ಗುರುಗ್ರಾಮ, 14 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ಕೇಂದ್ರ ಗೃಹ ಸಚಿವ ಅಮಿತ್ ಶಾ ಮಂಗಳವಾರ ಹರಿಯಾಣದ ಮಾನೇಸರ್‌ನಲ್ಲಿ ನಡೆದ ರಾಷ್ಟ್ರೀಯ ಭದ್ರತಾ ಪಡೆಯ 41ನೇ ಸ್ಥಾಪನಾ ದಿನಾಚರಣೆಯಲ್ಲಿ ಭಾಗವಹಿಸಿ, ಎಂಟು ಎಕರೆ ಪ್ರದೇಶದಲ್ಲಿ ನಿರ್ಮಿಸಲಾಗುವ ಬ್ಲ್ಯಾಕ್ ಕ್ಯಾಟ್ ವಿಶೇಷ ಕಾರ್ಯಾಚರಣೆ ತರಬೇತಿ ಕೇಂದ್ರಕ್ಕೆ ಅಡಿಪಾಯ ಹಾಕಿದರು.
ಈ ವೇಳೆ ಅಮಿತ್ ಶಾ ಮಾತನಾಡಿ, ನಾಲ್ಕು ದಶಕಗಳಲ್ಲಿ ಎನ್.ಎಸ್. ಜಿ ಸಿಬ್ಬಂದಿ ರಾಷ್ಟ್ರ ರಕ್ಷಣೆಗಾಗಿ ಅತ್ಯುನ್ನತ ತ್ಯಾಗವನ್ನು ಸಲ್ಲಿಸಿದ್ದಾರೆ ಎಂದು ತಿಳಿಸಿದ್ದಾರೆ. ಧೈರ್ಯ, ದೇಶಭಕ್ತಿ ಮತ್ತು ಶ್ರೇಷ್ಠತೆಯನ್ನು ತನ್ನ ವಿಶಿಷ್ಟ ಲಕ್ಷಣಗಳೆಂದು ಗುರುತಿಸಿರುವ ಎನ್.ಎಸ್. ಜಿ, ಸಂಘಟಿತ ಅಪರಾಧ ಮತ್ತು ಭಯೋತ್ಪಾದನೆ ವಿರುದ್ಧ ಅಸಾಧಾರಣ ಯುದ್ಧ ನಡೆಸಿದೆ. ಮಾನೇಸರ್ ಎನ್.ಎಸ್. ಜಿ ಸಂಕೀರ್ಣದಲ್ಲಿ ನಡೆದ ಕಮಾಂಡೋ ಪ್ರದರ್ಶನವು ಪ್ರತಿಯೊಬ್ಬ ನಾಗರಿಕರಿಗೆ “ಭದ್ರತೆ ಸುರಕ್ಷಿತ ಕೈಯಲ್ಲಿ ಇದೆ” ಎಂಬ ತೃಪ್ತಿಯನ್ನು ನೀಡುತ್ತದೆ ಎಂದು ಅವರು ಹೇಳಿದ್ದಾರೆ.
ಎಂಟು ಎಕರೆ ಭೂಮಿಯಲ್ಲಿ ನಿರ್ಮಿಸಲಾಗುತ್ತಿರುವ ಹೊಸ ತರಬೇತಿ ಕೇಂದ್ರದ ವೆಚ್ಚ 141 ಕೋಟಿ ರೂ. ಆಗಿದ್ದು, ಭಯೋತ್ಪಾದನೆ ಎದುರಿಸಲು ಕಮಾಂಡೋಗಳಿಗೆ ಇಲ್ಲಿ ಅತ್ಯಾಧುನಿಕ ತರಬೇತಿ ನೀಡಲಾಗುವುದು. ದೇಶದ ಭದ್ರತೆಗಾಗಿ ಕೇಂದ್ರ ಸರ್ಕಾರ ಮಾತ್ರ ಸಾಕು ಎಂದು ಅಲ್ಲದೆ, ರಾಜ್ಯ ಸರ್ಕಾರಗಳು, ರಾಜ್ಯ ಪೊಲೀಸರ ವಿಶೇಷ ದಳಗಳು, ಎನ್.ಎಸ್. ಜಿ ಮತ್ತು ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್) ಒಟ್ಟಿಗೆ ಕೆಲಸ ಮಾಡುತ್ತಿವೆ ಎಂದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa