ಕೋಟ್ಯ0ತರ ರೂಪಾಯಿ ಮೌಲ್ಯದ ಆಭರಣ, ವಾಹನ, ನಗದು ವಾರಸುದಾರರಿಗೆ 
ಬಳ್ಳಾರಿ, 07 ಜನವರಿ (ಹಿ.ಸ.) : ಆ್ಯಂಕರ್ : ಬಳ್ಳಾರಿ ಜಿಲ್ಲೆಯಲ್ಲಿ ಮೂರು ವರ್ಷಗಳಲ್ಲಿ ನಡೆದಿದ್ದ 394 ಕಳ್ಳತನ ಪ್ರಕರಣಗಳ ಪೈಕಿ 107 ಪ್ರಕರಣಗಳನ್ನು ಬೇಧಿಸಿ ವಶಪಡಿಸಿಕೊಂಡಿದ್ದ ಬೆಳ್ಳಿ - ಬಂಗಾರದ ಆಭರಣಗಳು - ನಗದು ಹಣ, ವಾಹನಗಳನ್ನು, ಲ್ಯಾಪ್‍ಟಾಪ್ ಇನ್ನಿತರೆ ವಸ್ತುಗಳನ್ನು ವಾರಸುದಾರರಿಗೆ ಮಂಗಳವಾರ
ಕೋಟ್ಯಾಂತರ ರೂಪಾಯಿ ಮೌಲ್ಯದ ಆಭರಣ, ವಾಹನ ಮತ್ತು ನಗದು-ವಸ್ತುಗಳು ವಾರಸುದಾರರಿಗೆ


ಕೋಟ್ಯಾಂತರ ರೂಪಾಯಿ ಮೌಲ್ಯದ ಆಭರಣ, ವಾಹನ ಮತ್ತು ನಗದು-ವಸ್ತುಗಳು ವಾರಸುದಾರರಿಗೆ


ಕೋಟ್ಯಾಂತರ ರೂಪಾಯಿ ಮೌಲ್ಯದ ಆಭರಣ, ವಾಹನ ಮತ್ತು ನಗದು-ವಸ್ತುಗಳು ವಾರಸುದಾರರಿಗೆ


ಬಳ್ಳಾರಿ, 07 ಜನವರಿ (ಹಿ.ಸ.) :

ಆ್ಯಂಕರ್ : ಬಳ್ಳಾರಿ ಜಿಲ್ಲೆಯಲ್ಲಿ ಮೂರು ವರ್ಷಗಳಲ್ಲಿ ನಡೆದಿದ್ದ 394 ಕಳ್ಳತನ ಪ್ರಕರಣಗಳ ಪೈಕಿ 107 ಪ್ರಕರಣಗಳನ್ನು ಬೇಧಿಸಿ ವಶಪಡಿಸಿಕೊಂಡಿದ್ದ ಬೆಳ್ಳಿ - ಬಂಗಾರದ ಆಭರಣಗಳು - ನಗದು ಹಣ, ವಾಹನಗಳನ್ನು, ಲ್ಯಾಪ್‍ಟಾಪ್ ಇನ್ನಿತರೆ ವಸ್ತುಗಳನ್ನು ವಾರಸುದಾರರಿಗೆ ಮಂಗಳವಾರ ಒಪ್ಪಿಸಿದೆ.

ಒಟ್ಟು 349 ಪ್ರಕರಣಗಳ ಪೈಕಿ 107 ಪ್ರಕರಣಗಳನ್ನು ಪತ್ತೆ ಮಾಡಿ, ಕಳ್ಳತನವಾಗಿದ್ದ ಆಭರಣಗಳು - ವಸ್ತುಗಳು - ವಾಹನಗಳು ಮತ್ತು ನಗದು ಹಣವನ್ನು ವಶಪಡಿಸಿಕೊಳ್ಳಲಾಗಿದೆ. ಈ ಪೈಕಿ 95 ದ್ವಿಚಕ್ರ ವಾಹನಗಳು, 2 ಲ್ಯಾಪ್ಟಾಪ್, 2563 ಗ್ರಾಂ ಚಿನ್ನ, 7735 ಬೆಳ್ಳಿ ಸಾಮಾನುಗಳು, 2 ಕೋಟಿ 48 ಲಕ್ಷ ರೂಪಾಯಿ ನಗದು ಹಣ, ಎರಡು ಮೊಬೈಲ್ ಫೆÇೀನ್, 15 ಸಿಸಿ ಕ್ಯಾಮೆರಾ, 21 ಇಪಿಎಸ್ ಬ್ಯಾಟರಿಗಳು, ಆರು ಪಂಪ್‍ಸೆಟ್ ಮೋಟಾರ್‍ಗಳನ್ನು ವಶಕ್ಕೆ ಪಡೆದು, ವಾರಸುದಾರರಿಗೆ ಒಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದರು.

ಬಳ್ಳಾರಿ ವಲಯ ಐಜಿಪಿ ಲೋಕೇಶ್ ಕುಮಾರ್, ಜಿಲ್ಲಾ ಎಸ್ಪಿ ಡಾ. ವಿ.ಜೆ. ಶೋಭಾರಾಣಿ ಅವರು, ಕಳ್ಳತನ ಪ್ರಕರಣಗಳಲ್ಲಿ ಶೇ.39% ರಷ್ಟು ಪ್ರಕರಣಗಳನ್ನು ಭೇದಿಸಿ, ಕಳುವಾದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. 2024 ನೇ ಸಾಲಿನಲ್ಲಿ ಮೋಟಾರು ವಾಹನ ಕಾಯ್ದೆ ಅಡಿಯಲ್ಲಿ 58,375 ಪ್ರಕರಣಗಳನ್ನು ದಾಖಲಿಸಿ ಒಟ್ಟು ರೂ.2,85,58,000/- ದಂಡ ವಸೂಲಿ ಮಾಡಲಾಗಿದೆ ಎಂದರು.

ಜಿಲ್ಲೆಯಲ್ಲಿ ಕೊಟ್ಟಾ ಕಾಯ್ದೆ ಅಡಿಯಲ್ಲಿ 5917 ಪ್ರಕರಣಗಳನ್ನು ದಾಖಲಿಸಲಾಗಿತ್ತು. ಅವುಗಳಲ್ಲಿ ರೂ. 4,88,640/ ದಂಡ ವಸೂಲಿ ಮಾಡಲಾಗಿದೆ. 2024 ನೇ ಸಾಲಿನಲ್ಲಿ ಕಳುವಾದ ರೂ.4,94,42,031/- ಗಳಲ್ಲಿ ರೂ.1,91,14,613/ ಮಾಲನ್ನು ವಶಪಡಿಸಿಕೊಂಡಿದ್ದು, ವಶಪಡಿಸಿಕೊಂಡ ಮಾಲಿನ ಪೈಕಿ ರೂ.1,48,40,600/- ಮೌಲ್ಯದ ವಸ್ತುಗಳನ್ನು ವಾರಸುದಾರರಿಗೆ ಹಿಂತಿರುಗಿಸಲಾಗಿದೆ ಎಂದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande