ಭಾರತದಲ್ಲಿ ₹1.25 ಲಕ್ಷ ಕೋಟಿ ಹೂಡಿಕೆ : ಗೂಗಲ್‌ ಘೋಷಣೆ
ನವದೆಹಲಿ, 14 ಅಕ್ಟೋಬರ್ (ಹಿ.ಸ.) : ಆ್ಯಂಕರ್ : ಅಮೆರಿಕದ ತಂತ್ರಜ್ಞಾನ ದೈತ್ಯ ಗೂಗಲ್ ಭಾರತದಲ್ಲಿ ತನ್ನ ಅತಿದೊಡ್ಡ ಹೂಡಿಕೆಗೆ ಮುಂದಾಗಿದೆ. ಸಂಸ್ಥೆ ಆಂಧ್ರಪ್ರದೇಶದ ವಿಶಾಖಪಟ್ಟಣಂನಲ್ಲಿ ₹1.25 ಲಕ್ಷ ಕೋಟಿ (ಸುಮಾರು 15 ಬಿಲಿಯನ್ ಡಾಲರ್) ಮೊತ್ತದ ಕೃತಕ ಬುದ್ಧಿಮತ್ತೆ ಹಬ್ ಮತ್ತು ಡೇಟಾ ಸೆಂಟರ್ ಪಾರ್ಕ್
Google


ನವದೆಹಲಿ, 14 ಅಕ್ಟೋಬರ್ (ಹಿ.ಸ.) :

ಆ್ಯಂಕರ್ : ಅಮೆರಿಕದ ತಂತ್ರಜ್ಞಾನ ದೈತ್ಯ ಗೂಗಲ್ ಭಾರತದಲ್ಲಿ ತನ್ನ ಅತಿದೊಡ್ಡ ಹೂಡಿಕೆಗೆ ಮುಂದಾಗಿದೆ. ಸಂಸ್ಥೆ ಆಂಧ್ರಪ್ರದೇಶದ ವಿಶಾಖಪಟ್ಟಣಂನಲ್ಲಿ ₹1.25 ಲಕ್ಷ ಕೋಟಿ (ಸುಮಾರು 15 ಬಿಲಿಯನ್ ಡಾಲರ್) ಮೊತ್ತದ ಕೃತಕ ಬುದ್ಧಿಮತ್ತೆ ಹಬ್ ಮತ್ತು ಡೇಟಾ ಸೆಂಟರ್ ಪಾರ್ಕ್ ಸ್ಥಾಪಿಸುವುದಾಗಿ ಅಧಿಕೃತವಾಗಿ ಘೋಷಿಸಿದೆ.

ಈ ಮಹತ್ವಾಕಾಂಕ್ಷಿ ಯೋಜನೆಯನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಸ್ವಾಗತಿಸಿದ್ದು “ಭಾರತದ ತಂತ್ರಜ್ಞಾನ ನಾಯಕತ್ವದ ಹೊಸ ಅಧ್ಯಾಯ” ಎಂದು ಕರೆದಿದ್ದಾರೆ. ಅವರು ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯೆ ನೀಡಿ, “ಗೂಗಲ್‌ನ ಈ ಹೂಡಿಕೆ ಭಾರತದ ಯುವಜನತೆಗೆ ನವೀನತೆ ಮತ್ತು ಉದ್ಯೋಗದ ಹೊಸ ದಾರಿ ತೆರೆದಿದೆ. ಅಭಿವೃದ್ಧಿ ಹೊಂದಿದ ಭಾರತದ ದೃಷ್ಟಿಯತ್ತ ಇದು ದೃಢ ಹೆಜ್ಜೆ,” ಎಂದು ಹೇಳಿದ್ದಾರೆ.

ಗೂಗಲ್ ಕ್ಲೌಡ್ ಸಿಇಒ ಥಾಮಸ್ ಕುರಿಯನ್ ಅವರು, ಈ ಹೂಡಿಕೆ ಮೂಲಕ 1 ಗಿಗಾವ್ಯಾಟ್ ಸಾಮರ್ಥ್ಯದ ಡೇಟಾ ಸೆಂಟರ್ ನಿರ್ಮಾಣವಾಗಲಿದ್ದು, ಇದು ಶುದ್ಧ ಇಂಧನ ಮತ್ತು ಸುಧಾರಿತ ಜಲಾಂತರ್ಗಾಮಿ ಕೇಬಲ್ ಸಂಪರ್ಕ ವ್ಯವಸ್ಥೆ ಬಳಕೆ ಮಾಡಲಿದೆ ಎಂದು ತಿಳಿಸಿದ್ದಾರೆ. ಯೋಜನೆಗೆ ಅದಾನಿ ಕನೆಕ್ಸ್ ಮತ್ತು ಏರ್‌ಟೆಲ್ ಕಂಪನಿಗಳು ತಾಂತ್ರಿಕ ಸಹಭಾಗಿತ್ವ ನೀಡಲಿವೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande