ಚೆನ್ನೈ,9 ಜನವರಿ (ಹಿ.ಸ.) :
ಆ್ಯಂಕರ್ : ಇಂಡಿಯನ್ ಸೂಪರ್ ಲೀಗ್ ಫುಟ್‌ಬಾಲ್ ಪಂದ್ಯದಲ್ಲಿ ಇಂದು ಒಡಿಶಾ ಎಫ್‌ಸಿ ಮತ್ತು ಚೆೆನ್ನೈ ಎಫ್‌ಸಿ ಮುಖಾಮುಖಿಯಾಗಲಿವೆ
ಈ ಪಂದ್ಯವು ಚೆನ್ನೈನ ಜವಾಹರಲಾಲ್ ನೆಹರು ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯಲಿದೆ. ಪಂದ್ಯವು ಸಂಜೆ ೭:೩೦ ಕ್ಕೆ ಪ್ರಾರಂಭವಾಗಲಿದೆ.
ಕಳೆದ ವರ್ಷದ ಪಂದ್ಯದಲ್ಲಿ ೩-೨ ಅಂತರದ ಗೆಲುವು ಸಾಧಿಸಿದ್ದ ಚೆನ್ನೈ, ಒಡಿಶಾ ವಿರುದ್ಧ ತನ್ನ ಯಶಸ್ಸನ್ನು ವಿಸ್ತರಿಸಲು ಪ್ರಯತ್ನಿಸುತ್ತಿದೆ. ಮತ್ತೊಂದೆಡೆ, ಒಡಿಶಾ ಎಫ್‌ಸಿ, ಗೋವಾ ಎಫ್‌ಸಿ ವಿರುದ್ಧದ ಇತ್ತೀಚಿನ ಸೋಲಿನಿಂದ ಚೇತರಿಸಿಕೊಳ್ಳಲು ಸಜ್ಜಾಗಿದೆ. ಪ್ರಸ್ತುತ ಐಎಸ್‌ಎಲ್ ಅಂಕಪಟ್ಟಿಯಲ್ಲಿ, ಚೆನ್ನೈನ ಎಫ್‌ಸಿ ೧೫ ಅಂಕಗಳೊಂದಿಗೆ ೧೦ನೇ ಸ್ಥಾನದಲ್ಲಿದ್ದರೆ, ಒಡಿಶಾ ಎಫ್‌ಸಿ ೨೦ ಅಂಕಗಳೊಂದಿಗೆ ೭ನೇ ಸ್ಥಾನದಲ್ಲಿದೆ.
---------------
ಹಿಂದೂಸ್ತಾನ್ ಸಮಾಚಾರ್ / ಡಾ.ಪಿ.ವಿ.ಪ್ರಸಾದ ರಾವ್ ಪಿ .ವಿ