ಕೋಲಾರ, ೧೭ ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ಕೋಲಾರ ತಾಲೂಕಿನ ವೇಮಗಲ್ ಹೋಬಳಿಯ ಪುರಾಣ ಪ್ರಸಿದ್ಧ ಶ್ರೀ ಸೀತಿ ಭೈರವೇಶ್ವರ ಸ್ವಾಮಿ ನೆಲೆಸಿರುವ ಸೀತಿ ಗ್ರಾಮಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿಕೊಡಬೇಕೆಂದು ಕಾಂಗ್ರೆಸ್ ಮುಖಂಡ ಸೀತಿ ಹೊಸೂರು ಆಗ್ರಹಿಸಿದ್ದಾರೆ.
ಪತ್ರಿಕಾ ಹೇಳಿಕೆ ನೀಡಿರುವ ಅವರು, ಸೀತಿ ಗ್ರಾಮದ ಮುಜರಾಯಿ ಇಲಾಖೆಗೆ ಸೇರಿದ ಪುರಾಣ ಪ್ರಸಿದ್ಧ ಶ್ರೀ ಪತೇಶ್ವರಸ್ವಾಮಿ ಮತ್ತು ಶ್ರೀ ಭೈರವೇಶ್ವರ ಸ್ವಾಮಿ ಬೆಟ್ಟದ ಮೇಲೆ ನೆಲೆಸಿದ್ದು ಆಂಧ್ರ ಕೇರಳ ತಮಿಳುನಾಡು ಮೂರು ರಾಜ್ಯದ ಭಕ್ತಾದಿಗಳು ದಿನವೂ ಈ ಬೆಟ್ಟಕ್ಕೆ ಭೇಟಿಕೊಟ್ಟು ದೇವರ ಆಶೀರ್ವಾದ ಪಡೆಯಲು ದಿನವು ಸರಿಸುಮಾರು ೩೦೦ ಭಕ್ತಾಧಿಗಳು ಆಗಮಿಸುತ್ತಾರೆ. ಶನಿವಾರ, ಸೋಮವಾರ, ಮಂಗಳವಾರ ಈ ದಿನಗಳಲ್ಲಿ ಇನ್ನೂ ಹೆಚ್ಚಿನ ಭಕ್ತಾದಿಗಳು ಬರುತ್ತಾರೆ.
ವಿಪರ್ಯಾಸ ಎಂದರೆ ಇಲ್ಲಿ ಬರುವ ಭಕ್ತಾದಿಗಳಿಗೆ ಯಾವುದೇ ರೀತಿಯಲ್ಲಿ ತೊಂದರೆಯಾದರೆ ವ್ಯವಸ್ಥಿತವಾದ ಒಂದು ಆಸ್ಪತ್ರೆ ಇಲ್ಲ ವಿಶ್ರಾಂತಿ ಪಡೆಯಲು ಉತ್ತಮವಾದ ವಿಶ್ರಾಂತಿ ಕಟ್ಟಡ ಕೂಡ ಇಲ್ಲ ಇಲ್ಲಿನ ಸ್ಥಳೀಯರು ಓದಲು ಒಂದು ಗ್ರಂಥಾಲಯ ಕೂಡ ಇಲ್ಲ ಎಂದು ಬೇಸರ ವ್ತಕ್ತಪಡಿಸಿದ್ದಾರೆ.
ಕಾರ್ಯನಿರ್ವಹಿಸದ ಗ್ರಾಮ ಪಂಚಾಯಿತಿ: ಕಳೆದ ಮೂರು ನಾಲ್ಕು ತಿಂಗಳಿಂದ ಸೀತಿ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯು ಇಲ್ಲ ಕಾರ್ಯದರ್ಶಿಗಳು ಇಲ್ಲದೆ ಸಾರ್ವಜನಿಕರಿಗೆ ಅಡಚಣೆ ಉಂಟಾಗಿದೆ.
ದಿನವೂ ಅಲೆದಾಟ: ಸಾರ್ವಜನಿಕರು ಕಂದಾಯ ಕಟ್ಟಲು ಈ ಸ್ವತ್ತು ಮಾಡಿಸಿಕೊಳ್ಳಲು ಕಳೆದ ಮೂರು ನಾಲ್ಕು ತಿಂಗಳಿನಿಂದ ಕಚೇರಿಗೆ ದಿನವು ಬಂದು ಅಧಿಕಾರಿಗಳು ಇಲ್ಲದೆ ಗ್ರಾಮ ಪಂಚಾಯಿತಿಗೆ ಇಡಿ ಶಾಪ ಹಾಕಿ ವಾಪಸ್ ಹೋಗುತ್ತಿದ್ದಾರೆ. ಎಂದು ದೂರಿದರು.
ಕಾಂಗ್ರೆಸ್ ಮುಖಂಡ ಸೀತಿ ಹೊಸೂರು ಮುರುಳಿ ಗೌಡ ಮಾತನಾಡಿ, ಪುರಾಣ ಪ್ರಸಿದ್ಧ ಶ್ರೀ ಸೀತಿ ಭೈರವೇಶ್ವರ ಸ್ವಾಮಿ ನೆಲೆಸಿರುವ ಸೀತಿ ಗ್ರಾಮದ ಗ್ರಾಮ ಗ್ರಾಮ ಪಂಚಾಯಿತಿ ಕೇಂದ್ರ ಸ್ಥಾನದಲ್ಲಿ ಒಂದು ಆಸ್ಪತ್ರೆ , ಗ್ರಂಥಾಲಯ, ಪಶು ಆಸ್ಪತ್ರೆ , ಬ್ಯಾಂಕ್, ಅಂಚೆ ಕಚೇರಿ, ಕನಿಷ್ಠ ಪಕ್ಷ ಆರೋಗ್ಯ ಉಪ ಕೇಂದ್ರವೂ ಕೂಡ ಇಲ್ಲ ಸಂಬಂಧಪಟ್ಟ ಅಧಿಕಾರಿಗಳು ಸೀತಿ ಗ್ರಾಮಕ್ಕೆ ಈ ಎಲ್ಲಾ ಸಾರ್ವಜನಿಕರಿಗೆ ಲಭ್ಯ ಅನುಕೂಲಗಳನ್ನು ಮಾಡಬೇಕು ಎಂದು ತಿಳಿಸಿದರು.
ಚಿತ್ರ : ಸೀತಿ ಮುರಳೀಗೌಡ
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್