ಲಾಲ್ ಕುಆ ಮತ್ತು  ಬೆಂಗಳೂರು ನಡುವೆ ವಿಶೇಷ ರೈಲು ಸಂಚಾರ 
ಹುಬ್ಬಳ್ಳಿ, 09 ಜನವರಿ (ಹಿ.ಸ.) : ಆ್ಯಂಕರ್ : ಪ್ರಯಾಣಿಕರ ಅನುಕೂಲ ಮತ್ತು ಹೆಚ್ಚುವರಿ ದಟ್ಟಣೆಯನ್ನು ತೆರವುಗೊಳಿಸಲು, ಈಶಾನ್ಯ ರೈಲ್ವೆಯು ಲಾಲ್ ಕುಆ ಮತ್ತು ಕೆಎಸ್ಆರ್ ಬೆಂಗಳೂರು ನಡುವೆ ಸಾಪ್ತಾಹಿಕ ವಿಶೇಷ ರೈಲುಗಳನ್ನು ಓಡಿಸಲಿದೆ. ಈ ಸೇವೆಗಳ ವಿವರಗಳು ಈ ಕೆಳಗಿನಂತಿವೆ. ರೈಲು ಸಂಖ್ಯೆ 05074 ಲಾಲ್
Train


ಹುಬ್ಬಳ್ಳಿ, 09 ಜನವರಿ (ಹಿ.ಸ.) :

ಆ್ಯಂಕರ್ : ಪ್ರಯಾಣಿಕರ ಅನುಕೂಲ ಮತ್ತು ಹೆಚ್ಚುವರಿ ದಟ್ಟಣೆಯನ್ನು ತೆರವುಗೊಳಿಸಲು, ಈಶಾನ್ಯ ರೈಲ್ವೆಯು ಲಾಲ್ ಕುಆ ಮತ್ತು ಕೆಎಸ್ಆರ್ ಬೆಂಗಳೂರು ನಡುವೆ ಸಾಪ್ತಾಹಿಕ ವಿಶೇಷ ರೈಲುಗಳನ್ನು ಓಡಿಸಲಿದೆ.

ಈ ಸೇವೆಗಳ ವಿವರಗಳು ಈ ಕೆಳಗಿನಂತಿವೆ.

ರೈಲು ಸಂಖ್ಯೆ 05074 ಲಾಲ್ ಕುಆ -

ಕೆಎಸ್ಆರ್ ಬೆಂಗಳೂರು ಸಾಪ್ತಾಹಿಕ ವಿಶೇಷ ಎಕ್ಸ್‌ಪ್ರೆಸ್ ಜನವರಿ 11 ರಿಂದ ಮುಂದಿನ ಸೂಚನೆಯವರೆಗೆ ಪ್ರತಿ ಶನಿವಾರ ಸಂಜೆ 05:55 ಕ್ಕೆ ಲಾಲ್ ಕುಆ ಜಂ. ನಿಂದ ಹೊರಟು, ಮಂಗಳವಾರ ಮಧ್ಯಾಹ್ನ 3.25 ಕ್ಕೆ ಕೆ.ಎಸ್‌.ಆರ್‌. ಬೆಂಗಳೂರು ನಿಲ್ದಾಣವನ್ನು ತಲುಪಲಿದೆ.

ರೈಲು ಸಂಖ್ಯೆ 05073 ಕೆ.ಎಸ್.ಆರ್. ಬೆಂಗಳೂರು - ಲಾಲ್ ಕುಆ ಜಂ. ಸಾಪ್ತಾಹಿಕ ವಿಶೇಷ ಎಕ್ಸ್‌ಪ್ರೆಸ್ ಜನವರಿ 14 ರಿಂದ ಮುಂದಿನ ಸೂಚನೆಯವರೆಗೆ ಪ್ರತಿ ಮಂಗಳವಾರ ಬೆಳಿಗ್ಗೆ 07:15 ಗಂಟೆಗೆ ಕೆ.ಎಸ್.ಆರ್. ಬೆಂಗಳೂರಿನಿಂದ ಹೊರಟು, ಗುರುವಾರ ಬೆಳಿಗ್ಗೆ 09.05ಕ್ಕೆ ಲಾಲ್‌ ಕುಆ ಜಂ. ಅನ್ನು ತಲುಪಲಿದೆ.

ಈ ರೈಲು ಈ ಕೆಳಗಿನ ನಿಲ್ದಾಣಗಳಲ್ಲಿ ನಿಲುಗಡೆಯನ್ನು ಹೊಂದಿದೆ: ಕಿಚ್ಚಾ, ಬಹೇರಿ, ಭೋಜಿಪುರ ಜಂ., ಇಜ್ಜತನಗರ, ಬರೇಲಿ ಸಿಟಿ, ಬರೇಲಿ, ಬುಡಾನ್, ಕಾಸ್ಗಂಜ್, ಹತ್ರಾಸ್ ಸಿಟಿ, ಮಥುರಾ ಕ್ಯಾಂಟ್., ಆಗ್ರಾ ಕ್ಯಾಂಟ್., ಗ್ವಾಲಿಯರ್ ಜಂ., ವೀರಾಂಗನಾ ಲಕ್ಷ್ಮೀಬಾಯಿ ಝಾನ್ಸಿ ಜಂ., ಬಿನಾ ಜಂ., ರಾಣಿ ಕಮಲಾಪತಿ, ಇಟಾರ್ಸಿ ಜಂ., ಬೇತುಲ್, ನಾಗಪುರ ಜಂ., ಸೇವಾಗ್ರಾಮ ಜಂ., ಚಂದ್ರಾಪುರ, ಬಲ್ಹರ್ಷಾ, ಸಿರ್ಪುರ್ ಕಾಘಜ್‌ನಗರ, ಮಂಚಿರ್ಯಾಲ, ಪೆದ್ದಪಲ್ಲಿ ಜಂ., ವಾರಂಗಲ್, ಮಹಬೂಬಾಬಾದ್, ಖಮ್ಮಂ, ವಿಜಯವಾಡ ಜಂ., ತೆನಾಲಿ ಜಂ., ಒಂಗೋಲ್‌, ನೆಲ್ಲೂರು ಜಂ., ಗುಡೂರು ಜಂ., ರೇಣಿಗುಂಟಾ ಜಂ., ಕಾಟ್ಪಾಡಿ ಜಂ., ಜೋಲಾರ್ಪೇಟ್ಟಯ್ ಜಂ., ಕುಪ್ಪಂ, ಬಂಗಾರಪೇಟೆ ಜಂ., ಕೃಷ್ಣರಾಜಪುರಂ, ಬೆಂಗಳೂರು ಕ್ಯಾಂಟ್.

ಈ ವಿಶೇಷ ರೈಲು 16 LHB ಕೋಚ್‌ಗಳನ್ನು ಒಳಗೊಂಡಿರುತ್ತದೆ, ಇದರಲ್ಲಿ 10 AC 03-ಟೈರ್ ಎಕಾನಮಿ ಕೋಚ್‌ಗಳು, 04 ಸ್ಲೀಪರ್ ಕೋಚ್‌ಗಳು, 01 ಲಗೇಜ್/ಜನರೇಟರ್/ಬ್ರೇಕ್ ವ್ಯಾನ್ ಮತ್ತು 01 ಲಗೇಜ್/ಬ್ರೇಕ್‌ವ್ಯಾನ್ (ಅಂಗವಿಕಲರ ಸ್ನೇಹಿ ಕಂಪಾರ್ಟ್‌ಮೆಂಟ್ ನೊಂದಿಗೆ) ಇರಲಿದೆ ಎಂದು ಸಾರ್ವಜನಿಕ ಸಂಪರ್ಕ ಅಧಿಕಾರಿ ಪ್ರಾಣೇಶ ಕೆ.ಎನ್.ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande