ಕೊಪ್ಪಳ, 16 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ವಿಶ್ವ ಹೃದಯ ದಿನಾಚರಣೆಯ ಅಂಗವಾಗಿ ಕೆ.ಎಸ್. ಆಸ್ಪತ್ರೆ ವತಿಯಿಂದ ಅಕ್ಟೋಬರ್ 18ರಂದು ಜಿಲ್ಲಾ ಮೈದಾನದಲ್ಲಿ ಗಾಳಿಪಟ ಸ್ಪರ್ಧೆ ಹಾಗೂ ಗಾಳಿಪಟ ಪ್ರದರ್ಶನ ಕಾರ್ಯಕ್ರಮವನ್ನು ಭವ್ಯವಾಗಿ ಹಮ್ಮಿಕೊಳ್ಳಲಾಗಿದೆ.
ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಡಾ. ರಾಮ್ ಎಲ್. ಅರಸಿದ್ದಿ(ಪೊಲೀಸ್ ವರಿಷ್ಠಾಧಿಕಾರಿ (ಎಸ್.ಪಿ.) ಕೊಪ್ಪಳ ಜಿಲ್ಲೆ, ಡಾ. ಬಸವರಾಜ ಎಸ್. ಕ್ಯಾವಟರ್ (ಮುಖ್ಯಸ್ಥರು, ಕೆ ಎಸ್ ಆಸ್ಪತ್ರೆ ಕೊಪ್ಪಳ), ಡಾ. ಲಿಂಗರಾಜು ಟಿ. (ಜಿಲ್ಲಾ ಆರೋಗ್ಯಾಧಿಕಾರಿ), ಡಾ. ಕೆ.ಜಿ. ಕುಲಕರ್ಣಿ (ಹಿರಿಯ ಕುಟುಂಬ ವೈದ್ಯರು), ಡಾ. ಧನ್ ರೆಡ್ಡಿ (ನಿವೃತ್ತ ಜಿಲ್ಲಾ ಆರೋಗ್ಯಾಧಿಕಾರಿ), ಡಾ. ರುದ್ರೇಶ್ (ಕಾರ್ಡಿಯಾಲಜಿಸ್ಟ್) ಹಾಗೂ ಡಾ. ಗಗನ (ಇಂಟೆನ್ಸಿವಿಸ್ಟ್) ಉಪಸ್ಥಿತರಿರಲಿದ್ದಾರೆ.
ಈ ಸಂದರ್ಭದಲ್ಲಿ ಹೃದಯದ ಆರೋಗ್ಯ ಜಾಗೃತಿ ಕುರಿತು ಉಪನ್ಯಾಸ ಹಾಗು CPR (Cardio Pulmonary Resuscitation) ಕುರಿತು ಪ್ರಾಯೋಗಿಕ ಪ್ರದರ್ಶನ ನೀಡಲಿದ್ದಾರೆ.
ಕಾರ್ಯಕ್ರಮದ ಭಾಗವಾಗಿ ಮೂರು ವಿಭಾಗಗಳಲ್ಲಿ ಗಾಳಿಪಟ ಸ್ಪರ್ಧೆ ನಡೆಯಲಿದ್ದು, ಜೊತೆಗೆ ಟೀಮ್ ಮಂಗಳೂರು ವತಿಯಿಂದ ಅಂತಾರಾಷ್ಟ್ರೀಯ ಖ್ಯಾತಿಯ ಗಾಳಿಪಟ ಪ್ರದರ್ಶನವೂ ನಡೆಯಲಿದೆ. ಅಂತಾರಾಷ್ಟ್ರೀಯ ಗಾಳಿಪಟ ಹಾರಾಟಗಾರ ಸಂದೇಶ್ ಕಡ್ಡಿ ಮತ್ತು ಅವರ ತಂಡದ ವಿಶಿಷ್ಟ ಪ್ರದರ್ಶನ ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಲಿದೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್