ನ್ಯಾಯಮೂರ್ತಿ ಗವಾಯಿ ಮೇಲೆ ಶೂ ಎಸೆತ ; ಕ್ರಮಕ್ಕೆ ಕದಸಂಸ ಒತ್ತಾಯ
ನ್ಯಾಯಮೂರ್ತಿ ಗವಾಯಿ ಮೇಲೆ ಶೂ ಎಸೆತ ; ಕ್ರಮಕ್ಕೆ ಕದಸಂಸ ಒತ್ತಾಯ.
ಚಿತ್ರ ; ಕರ್ನಾಟಕ ದಲಿತ ಸಂಘರ್ಷ ಸಮಿತಿ ನೇತೃತ್ವದಲ್ಲಿ ಶುಕ್ರವಾರ ಕೋಲಾರ ಜಿಲ್ಲಾಧಿಕಾರಿ ಕಛೇರಿ ಮುಂದೆ ಪ್ರತಿಭಟನೆ ನಡೆಸಿ, ನ್ಯಾಯಮೂರ್ತಿ ಬಿ.ಆರ್ ಗವಾಯಿ ಶೂ ಎಸೆದವರ ವಿರುದ್ದ ಕ್ರಮಕ್ಕೆ ಒತ್ತಾಯಿಸಲಾಯಿತು.


ಕೋಲಾರ, ೧೦ ಅಕ್ಟೋಬರ್(ಹಿ.ಸ.) :

ಆ್ಯಂಕರ್ : ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಬಿ.ಆರ್ ಗವಾಯಿ ರವರ ಮೇಲಿನ ಘಟನೆ ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಮೇಲೆ ನಡೆದಿರುವ ಅವಮಾನವಾಗಿದೆ ಸಾಮಾಜಿಕ ನ್ಯಾಯ ಮತ್ತು ಜ್ಯಾತ್ಯತೀತ ನಿಲುವು ಹೊಂದಿರುವ ನ್ಯಾಯಾಧೀಶರ ಮೇಲಿನ ಘಟನೆಯು ಖಂಡನೀಯವಾಗಿದ್ದು ಇಂತಹ ಘಟನೆಗಳು ಮತ್ತೆ ಮರುಕಳಿಸದಂತೆ ರಾಷ್ಟ್ರಪತಿಗಳು ಹಾಗೂ ಕೇಂದ್ರ ಸರ್ಕಾರ ಎಚ್ಚರ ವಹಿಸಬೇಕು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಕದಸಂಸ ಅಂಬೇಡ್ಕರ್ ವಾದ )ನೇತೃತ್ವದಲ್ಲಿ ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ರಾಷ್ಟ್ರಪತಿಗಳಿಗೆ ಮನವಿ ಕಳಸಿ ಒತ್ತಾಯಿಸಿದರು.

ಸಂಘಟನೆಯ ಜಿಲ್ಲಾ ಸಂಘಟನಾ ಸಂಚಾಲಕ ಗಾಂಧಿನಗರ ಬಿ.ಶ್ರೀರಂಗ ಮಾತನಾಡಿ, ಭಾರತ ಸಂವಿಧಾನದ ಅತ್ಯುನ್ನತ ಅಂಗವಾದ ಸರ್ವೋಚ್ಚ ನ್ಯಾಯಾಲಯದ ನ್ಯಾಯ ಪೀಠದ ಮೇಲೆ ನಡೆದ ಶೂ ಎಸೆತದ ದಾಳಿಯನ್ನು ಪ್ರತಿಯೊಬ್ಬ ನಾಗರಿಕರು ಖಂಡಿಸಬೇಕಾಗಿದೆ ನ ಭಾರತದ ರಾಷ್ಟ್ರಪತಿಗಳು ತಕ್ಷಣ ಮಧ್ಯ ಪ್ರವೇಶ ಮಾಡಿ ಈ ಕೃತ್ಯ ಎಸಗಿರುವ ಆರೋಪಿ ರಾಕೇಶ ಕಿಶೋರ್ ಅವರನ್ನು ಕೂಡಲೇ ಬಂಧಿಸಿ ಉನ್ನತ ನ್ಯಾಯಾಂಗ ತನಿಖೆ ನಡೆಸಿ, ಈತನ ಕುಟುಂಬಕ್ಕೆ ಸಂಬಂಧಪಟ್ಟ ಆಸ್ತಿಯನ್ನು ಸರ್ಕಾರ ಮುಟ್ಟುಗೋಲು ಹಾಕಿಕೊಳ್ಳಬೇಕು. ಹಾಗೂ ಘಟನೆಯ ಹಿಂದೆ ವ್ಯವಸ್ಥಿತ ಪಿತೂರಿ ಮಾಡಿರುವ ಪ್ರಚೋದಕರನ್ನು ಪತ್ತೆ ಹಚ್ಚಿ ದೇಶದಿಂದ ಗಡಿಪಾರು ಮಾಡಬೇಕು ಎಂದು ಒತ್ತಾಯಿಸಿದರು.

ಜಿಲ್ಲಾ ಸಂಘಟನಾ ಸಂಚಾಲಕ ಪುರಹಳ್ಳಿ ಯಲ್ಲಪ್ಪ ಮಾತನಾಡಿ, ಸಂವಿಧಾನದ ಅಂಗವಾದ ನ್ಯಾಯಾಂಗದ ಹುದ್ದೆಯನ್ನು ಒಬ್ಬ ಪರಿಶಿಷ್ಟ ಜಾತಿಯವರಿಗೆ ಈ ಹುದ್ದೆ ಸಿಕ್ಕಿರುವುದನ್ನು ಸಹಿಸದ ಮನುವಾದಿ ಜಾತಿವಾದಿ ಕೋಮುವಾದಿಗಳ ಕುತಂತ್ರದಿಂದ ಈ ಘಟನೆ ನಡೆಸಿರುವುದನ್ನು ಕದಸಂಸ ಖಂಡಿಸುತ್ತದೆ ಈ ಅಹಿತಕರ ಘಟನೆಯ ಹೊಣೆಯನ್ನು ಭಾರತದ ದೇಶದ ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ರವರನ್ನು ಹೊಣೆಗಾರರನ್ನಾಗಿ ಮಾಡಬೇಕು ತಪ್ಪು ಮಾಡಿರುವ ಜಾತಿವಾದಿ ರಾಕೇಶ್ ಕಿಶೋರ್ ವಿರುದ್ದ ತನಿಖೆ ನಡೆಸಿ ಗಲ್ಲು ಶಿಕ್ಷೆಗೆ ಗುರಿಪಡಿಸಬೇಕೆಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಸಂಘಟನೆಯ ಜಿಲ್ಲಾ ಸದಸ್ಯರಾದ ಆವಣಿ ಕಾಶಿ, ಎ.ಕೆ.ವೆಂಕಟೇಶ್, ಜಮ್ಮನಹಳ್ಳಿ ಶ್ರೀನಿವಾಸ್, ಶಾಗತ್ತೂರು ಮುನಿಸ್ವಾಮಿ, ಗೋಪಾಸಂದ್ರ ವೆಂಕಟೇಶ್, ಎನ್ ಸಂಘರ್ಷ, ಕಳವಂಜಿ ಶ್ರೀನಿವಾಸ್ ಇದ್ದರು.

ಚಿತ್ರ : ಕರ್ನಾಟಕ ದಲಿತ ಸಂಘರ್ಷ ಸಮಿತಿ ನೇತೃತ್ವದಲ್ಲಿ ಶುಕ್ರವಾರ ಕೋಲಾರ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿ, ನ್ಯಾಯಮೂರ್ತಿ ಬಿ.ಆರ್ ಗವಾಯಿ ಶೂ ಎಸೆದವರ ವಿರುದ್ದ ಕ್ರಮಕ್ಕೆ ಒತ್ತಾಯಿಸಲಾಯಿತು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande