ಕೋಲಾರ, ೦೯ ಜನವರಿ (ಹಿ.ಸ.) :
ಆ್ಯಂಕರ್ : ಕರ್ನಾಟಕ ಕಬ್ಬಡಿ ಮಹಿಳಾ ತಂಡ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗುವ ಮೂಲಕ ರಾಜ್ಯಕ್ಕೆ ಕೀರ್ತಿ ಬಂದಿರುವುದಾಗಿ ತರಬೇತಿದಾರ ( ಎನ್.ಐ.ಎಸ್)ದೊಡ್ಡಿ ಡಿ.ಟಿ.ಲೋಕೇಶ್ ಸಂತಸ ವ್ಯಕ್ತಪಡಿಸಿದ್ದಾರೆ.
ಕೋಲಾರದಲ್ಲಿ ನಡೆದ ರಾಜ್ಯಮಟ್ಟದ ಪಂದ್ಯಾವಳಿಯಲ್ಲಿ ಆಯ್ಕೆಯಾದ ಕರ್ನಾಟಕ ಕಬ್ಬಡಿ ಮಹಿಳಾ ತಂಡವು ರಾಷ್ಟ್ರ ಮಟ್ಟದ ಹರಿದ್ವಾರದ ರೋಷನ್ಬಾದ್ ಸ್ಟೇಡಿಯಂನಲ್ಲಿ ಜ.೮ ರಿ೦ದ ೧೦ ರವರೆಗೆ ನಡೆಯಲಿರುವ ೫೦ ಜ್ಯೂನಿಯರ್ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳುವ ಮೂಲಕ ರಾಷ್ಟ್ರ ಮಟ್ಟದಲ್ಲಿ ಛಾಪು ಮೂಡಿಸಿದ್ದಾರೆ.
ಕೋಲಾರದ ಮಾನಸ ಸೇರಿದಂತೆ ರಾಜ್ಯದ ನಾನಾ ಜಿಲ್ಲೆಗಳ ದೀಪ ಅನಿಲ್, ಸ್ವಾತಿ ಪೂಜಾರಿ, ಅಮೂಲ್ಯ ಪಾಟೀಲ್, ರಾಜೇಶ್ವರಿ, ಅಮೂಲ್ಯ, ಅಂಕಿತ, ಪಣವಿಕ, ಸಿಂಚನ, ರಕ್ಷಿತ,ಸಾಕ್ಷಿ ಮತ್ತು ಚಂದ್ರಿಕಾ ಕಬ್ಬಡಿಯಲ್ಲಿ ಸೆಣಸಲಿದ್ದಾರೆ.
ಕರ್ನಾಟಕ ಕಬ್ಬಡಿ ಮಹಿಳಾ ತಂಡ ತರಬೇತಿದಾರ( ಎನ್.ಐ.ಎಸ್) ಡೊಡ್ಡಿ ಡಿ.ಟಿ.ಲೋಕೇಶ್, ಎಸ್.ಮುನಿರಾಜು, ಕೋಲಾರ ಜಿಲ್ಲಾ ಅಮೆಚೂರ್ ಕಬ್ಬಡಿ ಅಧ್ಯಕ್ಷ ಎನ್.ಪ್ರಭು ಅವರು ತರಬೇತಿ ನೀಡಿ ಉತ್ತಮ ಮಾರ್ಗದರ್ಶನ ನೀಡಿರರುವುದು ಶ್ಲಾಘನೀಯ.
ಜಿಲ್ಲೆಯಿಂದ ಆಯ್ಕೆಯಾದ ಮಾನಸ ಹಾಗೂ ತರಬೇತಿ ನೀಡಿದ ದೊಡ್ಡಿ ಲೋಕೇಶ್,ಎಸ್.ಮುನಿರಾಜು, ಎನ್.ಪ್ರಭು, ಜಿಲ್ಲಾ ತರಬೇತಿ ತೀರ್ಪುಗಾರರ ಮಂಡಳಿ ಅಧ್ಯಕ್ಷ ದೊಡ್ಡಿ ಡಿ.ಟಿ.ವಸಂತ್, ಉಪಾಧ್ಯಕ್ಷ ಬ್ಯಾಲಹಳ್ಳಿ ಕೆ.ಚಂದ್ರಶೇಖರ್ ಗೌಡ , ಖಜಾಂಚಿ ಕುಪ್ಪೂರು ವೆಂಕಟೇಶ್ , ಸಂಘಟನಾ ಕಾರ್ಯದರ್ಶಿ ಎಚ್.ವಿ.ಶ್ರೀನಿವಾಸ್, ಅವರಿಗೆ ಶಾಸಕ ಕೆ.ವೈ.ನಂಜೇಗೌಡ, ಯುವ ನಾಯಕ ಕೆ.ಎನ್.ಸುನೀಲ್ ನಂಜೇಗೌಡ, ದರಖಾಸ್ತು ಸಮಿತಿ ಅಧ್ಯಕ್ಷ ಸಂತೇಹಳ್ಳಿ ನಾರಾಯಣಸ್ವಾಮಿ, ಸದಸ್ಯ ನಾಗಪುರ ನವೀನ್, ಯುವ ಮುಖಂಡ ಜಗನ್ ರೆಡ್ಡಿ ಸೇರಿದಂತೆ ಹಲವಾರು ಮುಖಂಡರು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
ಚಿತ್ರ: ಹರಿದ್ವಾರದ ರೋಷನ್ಬಾದ್ ಸ್ಟೇಡಿಯಂನಲ್ಲಿ ನಡೆಯಲಿರುವ ರಾಷ್ಟ್ರ ಮಟ್ಟದ ಕಬ್ಬಡಿ ಪಂದ್ಯಾವಳಿಗೆ ಕರ್ನಾಟಕ ಕಬ್ಬಡಿ ತಂಡ ಆಟಗಾರರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್