ಕುಗಳನ್ನು ಪಡೆಯಲು ಮಾಜಿ ಸಂಸದ ಸಲಹೆ
ಕಾರ್ಮಿಕರು ಸಂಘಟಿತರಾಗಿ ಹಕ್ಕುಗಳನ್ನು ಪಡೆಯಲು ಮಾಜಿ ಸಂಸದ ಸಲಹೆ
ಕೋಲಾರದ ಟಿ.ಚನ್ನಯ್ಯ ರಂಗಮ0ದಿರದಲ್ಲಿ ಜಿಲ್ಲಾ ಬಣ್ಣ ಕಾರ್ಮಿಕರ ಕ್ಷೇಮಾಭಿವೃದ್ದಿ ಸಂಘದ ೨೦ನೇ ವಾರ್ಷಿಕೋತ್ಸವವನ್ನು ಮಾಜಿ ಸಂಸದ ಎಸ್.ಮುನಿಸ್ವಾಮಿ ಉದ್ಘಾಟಿಸಿದರು.


ಕೋಲಾರ, ೧೯ ಅಕ್ಟೋಬರ್ (ಹಿ.ಸ) :

ಆ್ಯಂಕರ್ : ದೇಶದ ಮನೆಗಳನ್ನು ವರ್ಣಮಯಗೊಳಿಸುವ ಬಣ್ಣದ ಕಾರ್ಮಿಕರ ಮನೆಗಳಲ್ಲಿ ಇನ್ನೂ ಅಂಧಕಾರವಿದ್ದು, ಅವರನ್ನು ಸಂಘಟಿಸುವ ಮೂಲಕ ಕೇಂದ್ರ ರಾಜ್ಯ ಸರ್ಕಾರದ ಸೌಲಭ್ಯಗಳನ್ನು ಅವರಿಗೆ ಸಮರ್ಪಕವಾಗಿ ತಲುಪಿಸಬೇಕು, ಸಂವಿಧಾನ ನೀಡಿರುವ ಹಕ್ಕುಗಳನ್ನು ಕಿತ್ತುಕೊಳ್ಳುವ ಶಕ್ತಿ ಗಳಿಸಬೇಕು ಎಂದು ಮಾಜಿ ಸಂಸದ ಎಸ್.ಮುನಿಸ್ವಾಮಿ ಕರೆ ನೀಡಿದರು.

ನಗರದ ಟಿ.ಚನ್ನಯ್ಯ ರಂಗಮAದಿರದಲ್ಲಿ ಜಿಲ್ಲಾ ಬಣ್ಣ ಕಾರ್ಮಿಕರ ಕ್ಷೇಮಾಭಿವೃದ್ದಿ ಸಂಘದ ೨೦ನೇ ವಾರ್ಷಿಕೋತ್ಸವ ಹಾಗೂ ಸಂಘದ ಹಿರಿಯರನ್ನು ಸನ್ಮಾನಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಕೇಂದ್ರದ ನರೇಂದ್ರಮೋದಿ ಸರ್ಕಾರ ಪಿಎಂ ಸ್ವನಿಧಿ ಯೋಜನೆ, ವಿಶ್ವಕರ್ಮ ಕೌಶಲ್ಯ ತರಬೇತಿ ಯೋಜನೆ, ವಿಮೆ ಸೌಲಭ್ಯ ಹೀಗೆ ಹಲವಾರು ಕಾರ್ಯಕ್ರಮಗಳನ್ನು ನೀಡಿದೆ, ಮೊದಲು ಗುರುತಿನ ಚೀಟಿ ಇ-ಶ್ರಮ ಕಾರ್ಡ್ ಮಾಡಿಸಿಕೊಳ್ಳಿ ಸೌಲಭ್ಯಗಳನ್ನು ಪಡೆಯಿರಿ ಎಂದು ತಾಕೀತು ಮಾಡಿದರು.

ಕೈಗಾರಿಕೆ ವಲಯ ಮಾತ್ರವಲ್ಲ, ಅಸಂಘಟಿತ ಕಾರ್ಮಿಕರಿಗೂ ಇಎಸ್‌ಐ ಆಸ್ಪತ್ರೆ ಸೌಲಭ್ಯಗಳಿದ್ದು, ಅದನ್ನು ಬಳಸಿಕೊಳ್ಳಿ ಎಂದ ಅವರು, ಕೇಂದ್ರ ಸರ್ಕಾರ ಆಸ್ಪತ್ರೆಗಾಗಿ ೧೦೦ ಕೋಟಿ ಬಿಡುಗಡೆ ಮಾಡಿದೆ, ವೇಮಗಲ್ ಕೈಗಾರಿಕಾ ಪ್ರದೇಶದಲ್ಲಿ ೫.೫ ಎಕರೆ ಜಾಗ ಮೀಸಲಿಟ್ಟಿದ್ದೇವೆ. ರಾಜ್ಯ ಸರ್ಕಾರ ಕಟ್ಟಡ ನಿರ್ಮಾಣ ತೆರಿಗೆಯಲ್ಲಿ ಪಡೆಯುವ ಕಾರ್ಮಿಕರ ಸೆಸ್ ಹಣವನ್ನು ಇಂದಿರಾ ಕ್ಯಾಂಟೀನ್‌ಗೆ ಬಳಸುತ್ತಿದೆ, ಇದರಿಂದಾಗಿ ಕಾರ್ಮಿಕರ ಮಕ್ಕಳ ವಿದ್ಯಾಭ್ಯಾಸ, ವಿದ್ಯಾರ್ಥಿವೇತನ ನೀಡದೇ ವಂಚಿಸುತ್ತಿದೆ. ಕಾರ್ಮಿಕರ ಕಲ್ಯಾಣಕ್ಕಾಗಿ ಬಳಸಬೇಕಾದ ಸಾವಿರಾರು ಕೋಟಿ ಸೆಸ್ ಹಣ ದುರ್ಬಳಕೆಯಾಗುತ್ತಿದೆ, ಇಂತಹ ಅನ್ಯಾಯವನ್ನು ಪ್ರಶ್ನಿಸುವ ಶಕ್ತಿ ಪಡೆದುಕೊಳ್ಳಿ, ಬಡವರ ನೆರವಿಗೆ ಯಾರೂ ಬರಲ್ಲ ನೀವೇ ಒಗ್ಗಟ್ಟಾಗಬೇಕು ಎಂದರು.

ರಾಜ್ಯ ಸರ್ಕಾರದ ಆರ್ಥಿಕ ನೀತಿಯಿಂದಾಗಿ ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರಿಗೆ ಕಳೆದ ೭ ತಿಂಗಳಿAದ ಸಂಬಳ ನೀಡಿಲ್ಲ ಎಂದು ಮಾಜಿಸಂಸದ ಮುನಿಸ್ವಾಮಿ ಆರೋಪಿಸಿ, ಕಾರ್ಮಿಕರ ಹಿತ ಕಾಯುವಲ್ಲಿ ವಿಫಲವಾಗಿದೆ, ಕಳೆದ ಆರು ತಿಂಗಳಿAದ ಕನ್ನಡ ಸಂಸ್ಕೃತಿ ಇಲಾಖೆಯ ಕಲಾವಿದರಿಗೆ ಹಣ ನೀಡಿಲ್ಲ ಎಂದರು.

ಪತ್ರಕರ್ತರ ಸಹಕಾರ ಸಂಘದ ಅಧ್ಯಕ್ಷ ಕೆ.ಎಸ್.ಗಣೇಶ್ ಮಾತನಾಡಿ, ಬಣ್ಣ ಕೆಲಸಗಾರರು ಶೇ.೫೦ಕ್ಕೂ ಹೆಚ್ಚು ಉತ್ತರ ಭಾರತದವರು ಬಂದಿದ್ದಾರೆ, ಮುಂದಿನ ದಿನಗಳಲ್ಲಿ ನಿಮ್ಮ ಉದ್ಯೋಗಕ್ಕೂ ಕತ್ತರಿ ಬೀಳಲಿದೆ ಎಂದು ಎಚ್ಚರಿಸಿ, ನೀವು ಸಂಘಟಿತರಾಗದಿದ್ದರೆ ಅಸ್ಥಿತ್ವಕ್ಕೆ ಧಕ್ಕೆ ಬರಲಿದ್ದು, ಇದರ ವಿರುದ್ದ ಕಾರ್ಯಯೋಜನೆ ರೂಪಿಸಿಕೊಳ್ಳಿ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನಗರಸಭೆ ಮಾಜಿ ಉಪಾಧ್ಯಕ್ಷ ವಿ.ಕೆ.ರಾಜೇಶ್, ಜಿಲ್ಲೆಯಲ್ಲಿ ಅಶುದ್ದ ನೀರಿನಿಂದ ಮಾರಕ ಪರಿಣಾಮವಾಗುತ್ತಿದೆ, ಆಯುಷ್ಯ ಕುಸಿಯಲಿದೆ, ಭವಿಷ್ಯ ಆತಂಕಕಾರಿಯಾಗಿದ್ದು, ಶುದ್ದ ನೀರಿಗಾಗಿ ತೆಲಂಗಣ ಮಾದರಿ ಹೋರಾಟ ರೂಪಿಸಲು `ಜಲಾಗ್ರಹ' ಪ್ರತಿಭಟನೆ ರೂಪಿಸಲಾಗಿದ್ದು, ಸಹಕಾರ ನೀಡಿ ಎಂದರು.

ನಗರಸಭಾ ಸದಸ್ಯ ಪ್ರವೀಣ್ ಗೌಡ, ಸಂಘಟಿತರಾಗುವ ಮೂಲಕ ಸೌಲಭ್ಯಗಳನ್ನು ಪಡೆದುಕೊಳ್ಳಲು ಕರೆ ನೀಡಿದರು. ಇದೇ ಸಂದರ್ಭದಲ್ಲಿ ಹಿರಿಯ ಬಣ್ಣ ಕಾರ್ಮಿಕರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಬಣ್ಣ ಕಾರ್ಮಿಕರ ಸಂಘದ ಜಿಲ್ಲಾಧ್ಯಕ್ಷ ಕೆ.ಎನ್.ನಾಗೇಶ್, ಅಪ್ಪಿನಾರಾಯಣಸ್ವಾಮಿ, ಕಾಡುಗುರು ನಾಗಭೂಷಣ್, ವಂಶೋಧಯ ಆಸ್ಪತ್ರೆಯ ನಾಗೇಶ್, ವಕೀಲರ ಸಂಘದ ಉಪಾಧ್ಯಕ್ಷ ಸುಬ್ರಮಣಿ,ಲಯನ್ಸ್ ಕ್ಲಬ್ ಅಧ್ಯಕ್ಷ ಲಕ್ಷಿö್ಮನಾರಾಯಣ, ಶಿವಶೇಖರ್,ಕೆ.ಆರ್.ಎನ್.ಎಂಟರ್ ಪ್ರೆöÊಸಸ್‌ನ ಮುರಲಿ, ಡಾ.ಚೇತನ,ರಾಜ್ ಕುಮಾರ್, ಈನೆಲ ಈಜಲ ವೆಂಕಟಾಚಲಪತಿ ಭಾಗವಹಿಸಿದ್ದರು.

ಚಿತ್ರ : ಕೋಲಾರದ ಟಿ.ಚನ್ನಯ್ಯ ರಂಗಮ0ದಿರದಲ್ಲಿ ಜಿಲ್ಲಾ ಬಣ್ಣ ಕಾರ್ಮಿಕರ ಕ್ಷೇಮಾಭಿವೃದ್ದಿ ಸಂಘದ ೨೦ನೇ ವಾರ್ಷಿಕೋತ್ಸವವನ್ನು ಮಾಜಿ ಸಂಸದ ಎಸ್.ಮುನಿಸ್ವಾಮಿ ಉದ್ಘಾಟಿಸಿದರು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande