ಚಂಡೀಗಢ, 14 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ಪಂಜಾಬ್ ಪೊಲೀಸರು ಅಂತಾರಾಷ್ಟ್ರೀಯ ಶಸ್ತ್ರಾಸ್ತ್ರ ಕಳ್ಳಸಾಗಣೆ ಜಾಲ ಭೇದಿಸಿದ್ದಾರೆ. ಅಮೃತಸರ ಗ್ರಾಮೀಣ ಪೊಲೀಸ್ ತಂಡ ಕಾರ್ಯಾಚರಣೆ ನಡೆಸಿ ಕೆನಡಾದಿಂದ ಇತ್ತೀಚೆಗಷ್ಟೇ ಹಿಂದಿರುಗಿದ್ದ ಅಮರಬೀರ್ ಸಿಂಗ್ ಅಲಿಯಾಸ್ ಅಮರ್ ಎಂಬ ಕಳ್ಳಸಾಗಣೆದಾರನನ್ನು ಬಂಧಿಸಿದ್ದು ಬಂಧಿತನಿಂದ ಆರು ಪಿಸ್ತೂಲುಗಳು, 11 ಮ್ಯಾಗಜೀನ್‌ಗಳು, .30 ಬೋರ್‌ನ 91 ಲೈವ್ ಕಾರ್ಟ್ರಿಡ್ಜ್‌ಗಳು ಮತ್ತು 9 ಎಂಎಂನ 20 ಸುತ್ತುಗಳು ವಶಪಡಿಸಿಕೊಳ್ಳಲಾಗಿದೆ.
ಪಂಜಾಬ್ ಪೊಲೀಸ್ ಮಹಾನಿರ್ದೇಶಕ ಗೌರವ್ ಯಾದವ್ ಅವರು ಮಂಗಳವಾರ ಈ ಕುರಿತು ಮಾಹಿತಿ ನೀಡಿದ್ದು, ಬಂಧಿತನಿಗೆ ಪಾಕಿಸ್ತಾನಿ ಕಳ್ಳಸಾಗಣೆದಾರರೊಂದಿಗೆ ನೇರ ಸಂಪರ್ಕವಿತ್ತು ಎಂಬುದು ಪ್ರಾಥಮಿಕ ತನಿಖೆಯಿಂದ ಬಹಿರಂಗವಾಗಿದೆ ಎಂದು ಹೇಳಿದರು. ಅವರು ಈ ಜಾಲವು ಪಂಜಾಬ್ ಮೂಲಕ ಪಾಕಿಸ್ತಾನದಿಂದ ಬಂದ ಅಕ್ರಮ ಶಸ್ತ್ರಾಸ್ತ್ರಗಳನ್ನು ದೇಶದ ಒಳಭಾಗಕ್ಕೆ ಸಾಗಿಸುತ್ತಿತ್ತು ಎಂದು ತಿಳಿಸಿದ್ದಾರೆ.
ಪಂಜಾಬ್ ಪೊಲೀಸರು ಈ ಪ್ರಕರಣವನ್ನು “ಅಂತಾರಾಷ್ಟ್ರೀಯ ಕಳ್ಳಸಾಗಣೆ ಜಾಲವನ್ನು ಸಂಪೂರ್ಣವಾಗಿ ಧ್ವಂಸಗೊಳಿಸುವ ದೃಷ್ಟಿಯಿಂದ” ಗಂಭೀರವಾಗಿ ಕೈಗೊಂಡಿದ್ದು, ಗಡಿ ಪ್ರದೇಶಗಳಲ್ಲಿ ನಿಗಾವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಲಾಗಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa