ಇತಿಹಾಸ ನಿರ್ಮಿಸಿದ ಭಾರತೀಯ ಯುವ ಮಹಿಳಾ ಫುಟ್ಬಾಲ್ ತಂಡ
ಬಿಷ್ಕೆಕ್, 18 ಅಕ್ಟೋಬರ್ (ಹಿ.ಸ.) : ಆ್ಯಂಕರ್ : ಭಾರತೀಯ ಅಂಡರ್-17 ಮಹಿಳಾ ಫುಟ್ಬಾಲ್ ತಂಡವು 20 ವರ್ಷಗಳ ನಂತರ ಎಎಫ್‌ಸಿ ಅಂಡರ್-17 ಮಹಿಳಾ ಏಷ್ಯನ್ ಕಪ್ 2026 ಸ್ಪರ್ಧೆಗೆ ಅರ್ಹತೆ ಪಡೆಯುವ ಮೂಲಕ ಐತಿಹಾಸಿಕ ಸಾಧನೆ ಮಾಡಿದೆ. ಶುಕ್ರವಾರ ಕಿರ್ಗಿಸ್ತಾನ್ ಡೋಲನ್ ಒಮುರ್ಜಾಕೋವ್ ಕ್ರೀಡಾಂಗಣದಲ್ಲಿ ನಡೆದ
Football


ಬಿಷ್ಕೆಕ್, 18 ಅಕ್ಟೋಬರ್ (ಹಿ.ಸ.) :

ಆ್ಯಂಕರ್ : ಭಾರತೀಯ ಅಂಡರ್-17 ಮಹಿಳಾ ಫುಟ್ಬಾಲ್ ತಂಡವು 20 ವರ್ಷಗಳ ನಂತರ ಎಎಫ್‌ಸಿ ಅಂಡರ್-17 ಮಹಿಳಾ ಏಷ್ಯನ್ ಕಪ್ 2026 ಸ್ಪರ್ಧೆಗೆ ಅರ್ಹತೆ ಪಡೆಯುವ ಮೂಲಕ ಐತಿಹಾಸಿಕ ಸಾಧನೆ ಮಾಡಿದೆ.

ಶುಕ್ರವಾರ ಕಿರ್ಗಿಸ್ತಾನ್ ಡೋಲನ್ ಒಮುರ್ಜಾಕೋವ್ ಕ್ರೀಡಾಂಗಣದಲ್ಲಿ ನಡೆದ ಕ್ವಾಲಿಫೈಯಿಂಗ್ ಪಂದ್ಯದಲ್ಲಿ ಉಜ್ಬೇಕಿಸ್ತಾನ್ ವಿರುದ್ಧ 2-1 ಅಂತರದ ರೋಚಕ ಜಯ ದಾಖಲಿಸಿದ ಭಾರತ ಈ ಸಾಧನೆಯನ್ನು ಸಾಧಿಸಿತು.

ಉಜ್ಬೇಕಿಸ್ತಾನದ ಶಖ್ಜೋಡಾ ಅಲಿಖೋನೋವಾ 38ನೇ ನಿಮಿಷದಲ್ಲಿ ತಂಡಕ್ಕೆ ಮುನ್ನಡೆ ತಂದುಕೊಟ್ಟರೂ, ಭಾರತವು ಎರಡನೇಾರ್ಧದಲ್ಲಿ ಶಕ್ತಿಶಾಲಿ ಪುನರಾಗಮನ ಮಾಡಿತು. ಕೋಚ್ ಜೋಕಿಮ್ ಅಲೆಕ್ಸಾಂಡರ್ಸನ್ ಅವರ ತಂತ್ರಬದಲಾವಣೆ ನಿರ್ಣಾಯಕವಾಯಿತು. ಅವರು 40ನೇ ನಿಮಿಷದಲ್ಲಿ ಬೊನಿಫಿಲಿಯಾ ಶುಲ್ಲೈ ಬದಲಿಗೆ ತಂಡಮಣಿ ಬಾಸ್ಕೆ ಅವರನ್ನು ಮೈದಾನಕ್ಕಿಳಿಸಿದರು. ಬಾಸ್ಕೆ 55ನೇ ನಿಮಿಷದಲ್ಲಿ ಸಮಬಲದ ಗೋಲು ಗಳಿಸಿ, ನಂತರ 66ನೇ ನಿಮಿಷದಲ್ಲಿ ಅನುಷ್ಕಾ ಕುಮಾರಿ ಅವರ ಜಯದ ಗೋಲು ಸೃಷ್ಟಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು.

ಭಾರತವು ಈ ಮೊದಲು 2005ರಲ್ಲಿ ಈ ಟೂರ್ನಿಯಲ್ಲಿ ಭಾಗವಹಿಸಿತ್ತು, ಆದರೆ ಆಗ ಯಾವುದೇ ಅರ್ಹತಾ ಹಂತವಿರಲಿಲ್ಲ. ಈ ಬಾರಿ ಭಾರತವು ಅರ್ಹತಾ ಪಂದ್ಯಗಳ ಮೂಲಕ ಮೊದಲ ಬಾರಿಗೆ ನೇರವಾಗಿ ಸ್ಥಾನ ಗಳಿಸಿದೆ, ಇದು ಭಾರತೀಯ ಮಹಿಳಾ ಫುಟ್ಬಾಲ್‌ಗೆ ಮಹತ್ವದ ಘಟ್ಟವಾಗಿದೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande