ಟೆಸ್ಟ್ ಶ್ರೇಯಾಂಕದಲ್ಲೂ ಕುಸಿತ ಕಂಡ ಕೊಹ್ಲಿ
ನವದೆಹಲಿ, 9 ಜನವರಿ (ಹಿ.ಸ.) : ಆ್ಯಂಕರ್ : ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ ಅತ್ಯಂತ ಕಳಪೆ ಪ್ರದರ್ಶನ ನೀಡಿದ್ದ ವಿರಾಟ್ ಕೊಹ್ಲಿ ಇದೀಗ ಐಸಿಸಿ ಟೆಸ್ಟ್ ಬ್ಯಾಟರ್ ಶ್ರೇಯಾಂಕದಲ್ಲೂ ಭಾರೀ ಕುಸಿತಕ್ಕೊಳಗಾಗಿದ್ದಾರೆ. ಕಳೆದ ೧೨ ವರ್ಷಗಳಲ್ಲೇ ಅತ್ಯಂತ ಕಡಿಮೆ ಶ್ರೇಯಾಂಕ ಪಡೆದಿದ್ದಾರೆ. ವಿರಾಟ್ ಕೊಹ
Khohili


ನವದೆಹಲಿ, 9 ಜನವರಿ (ಹಿ.ಸ.) :

ಆ್ಯಂಕರ್ : ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ ಅತ್ಯಂತ ಕಳಪೆ ಪ್ರದರ್ಶನ ನೀಡಿದ್ದ ವಿರಾಟ್ ಕೊಹ್ಲಿ ಇದೀಗ ಐಸಿಸಿ ಟೆಸ್ಟ್ ಬ್ಯಾಟರ್ ಶ್ರೇಯಾಂಕದಲ್ಲೂ ಭಾರೀ ಕುಸಿತಕ್ಕೊಳಗಾಗಿದ್ದಾರೆ. ಕಳೆದ ೧೨ ವರ್ಷಗಳಲ್ಲೇ ಅತ್ಯಂತ ಕಡಿಮೆ ಶ್ರೇಯಾಂಕ ಪಡೆದಿದ್ದಾರೆ.

ವಿರಾಟ್ ಕೊಹ್ಲಿ ಕಳೆದ ೧೨ ವರ್ಷಗಳಲ್ಲಿ ಟೆಸ್ಟ್ ಬ್ಯಾಟರ್‌ಗಳ ಟಾಪ್‌-೨೫ ಪಟ್ಟಿಯಿಂದ ಹೊರಬಿದ್ದಿರಲಿಲ್ಲ. ಆದರೆ ಈ ಬಾರಿ ಅವರು ೨೭ನೇ ಸ್ಥಾನಕ್ಕೆ ಕುಸಿದಿದ್ದು ಈ ಮೂಲಕ ದಶಕದ ಬಳಿಕ ಅತ್ಯಂತ ಕಡಿಮೆ ಶ್ರೇಯಾಂಕದಲ್ಲಿ ಕಾಣಿಸಿಕೊಂಡಿದ್ದಾರೆ.

೨೦೧೧ ರಲ್ಲಿ ಟೆಸ್ಟ್ ವೃತ್ತಿ ಆರಂಭಿಸಿದ್ದ ವಿರಾಟ್ ಕೊಹ್ಲಿ ೨೦೧೨ ರಲ್ಲಿ ಐಸಿಸಿ ಟೆಸ್ಟ್ ಬ್ಯಾಟರ್‌ಗಳ ಪಟ್ಟಿಯಲ್ಲಿ ೩೬ನೇ ಸ್ಥಾನದಲ್ಲಿ ಕಾಣಿಸಿಕೊಂಡಿದ್ದರು. ಇದಾದ ಬಳಿಕ ಅವರ ಶ್ರೇಯಾಂಕ ಏರುಮುಖದತ್ತ ಸಾಗಿತ್ತು. ಇದರ ನಡುವೆ ಆಗಸ್ಟ್ ೨೦೧೮ ರಲ್ಲಿ ತಮ್ಮ ವೃತ್ತಿಜೀವನದ ಅತ್ಯುತ್ತಮ ಟೆಸ್ಟ್ ರೇಟಿಂಗ್ (೯೩೭) ಪಡೆದುಕೊಂಡಿದ್ದರು.

ಆ ಬಳಿಕ ಟಾಪ್-೧೦ ರಲ್ಲಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡಿದ್ದ ವಿರಾಟ್ ಕೊಹ್ಲಿ ಈ ವರ್ಷ ಅಗ್ರ ಹತ್ತರಿಂದ ಹೊರಬಿದ್ದಿದ್ದರು. ಇದೀಗ ಟಾಪ್-೨೫ ಯಿಂದಲೂ ಹೊರ ಹೋಗಿದ್ದಾರೆ. ಈ ಮೂಲಕ ಕಳೆದ ೧೨ ವರ್ಷಗಳಲ್ಲೇ ಅತ್ಯಂತ ಕೆಳಸ್ತರದ ಶ್ರೇಯಾಂಕದಲ್ಲೂ ಪಡೆದುಕೊಂಡಿದ್ದಾರೆ. ಈ ಶ್ರೇಯಾಂಕದಲ್ಲಿ ಮೇಲೇರಲು ವಿರಾಟ್ ಕೊಹ್ಲಿ ಮುಂಬರುವ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಭರ್ಜರಿ ಪ್ರದರ್ಶನ ನೀಡುವ ಅನಿವಾರ್ಯತೆ ಎದುರಾಗಿದೆ.

ಇನ್ನು ಈ ಬಾರಿಯ ಟೆಸ್ಟ್ ಬ್ಯಾಟರ್‌ಗಳ ಶ್ರೇಯಾಂಕದಲ್ಲಿ ಇಂಗ್ಲೆಂಡ್‌ನ ಜೋ ರೂಟ್ ಅಗ್ರಸ್ಥಾನದಲ್ಲಿದ್ದರೆ, ಹ್ಯಾರಿ ಬ್ರೂಕ್ ದ್ವಿತೀಯ ಸ್ಥಾನದಲ್ಲಿದ್ದಾರೆ. ಇನ್ನು ಮೂರನೇ ಸ್ಥಾನದಲ್ಲಿ ನ್ಯೂಝಿಲೆಂಡ್‌ನ ಕೇನ್ ವಿಲಿಯಮ್ಪನ್ ಇದ್ದರೆ, ನಾಲ್ಕನೇ ಸ್ಥಾನದಲ್ಲಿ ಟೀಮ್ ಇಂಡಿಯಾದ ಯುವ ಎಡಗೈ ದಾಂಡಿಗ ಯಶಸ್ವಿ ಜೈಸ್ವಾಲ್ ಕಾಣಿಸಿಕೊಂಡಿದ್ದಾರೆ. ಹಾಗೆಯೇ ಐದನೇ ಸ್ಥಾನವನ್ನು ಆಸ್ಟ್ರೇಲಿಯಾದ ಟ್ರಾವಿಸ್ ಪಡೆದುಕೊಂಡಿದ್ದಾರೆ

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande