ಕೋಲಾರ,೧೦ ಅಕ್ಟೋಬರ್ ೯(ಹಿ.ಸ) ಆಂಕರ್ ; ಪಾಲಾರ್ ನದಿ ಪಾತ್ರದಲ್ಲಿ ಸತತವಾಗಿ ಮಳೆಯಾಗುತ್ತಿದೆ.ನದಿಯಲ್ಲಿ ನೀರಿನ ಹರಿವು ಹೆಚ್ಚಿದ್ದು ಕೆ.ಜಿ.ಎಫ್ ತಾಲ್ಲೂಕಿನ ಬೇತಮಂಗಲ ಜಲಾಶಯದ ಒಡಲು ಸೇರುತ್ತಿದೆ. ಬೇತಮಂಗಲ ಸಮೀಪದ ನಲ್ಲೂರು ನತ್ತ ಬಳಿ ನದಿಯಲ್ಲಿ ಝಳು ಝುಳು ಎಂದು ನೀರು ಬೇತಮಂಗಲ ಜಲಾಶಯಕ್ಕೆ ಹರಿಯುತ್ತಿದೆ. ಮಳೆ ತಡವಾಗಿ ಆರಂಭವಾದ ಕಾರಣ ಈ ಭಾರಿ ಜಲಾಶಯ ತುಂಬುವುದಿಲ್ಲವೆಂದು ಜನರ ಆತಂಕಗೊಂಡಿದ್ದರು. ಆದರೆ ಕಳೆದ ಒಂದು ವಾರದಿಂದ ಪಾಲಾರ್ ನದಿಪಾತ್ರದಲ್ಲಿ ನಿರಂತರವಾಗಿ ಮಳೆಯಾಗುತ್ತಿದ್ದು ಜಲಾಶಯದಲ್ಲಿ ದಿನೇ ದಿನೇ ನೀರಿನ ಹರಿವು ಹೆಚ್ಚುತ್ತಿದ್ದು ಜನರು ಸಂತಸಗೊಂಡಿದ್ದಾರೆ. ಅವರ ಸಂತಸಕ್ಕೆ ಎರಡು ಕಾರಣಗಳಿವೆ. ನಲ್ಲೂರು ನತ್ತ ಸಮೀಪ ಐವತ್ತು ವರ್ಷಗಳ ಹಿಂದೆ ನಿರ್ಮಿಸಲಾಗಿದ್ದ ಸಣ್ಣ ಪ್ರಮಾಣದ ಸೇತುವೆಯ ಮೇಲೆ ನದಿಯ ನೀರಿನ ಹರಿವು ಹೆಚ್ಚುತ್ತಿದ್ದಂತೆ ಸಂಪರ್ಕ ಕಡಿದುಹೋಗುತ್ತಿತ್ತು. ಇದರಿಂದಾಗಿ ಸೇತುವೆ ಮತ್ತು ರಸ್ತೆ ನೀರಿನಲ್ಲಿ ಮುಳುಗಿ ಹೋಗಿ ನದಿ ದಾಟಲಾಗದೆ ಜನರು ಹೈರಾಣ ಆಗುತ್ತಿದ್ದರು. ಪ್ರಮುಖವಾಗಿ ನತ್ತ ಕಳ್ಳಿ ಕುಪ್ಪ ಕೋಗಿಲಹಳ್ಳಿ ಚಿನ್ನಪನಹಳ್ಲಿ ವಡ್ಡಹಳ್ಳಿ ಹಾಗು ಹಂಗಳ ಗ್ರಾಮಸ್ಥರು ನದಿದಾಟಲಾರದೆ ಪರದಾಡುತ್ತಿದ್ದರು. ಕೌವರಗಾನಹಳ್ಳಿಯ ಮೂಲಕ ಸುತ್ತಿ ಬಳಸಿ ಬೇತಮಂಗಲಕ್ಕೆ ಹೋಗುತ್ತಿದ್ದರು. ಶಾಲಾ ವಿದ್ಯಾರ್ಥಿಗಳು ರೋಗಿಗಳು ನದಿ ದಾಟಿ ಬೇತಮಂಗಲ ತಲುಪಲಾರದೆ ಆತಂಕ ಪಡುತ್ತಿದ್ದರು.ಶಾಲಾ ವಾಹನಗಳು ಸಹ ನದಿ ದಾಟಲಾರದೆ ವಿದ್ಯಾರ್ಥಿಗಳು ಶಾಲೆಗೆ ಗೈರುಹಾಜರಾಗುತ್ತಿದ್ದರು ಮಳೆ ತೀವ್ರಗೊಂಡಾಗ ಬೇತಮಂಗಲ ಕೆರೆ ದ್ವೀಪವಾಗುತ್ತಿತ್ತು. ಹಲವು ಬಾರಿ ನದಿ ದಾಟುವಾಗ ದ್ವಿಚಕ್ರ ವಾಹನಗಳು ಕೊಚ್ಚಿಹೋದ ಪ್ರಸಂಗಗಳು ಸಹ ವರದಿಯಾಗಿದ್ದವು.ಚುನಾವಣಾ ಸಮಯದಲ್ಲಿ ಭರವಸೆ ನೀಡಿದ ರಾಜಕಾರಣಿಗಳು ಮತ್ತೆ ಮುಂದಿನ ಚುನಾವಣೆಯ ವೇಳೆಗೆ ಮುಖ ತೋರಿಸುತ್ತಿದ್ದರು. ಅದೇ ಹಳೇ ಭರವಸೆ ನೀಡಿ ಮರೆಯಾಗುತ್ತಿದ್ದರು. ಕೆ.ಜಿ.ಎಫ್ ಕ್ಷೇತ್ರದಿಂದ ರೂಪಕಲ ಶಶಿಧರ್ ಶಾಸಕರಾಗಿ ಆಯ್ಕೆಯಾದನಂತರ ಹೊಸ ಸೇತುವೆ ನಿರ್ಮಿಸುವುದಾಗಿ ಭರವಸೆ ನೀಡಿದರು . ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಸಹ ಸಕಾರತ್ಮಕವಾಗಿ ಸ್ಪಂಧಿಸಿ ಸೇತುವೆ ಹಾಗು ರಸ್ತೆ ನಿರ್ಮಾಣಕ್ಕೆ ಅನುದಾನ ಬಿಡುಗಡೆ ಮಾಡಿದರು. ಒಂದು ವರ್ಷದಲ್ಲಿ ಕಾಮಗಾರಿ ಮುಗಿದು ಕಳೆದ ಬುಧವಾರ ಸೇತುವೆ ಮತ್ತು ರಸ್ತೆ ಲೋಕಾರ್ಪಣೆಗೊಂಡಿತು.ಆಧುನಿಕ ಭಗಿರಥೀ ಶಾಸಕಿ ರೂಪಾರವರ ಸತತ ಪರಿಶ್ರಮ ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಅಭಿಯಂತರದ ರಾಮ ಮೂರ್ತಿಯವರ ತಂಡದ ದೂರದೃಷ್ಠಿ ಹಾಗು ಇಚ್ಛಾಶಕ್ತಿ ಹಾಗು ಗುತ್ತಿದಾರರಾದ ವೆಂಕಟರಮಣ ಗೌಡರ ಬದ್ಧತೆಯಿಂದಾಗಿ ಕಾಮಗಾರಿ ನಿಗದಿತ ಸಮದಲ್ಲಿ ಮುಗಿದು ಸಂಚಾರಕ್ಕೆ ರಸ್ತೆ ಹಾಗು ಸೇತುವೆಯನ್ನು ತೆರೆಯಲಾಗಿದೆ. ಪಾಲಾರ್ ನದಿ ಉಕ್ಕಿ ಹರಿಯುತ್ತಿದ್ದು ಜನರು ಸಂತಸಗೊಂಡು ಕಣ್ತುಂಬಿಸಿಕೊಂಡಿದ್ದಾರೆ. ಹಿಂದೆ ಪಡಬಾರದ ಕಷ್ಟಗಳನ್ನು ಅನುಭವಿಸುತ್ತಿದ್ದರು. ಈಗ ಜನರು ನಿರಾಳಗೊಂಡಿದ್ದಾರೆ. ಯಾವುದೇ ಆತಂಕವಿಲ್ಲದೆ ಸೇತುವೆಯ ಮೂಲಕ ಜನರು ನದಿದಾಟುತ್ತಿದ್ದಾರೆ. ಬೇತಮಂಗಲ ಕೆ.ಜಿ.ಎಫ್ ಹಾಗು ಜಿಲ್ಲಾ ಕೇಂದ್ರವಾದ ಕೋಲಾರಕ್ಕು ನಿರಾಯಸವಾಗಿ ತಲುಪುತ್ತಿದ್ಧಾರೆ. ಗುರುವಾರ ರಾತ್ರಿ ಕೋಲಾರ ತಾಲ್ಳೂಕಿನ ತೊಂಡಾಳ ನಾಯಕರಹಳ್ಳಿ ಬಳಿ ಧಾರಕಾರವಾದ ಮಳೆ ಸುರಿದಿದೆ. ಮುದುವಾಡಿ ಎಸ್.ಅಗ್ರಹಾರ ಕೆರೆಗಳು ತುಂಬಿ ಹರಿಯುತ್ತಿವೆ.ಇದರಿಂದ ಪಾಲಾರ್ ನದಿಯಲ್ಲಿ ನೀರಿನ ಹರಿವು ಹೆಚ್ಚಿದೆ. ಶುಕ್ರವಾರ ಶಾಸಕಿ ರೂಪಕ ಹಾಗು ಇತರ ಮುಖಂಡರು ನತ್ತ ನಲ್ಲೂರು ಸೇತುವೆಗೆ ಬೇಟಿ ನೀಡಿ ಹರಿಯುತ್ತಿರುವ ಪಾಲಾರ್ ನದಿಯನ್ನು ನೋಡಿ ಸಂತಸಗೊಂಡರು.ಕೆಲವು ಕಾಲ ಸೇತುವೆಯ ಮೇಲೆ ಕುಳಿತು ರೂಪರವರು ನಿರಾಳವಾದರು. ಶಾಸಕಿ ರೂಪರವರನ್ನು ಗ್ರಾಮಸ್ಥರು ಸೇತುವೆಯ ಮೇಲೆ ಗಂಗೆಯ ವಿಗ್ರಹ ಅರ್ಪಿಸಿ ಶಾಲು ಹೊದಿಸಿ ಸನ್ಮಾನಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಅ.ಮು .ಲಕ್ಷ್ಮೀ ನಾರಾಯಣ್ ನಲ್ಲೂರು ಶಂಕರ್, ಸುರೇಂದ್ರ ಗೌಡ, ವಿನು ಕಾರ್ತಿಕ್ , ಇನಾಯತುಲ್ಲ ಷರಿಫ್, ವಿಜಯೇಂದ್ರ.,ಸುಕುನ್ಯ ವೆಂಕಟಾಚಲಪತಿ ಮುಂತಾದವರು ಹಾಜರಿದ್ದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್