ಮೆಹಬೂಬ್‍ನಗರ ಅಪಘಾತ ; ಲಿಂಗಸೂಗೂರಿನ ಇಬ್ಬರ ಸಾವು, ನಾಲ್ವರು ಗಂಭೀರ
ಮೆಹಬೂಬ್‍ನಗರ, 07 ಜನವರಿ (ಹಿ.ಸ.) : ಆ್ಯಂಕರ್ : ಮೆಹಬೂಬ್ ನಗರ ಜಿಲ್ಲೆಯ ದೇವರಕದ್ರ ಮಂಡಲದ ಗೋಪಾಲಾಪುರಂ ಬಳಿ ಮಹಬೂಬ್ ನಗರ-ರಾಯಚೂರು ಮಾರ್ಗದ 167ನೇ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಂಗಳವಾರ ಭೀಕರ ರಸ್ತೆ ಅಪಘಾತ ಸಂಭವಿಸಿ, ಲಿಂಗಸೂಗೂರಿನ ಒಬ್ಬ ಪತ್ರಕರ್ತ ಸೇರಿ, ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು, ನಾ
ಮೆಹಬೂಬ್‍ನಗರದ ಗೋಪಾಲಪುರಂ ಬಳಿ ರಸ್ತೆ ಅಪಘಾತ ; ಲಿಂಗಸೂಗೂರಿನ ಇಬ್ಬರು ಸ್ಥಳದಲ್ಲೇ ಸಾವು, ನಾಲ್ವರು ಗಂಭೀರ


ಮೆಹಬೂಬ್‍ನಗರದ ಗೋಪಾಲಪುರಂ ಬಳಿ ರಸ್ತೆ ಅಪಘಾತ ; ಲಿಂಗಸೂಗೂರಿನ ಇಬ್ಬರು ಸ್ಥಳದಲ್ಲೇ ಸಾವು, ನಾಲ್ವರು ಗಂಭೀರ


ಮೆಹಬೂಬ್‍ನಗರ, 07 ಜನವರಿ (ಹಿ.ಸ.) :

ಆ್ಯಂಕರ್ : ಮೆಹಬೂಬ್ ನಗರ ಜಿಲ್ಲೆಯ ದೇವರಕದ್ರ ಮಂಡಲದ ಗೋಪಾಲಾಪುರಂ ಬಳಿ ಮಹಬೂಬ್ ನಗರ-ರಾಯಚೂರು ಮಾರ್ಗದ 167ನೇ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಂಗಳವಾರ ಭೀಕರ ರಸ್ತೆ ಅಪಘಾತ ಸಂಭವಿಸಿ, ಲಿಂಗಸೂಗೂರಿನ ಒಬ್ಬ ಪತ್ರಕರ್ತ ಸೇರಿ, ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು, ನಾಲ್ವರು ತೀವ್ರವಾಗಿ ಗಾಯಗೊಂಡಿದ್ದಾರೆ.

ಮೃತರ ಪೈಕಿ ಪತ್ರಕರ್ತ ಬಸವರಾಜ್ ನಂದಿಕೋಲಮಠ ಮತ್ತು ಜಂಗಮಮೂರ್ತಿ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅಪಘಾತದಲ್ಲಿ ಚಿನ್ನಯ್ಯ ತಾತ, ಮಲ್ಲಿಕಾರ್ಜುನ, ಭಗವಾನ್, ಅಮರೇಶ್ ಮತ್ತು ಮಲ್ಲಣ್ಣ ಅವರಿಗೆ ಗಂಭೀರ ಗಾಯಗಳಾಗಿವೆ. ಎಲ್ಲರೂ ಲಿಂಗಸೂಗೂರು ಮೂಲದವರು. ಗಾಯಾಳುಗಳು ಮೆಹಬೂಬ್ ನಗರ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗಾಯಾಳುಗಳ ಪೈಕಿ ಇಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಲಿಂಗಸೂಗೂರಿನ ಎಲ್ಲರೂ ಕೊಲನಪಾಕಕ್ಕೆ ಹೋಗಿ ಹಿಂದಿರುಗುವಾಗ ಈ ದುರ್ಘಟನೆ ನಡೆದಿದೆ. ಎರ್ಟಿಗಾ ಕಾರು ಮತ್ತು ಟಿಪ್ಪರ್ ನಡುವೆ ಸಂಭವಿಸಿದ ಡಿಕ್ಕಿಯಿಂದ ಈ ಘಟನೆ ನಡೆದಿದೆ. ಕಾರಿನ ಚಾಲಕನ ಅತಿವೇಗ ಮತ್ತು ಅಜಾಗರೂಕತೆಯ ಚಾಲನೆಯೇ ಅಪಘಾತಕ್ಕೆ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ.

ಮೆಹಬೂಬ್‍ನಗರ ಪೆÇಲೀಸರು ಪ್ರಕರಣ ದಾಖಲಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande