ಬಳ್ಳಾರಿ : ಅಕ್ಟೋಬರ್ 25, 26ರಂದು ರಾಜ್ಯ ಮಟ್ಟದ ಟೇಬಲ್ ಟೆನ್ನಿಸ್ ಪಂದ್ಯಾವಳಿ
ಬಳ್ಳಾರಿ, 18 ಅಕ್ಟೋಬರ್ (ಹಿ.ಸ.) : ಆ್ಯಂಕರ್ : ಸುವರ್ಣ ಬಳ್ಳಾರಿ ಜಿಲ್ಲಾ ಟೇಬಲ್ ಟೆನ್ನಿಸ್ ಅಸೋಸಿಯೇಷನ್ ಅಕ್ಟೋಬರ್‍ನ 25 ಮತ್ತು 26ರಂದು ಬಳ್ಳಾರಿಯ ಎಸ್‍ಪಿ ಸರ್ಕಲ್ ಹತ್ತಿರ ಇರುವ ಜಿಮ್ಕಾನದಲ್ಲಿ ರಾಜ್ಯಮಟ್ಟದ ವೆಟರ್ನಸ್ ಟೇಬಲ್ ಟೆನ್ನಿಸ್ ಪಂದ್ಯಾವಳಿಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಟೆನ್ನಿಸ್ ತರ
ಬಳ್ಳಾರಿ : ಅಕ್ಟೋಬರ್ 25, 26ರಂದು ರಾಜ್ಯಮಟ್ಟದ ಟೇಬಲ್ ಟೆನ್ನಿಸ್ ಪಂದ್ಯಾವಳಿ


ಬಳ್ಳಾರಿ, 18 ಅಕ್ಟೋಬರ್ (ಹಿ.ಸ.) :

ಆ್ಯಂಕರ್ : ಸುವರ್ಣ ಬಳ್ಳಾರಿ ಜಿಲ್ಲಾ ಟೇಬಲ್ ಟೆನ್ನಿಸ್ ಅಸೋಸಿಯೇಷನ್ ಅಕ್ಟೋಬರ್‍ನ 25 ಮತ್ತು 26ರಂದು ಬಳ್ಳಾರಿಯ ಎಸ್‍ಪಿ ಸರ್ಕಲ್ ಹತ್ತಿರ ಇರುವ ಜಿಮ್ಕಾನದಲ್ಲಿ ರಾಜ್ಯಮಟ್ಟದ ವೆಟರ್ನಸ್ ಟೇಬಲ್ ಟೆನ್ನಿಸ್ ಪಂದ್ಯಾವಳಿಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಟೆನ್ನಿಸ್ ತರಬೇತುದಾರ ಶಿವಾನಂದ ಅವರು ತಿಳಿಸಿದ್ದಾರೆ.

ಪತ್ರಿಕಾ ಹೇಳಿಕೆ ನೀಡಿರುವ ಅವರು, ಪಂದ್ಯಾವಳಿಯಲ್ಲಿ 40 ರಿಂದ 88 ವರ್ಷದ ಪುರುಷ ಮತ್ತು ಮಹಿಳೆಯರು

ಪ್ರತ್ಯೇಕವಾಗಿ ಪಂದ್ಯಗಳನ್ನು ನಡೆಸಲಾಗುತ್ತದೆ. ಈ ಪಂದ್ಯಾವಳಿಯಲ್ಲಿ ಭಾಗವಹಿಸಲು ಇಚ್ಛಿಸುವವರು ಅಕ್ಟೋಬರ್ 21 ರ ಸಂಜೆ 5:00 ಒಳಗೆ ಸುವರ್ಣ ಬಳ್ಳಾರಿ ಜಿಲ್ಲಾ ಟೇಬಲ್ ಟೆನಿಸ್ ಅಸೋಸಿಯೇಷನ್ ತರಬೇತುದಾರ ಶಿವನಂದ ಅವರ ಮೊಬೈಲ್ ಸಂಖ್ಯೆ 810530 4949 ಸಂಪರ್ಕಿಸಬಹುದಾಗಿದೆ ಎಂದರು.

ಈ ಪಂದ್ಯಾವಳಿಯು ಅಕ್ಟೋಬರ್ 25 ರಂದು ಮುಂಜಾನೆ 9:00 ಗಂಟೆಗೆ ಪಂದ್ಯಾವಳಿ ಉದ್ಘಾಟನೆ. ಪಂದ್ಯಾವಳಿಯನ್ನು ಕೋ ಆರ್ಡಿನೇಟರ್ಸ್‍ಗಳಾದ ಜಗದೀಶ್ ಬಿದರ ಕೋಟಿ, ಶಿವಕುಮಾರ್ ಎಂ. ಸಂದೀಪ್ ಮತ್ತು ಕೆ.ಎನ್. ಉದಯಶಂಕರ್ ರಾವ್ ಮತ್ತು ಗೋಪಿನಾಥ್ ಡಿ.ಪಿ. ಅವರು ನಡೆಸಿಕೊಡುವರು ಎಂದರು.

ಅಕ್ಟೋಬರ್ 25 ರಂದು ಶನಿವಾರ 60 ವರ್ಷದ ಮೇಲ್ಪಟ್ಟ ಮಹಿಳೆ ಮತ್ತು ಪುರುಷರು ಸಿಂಗಲ್ ಮತ್ತು ಡಬಲ್ಸ್ ಪಂದ್ಯಗಳು ನಡೆಯುವವು. 26 ರಂದು ಭಾನುವಾರ 40 ವರ್ಷ ಮೇಲ್ಪಟ್ಟ ಪುರುಷರ ಓಪನ್ ಡಬಲ್ಸ್ ಪಂದ್ಯಾವಳಿ ನಡೆಯುವುದು. ಓಪನ್ ಡಬಲ್ಸ್ ಪಂದ್ಯಾವಳಿಯಲ್ಲಿ ಭಾಗವಹಿಸುವರು. ತಮ್ಮ ಸಹಪಾಠಿ ಹೆಸರನ್ನು ಉದಯಶಂಕರ್ ರಾವ್ 94802 35091 ಇವರಿಗೆ ತಿಳಿಸಬಹುದು.

ಹೆಚ್ಚಿನ ಮಾಹಿತಿಗಾಗಿ ಪಂದ್ಯದ ಆಯೋಜಕರನ್ನು (810530 4949) ಸಂಪರ್ಕಿಸಬಹುದಾಗಿದೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande