ಬಳ್ಳಾರಿ, 08 ಜನವರಿ (ಹಿ.ಸ.) :
ಆ್ಯಂಕರ್ : ಆದಾಯಕ್ಕಿಂತಲೂ ಹೆಚ್ಚಿನ ಸಂಪತ್ತನ್ನು ಹೊಂದಿದ್ದ ಆರೋಪದ ಮೇಲೆ ಬಳ್ಳಾರಿಯ ಹಿಂದುಳಿದ ವರ್ಗದ ತಾಲೂಕು ಅಧಿಕಾರಿ ಆರ್.ಎಚ್. ಲೋಕೇಶ್ ಅವರ ರಾಮಾಂಜಿನೇಯ ನಗರದ ಮನೆಯ ಮೇಲೆ ಲೋಕಾಯುಕ್ತರು ಬುಧವಾರ ದಾಳಿ ನಡೆಸಿ, ಕೋಟ್ಯಾಂತರ ರೂಪಾಯಿ ಆಸ್ತಿಯನ್ನು - ಬೆಳ್ಳಿ - ಬಂಗಾರದ ಆಭರಣಗಳನ್ನು, ಆಸ್ತಿಪಾಸ್ತಿಯ ದಾಖಲೆಗಳನ್ನು ಪತ್ತೆ ಹೆಚ್ಚಿದ್ದಾರೆ ಎನ್ನಲಾಗಿದೆ.
ಲೋಕಾಯುಕ್ತದ ಮೂಲಗಳ ಪ್ರಕಾರ, ಹಿಂದುಳಿದ ವರ್ಗಗಳ ಇಲಾಖೆಯ ಹಾಸ್ಟಲ್‍ನ ವಾರ್ಡನ್ ಆಗಿ ನೇಮಕಗೊಂಡಿದ್ದ ಕುಡತಿನಿ ಮೂಲದ ಆರ್.ಎಚ್. ಲೋಕೇಶ್ ಅವರು ಸರ್ಕಾರಿ ಹಾಸ್ಟಲ್‍ಗಳಲ್ಲಿ ವಿದ್ಯಾಭ್ಯಾಸ ನಡೆಸಿ, ಸರ್ಕಾರಿ ಸೇವೆಗೆ ಸೇರಿದ್ದರು. ಸೇವೆಯ ಹಿರಿತನದ ಮೇಲೆ ಬಡ್ತಿ ಹೊಂದಿದ್ದರು. ಆದರೆ, ಹಾಸ್ಟಲ್‍ನ ವಿದ್ಯಾರ್ಥಿಗಳು ಮತ್ತು ಅಧೀನ ಸಿಬ್ಬಂದಿಯ ಮೇಲೆ ದೌರ್ಜನ್ಯ ನಡೆಸುವ ಮೂಲಕ ಅಧಿಕಾರ ದುರುಪಯೋಗ ಮಾಡಿಕೊಳ್ಳುತ್ತಿದ್ದರು. ಸರ್ಕಾರದ ಅನುಮತಿ ಇಲ್ಲದೇ
ವಿದೇಶ ಪ್ರವಾಸ ಮಾಡಿದ್ದಾರೆ ಎನ್ನುವ ಆರೋಪಗಳನ್ನು ಎದುರಿಸುತ್ತಿದ್ದಾರೆ.
ಬಳ್ಳಾರಿ ಜಿಲ್ಲಾ ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳಾಗಿ ಚುನಾಯಿತರಾಗಿರುವ ಆರ್.ಎಚ್. ಲೋಕೇಶ್ ಅವರು, ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ನೀಡಿದ್ದರು.
ಪ್ರಕರಣ ದಾಖಲಾಗಿದೆ. ತನಿಖೆ ನಡೆದಿದೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್