ಕೃಷಿ ಹೊಂಡಕ್ಕೆ ಬಿದ್ದು ಮೂವರು ಮಕ್ಕಳ ಸಾವು
ವಿಜಯಪುರ, 16 ಅಕ್ಟೋಬರ್ (ಹಿ.ಸ.) : ಆ್ಯಂಕರ್ : ವಿಜಯಪುರ ತಾಲ್ಲೂಕಿನ ಮಿಂಚನಾಳ ಗ್ರಾಮದ ಮಹದೇವ ವಸ್ತಿಯಲ್ಲಿನ ಕೃಷಿಹೊಂಡಕ್ಕೆ ಬಿದ್ದು ಮೂವರು ಮಕ್ಕಳು ಮೃತಪಟ್ಟ ಘಟನೆ ಗುರುವಾರ ಸಂಜೆ ನಡೆದಿದೆ. ಕಾರ್ತಿಕ್ ಈಶ್ವರ ರಾಠೋಡ (8), ಸಪ್ನಾ ರಾಜು ರಾಠೋಡ (10) ಹಾಗೂ ಶಿವಮ್ ರಾಜು ರಾಠೋಡ (8) ಮೃತಪಟ್ಟ ಮಕ್
ಹೊಂಡ


ವಿಜಯಪುರ, 16 ಅಕ್ಟೋಬರ್ (ಹಿ.ಸ.) :

ಆ್ಯಂಕರ್ : ವಿಜಯಪುರ ತಾಲ್ಲೂಕಿನ ಮಿಂಚನಾಳ ಗ್ರಾಮದ ಮಹದೇವ ವಸ್ತಿಯಲ್ಲಿನ ಕೃಷಿಹೊಂಡಕ್ಕೆ ಬಿದ್ದು ಮೂವರು ಮಕ್ಕಳು ಮೃತಪಟ್ಟ ಘಟನೆ ಗುರುವಾರ ಸಂಜೆ ನಡೆದಿದೆ.

ಕಾರ್ತಿಕ್ ಈಶ್ವರ ರಾಠೋಡ (8), ಸಪ್ನಾ ರಾಜು ರಾಠೋಡ (10) ಹಾಗೂ ಶಿವಮ್ ರಾಜು ರಾಠೋಡ (8) ಮೃತಪಟ್ಟ ಮಕ್ಕಳು.

ಇವರು ಸಂಜೆ ವೇಳೆ ಕುರಿಗಳೊಂದಿಗೆ ಆಟವಾಡುತ್ತಿದ್ದಾಗ ಕೃಷಿ ಹೊಂಡದ ಕಡೆಗೆ ಹೋಗಿ ಜಾರಿ ಬಿದ್ದಿದ್ದಾರೆ. ಸಮೀಪದಲ್ಲೇ ಇದ್ದ ಬಾಲಕಿ ಇತರೆ ಮೂವರು ಮಕ್ಕಳು ಕೃಷಿಹೊಂಡದ ಕಡೆ ಹೋಗಿ ಬಾರದಿರುವುದನ್ನು ಗಮನಿಸಿ ಮನೆಯವರಿಗೆ ಮಾಹಿತಿ ನೀಡಿದ್ದಾಳೆ.

ಪಾಲಕರು ಹೋಗಿ ನೋಡುವಷ್ಟರಲ್ಲಿ ಮಕ್ಕಳು ಮೃತಪಟ್ಟಿರುವುದು ಖಚಿತವಾಗಿದೆ.

ಸ್ಥಳಕ್ಕೆ ತಹಸೀಲ್ದಾರ್ ಪ್ರಶಾಂತ ಚನಗೊಂಡ ಹಾಗೂ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

ಮಕ್ಕಳನ್ನು ಕಳೆದುಕೊಂಡ ಪಾಲಕರ ಆಕ್ರಂದನ ಮುಗಿಲು ಮುಟ್ಟಿತು. ವಿಜಯಪುರ ಗ್ರಾಮೀಣ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande