ಧರ್ಮಸ್ಥಳ:ಭಕ್ತರಿಗಾಗಿ ನಿರ್ಮಿಸಿದ 'ಶ್ರೀ ಸಾನ್ನಿಧ್ಯ' ಇಂದು ಲೋಕಾರ್ಪಣೆ
 
ಎಂಟು ಶತಮಾನಗಳ ಭವ್ಯ ಇತಿಹಾಸ ಮತ್ತು ಪರಂಪರೆ ಹೊಂದಿರುವ ನಾಡಿನ ಪವಿತ್ರ ಕ್ಷೇತ್ರ ಧರ್ಮಸ್ಥಳದಲ್ಲಿ ಭ


ಧರ್ಮಸ್ಥಳ, 7 ಜನವರಿ (ಹಿ.ಸ.) :

ಆ್ಯಂಕರ್ : ಎಂಟು ಶತಮಾನಗಳ ಭವ್ಯ ಇತಿಹಾಸ ಮತ್ತು ಹಿಂದು ಪರಂಪರೆ ಹೊಂದಿರುವ ನಾಡಿನ ಪವಿತ್ರ ಕ್ಷೇತ್ರವಾಗಿರುವ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ದೇವರ ದರ್ಶನಕ್ಕಾಗಿ ಸರತಿಯಲ್ಲಿ ನಿಲ್ಲುವ ಭಕ್ತರ ಅನುಕೂಲಕ್ಕಾಗಿ ನಿರ್ಮಿಸಿರುವ ಹೊಸ ಸಂಕೀರ್ಣ 'ಶ್ರೀ ಸಾನ್ನಿಧ್ಯ'ವನ್ನು ಇಂದು ಮಧ್ಯಾಹ್ನ 2 ಗಂಟೆಗೆ ಉಪರಾಷ್ಟ್ರಪತಿ ಜಗದೀಪ್ ಧನ್‌ಕರ್ ಚಾಲನೆ ನೀಡಲಿದ್ದಾರೆ.

ನೂತನವಾಗಿ ಉದ್ಘಾಟನೆಯಾಗಲಿರುವ ಶ್ರೀ ಸಾನಿಧ್ಯ ಸಂಕೀರ್ಣ ಅತ್ಯಾಧುನಿಕ ವ್ಯವಸ್ಥೆಯಿಂದ ಕೂಡಿದ್ದು, ಕ್ಷೇತ್ರಕ್ಕೆ ಆಗಮಿಸುವ ಭಕ್ತರು ದೇವರ ದರ್ಶನಕ್ಕೆ ಕಾಯುವ ಸಮಯ ಮತ್ತು ವಿಧಾನವನ್ನು ಸರಳೀಕರಿಸಲಾಗಿದೆ.

೨ ಲಕ್ಷ ೭೫ ಸಾವಿರ ೧೭೭ ಚದರ ಅಡಿಯ ಈ ಕಟ್ಟಡ ಮೂರು ಮಹಡಿಗಳನ್ನು ಹೊಂದಿದ್ದು, ೧೬ ಸಭಾಂಗಣಗಳಿವೆ. ಕೋಣೆಯಲ್ಲಿ ೬೦೦ರಿಂದ ೮೦೦ ಭಕ್ತಾದಿಗಳಿಗೆ ವ್ಯವಸ್ಥೆಯಿದ್ದು, ಒಟ್ಟು ೧೦ ಸಾವಿರದಿಂದ ೧೨,೦೦೦ ಭಕ್ತಾದಿಗಳನ್ನು ಏಕಕಾಲದಲ್ಲಿ ನಿರ್ವಹಿಸುವ ಅನುಕೂಲತೆ ಕಲ್ಪಿಸಲಾಗಿದೆ.

ಅಲ್ಲದೆ ಭದ್ರತೆ ಹಾಗೂ ಕಣ್ಗಾವಲಿಗಾಗಿ ೧೬೦ ಎ.ಐ ಆಧಾರಿತ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ.

ಧರ್ಮಸ್ಥಳದಲ್ಲಿ ಮೊದಲ ಬಾರಿಗೆ, ಬಾಷ್‌ನಿಂದ ಕ್ಯೂ ಮ್ಯಾನೇಜ್‌ಮೆಂಟ್ ಸಿಸ್ಟಮ್ (ಕ್ಯೂಎಂಎಸ್) ಅನ್ನು ಪರಿಚಯಿಸಲಾಗಿದೆ.

ಈ ಸುಧಾರಿತ ವ್ಯವಸ್ಥೆಯು ಸಂಕೀರ್ಣಕ್ಕೆ ಒಳ ಪ್ರವೇಶಿಸುವ ಮತ್ತು ಹೊರಗೆ ಹೊರಡುವ ಜನರ ನೈಜ-ಸಮಯದ ದತ್ತಾಂಶದ ಆಧಾರದ ಮೇಲೆ ಸಭಾಂಗಣಗಳನ್ನು ನಿಯೋಜಿಸಲಾಗುತ್ತಿದೆ.

ಭಕ್ತರು ದರ್ಶನಕ್ಕಾಗಿ ಅವರ ನಿಗದಿತ ಸಮಯದಲ್ಲಿ ಸೂಕ್ತ ಹಾಲ್‌ಗಳಿಗೆ ನಿರ್ದೇಶಿಸಲ್ಪಡುತ್ತಾರೆ ಎಂದು ಖಚಿತಪಡಿಸುತ್ತದೆ. ಕ್ಯೂ ಎಂ ಎಸ್ ನೈಜ-ಸಮಯದ ಮೇಲ್ವಿಚಾರಣೆಯನ್ನು ಸಕ್ರಿಯಗೊಳಿಸುತ್ತದೆ ಮತ್ತು ಭದ್ರತೆಯನ್ನು ಹೆಚ್ಚಿಸುತ್ತದೆ. ತುರ್ತು ಸಂದರ್ಭಗಳಲ್ಲಿ, ತ್ವರಿತ ಪ್ರತಿಕ್ರಿಯೆಗಾಗಿ ಅಗತ್ಯವಿದ್ದಾಗ ಕಮಾಂಡ್ ರೂಂ-ಗೆ ಎಚ್ಚರಿಕೆ ಸಂದೇಶ ರವಾನಿಸುವ ವ್ಯವಸ್ಥೆಯೂ ಇಲ್ಲಿದೆ.

ನೂತನ ಕ್ಯೂ ಕಾಂಪ್ಲೆಕ್ಸ್ ನಲ್ಲಿ ೨೬೩ ಸ್ಪೀಕರ್ ಗಳು, ೫೪ ಅಂಪ್ಲಿಪೈಯರ್ ಗಳಿವೆ. ಇವುಗಳ ಮೂಲಕ ಭಕ್ತಾದಿಗಳಿಗೆ ನೇರ ಮಾಹಿತಿ, ಮುದ್ರಿತ ಧ್ವನಿ ಸಂದೇಶ, ತುರ್ತು ಮಾಹಿತಿ ಇತ್ಯಾದಿಗಳನ್ನು ಕಾಲಕಾಲಕ್ಕೆ ಭಿತ್ತರಿಸುವ ವ್ಯವಸ್ಥೆ ಇದೆ.

ಹೊಸ ಕ್ಯೂ ಕಾಂಪ್ಲೆಕ್ಸ್ ನಲ್ಲಿ ೬೫೦ ಕಿಲೋ ವ್ಯಾಟ್ ಸಾಮರ್ಥ್ಯದ ವಿದ್ಯುತ್ ಉತ್ಪಾದಿಸುವ ಸೋಲಾರ್ ಪ್ಯಾನೆಲ್-ಗಳನ್ನು ಅಳವಡಿಲಾಗಿದೆ. ಜೊತೆಗೆ ವಿದ್ಯುತ್ ಮತ್ತು ನೀರು ಪೋಲಾಗುವುದನ್ನು ತಪ್ಪಿಸಲು ಮಾನಿಟರಿಂಗ್ ತಂತ್ರಜ್ಞಾನ ಒಳಗೊಂಡ ಕಟ್ಟಡ ನಿರ್ವಹಣಾ ವ್ಯವಸ್ಥೆ ಬಳಸಲಾಗುತ್ತಿದೆ.

---------------

ಹಿಂದೂಸ್ತಾನ್ ಸಮಾಚಾರ್ / ಡಾ.ಪಿ.ವಿ.ಪ್ರಸಾದ ರಾವ್ ಪಿ .ವಿ


 rajesh pande