ತುಪ್ಪದ ಚಹಾ ಸೇವನೆಯಿಂದ ಆರೋಗ್ಯ ಪ್ರಯೋಜನಗಳು
ಹುಬ್ಬಳ್ಳಿ, 08 ಜನವರಿ (ಹಿ.ಸ.) : ಆ್ಯಂಕರ್ : ತುಪ್ಪದಿಂದ ಎಷ್ಟೆಲ್ಲಾ ಆರೋಗ್ಯ ಪ್ರಯೋಜನಗಳಿವೆ ಎಂಬುದನ್ನು ನೀವು ಕೇಳಿರಬಹುದು. ಅದೆಲ್ಲದರ ಜೊತೆಗೆ, ನೀವು ಪ್ರತಿನಿತ್ಯ ಬೆಳಿಗ್ಗೆ ಸೇವನೆ ಮಾಡುವ ಪಾನೀಯಕ್ಕೆ ಒಂದು ಟೀ ಸ್ಪೂನ್ ತುಪ್ಪವನ್ನು ಸೇರಿಸುವುದರಿಂದ ಅನೇಕ ರೀತಿಯ ಆರೋಗ್ಯಕರ ಪ್ರಯೋಜನಗಳನ್ನು ಪಡೆದ
Tea


ಹುಬ್ಬಳ್ಳಿ, 08 ಜನವರಿ (ಹಿ.ಸ.) :

ಆ್ಯಂಕರ್ : ತುಪ್ಪದಿಂದ ಎಷ್ಟೆಲ್ಲಾ ಆರೋಗ್ಯ ಪ್ರಯೋಜನಗಳಿವೆ ಎಂಬುದನ್ನು ನೀವು ಕೇಳಿರಬಹುದು. ಅದೆಲ್ಲದರ ಜೊತೆಗೆ, ನೀವು ಪ್ರತಿನಿತ್ಯ ಬೆಳಿಗ್ಗೆ ಸೇವನೆ ಮಾಡುವ ಪಾನೀಯಕ್ಕೆ ಒಂದು ಟೀ ಸ್ಪೂನ್ ತುಪ್ಪವನ್ನು ಸೇರಿಸುವುದರಿಂದ ಅನೇಕ ರೀತಿಯ ಆರೋಗ್ಯಕರ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು.

ಬೆಳಿಗ್ಗೆ ತುಪ್ಪ ಸೇವನೆ ಮಾಡುವುದು ಆರೋಗ್ಯ ತುಂಬಾ ಒಳ್ಳೆಯದು. ಹಾಗಾದರೆ ಅದನ್ನು ಯಾವ ರೀತಿಯಲ್ಲಿ ಸೇವನೆ ಮಾಡಬಹುದುದು ಎಂದು ಯೋಚಿಸುತ್ತಿದ್ದರೆ ಅದಕ್ಕೆ ಇಲ್ಲಿದೆ ಉತ್ತರ.

ಪ್ರತಿನಿತ್ಯ ಬೆಳಿಗ್ಗೆ ತುಪ್ಪದ ಚಹಾವನ್ನು ಕುಡಿಯುವುದರಿಂದ ಉತ್ತಮ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು. ಈ ಪಾನೀಯವು ತನ್ನದೇ ಆದ ಅನುಕೂಲ ಮತ್ತು ಅನನುಕೂಲಗಳನ್ನು ಹೊಂದಿದೆ. ಆದರೂ ಕೂಡ ತುಪ್ಪದ ಚಹಾ ಕುಡಿಯುವುದು ತಪ್ಪಲ್ಲ.

ಈ ಹಿಂದೆ ತುಪ್ಪದ ಕಾಫಿ ಬಹಳ ಜನಪ್ರಿಯತೆ ಗಳಿಸಿದ್ದು ಕಾಫಿ ಬದಲಿಗೆ ನೀವು ಚಹಾ ಮಾಡಿ ಕುಡಿಯಬಹುದಾಗಿದೆ. ಅದಲ್ಲದೆ ಇದು ತೂಕ ಇಳಿಕೆಗೂ ಸಹ ಬಹಳ ಅನುಕೂಲಕಾರಿಯಾಗಿದೆ. ಜೊತೆಗೆ ಇದು ಆರೋಗ್ಯಕರ ಪಾನೀಯವಾಗಿ ಕಾರ್ಯ ನಿರ್ವಹಿಸುವುದಲ್ಲದೆ ಕರುಳಿನ ಆರೋಗ್ಯ ಮತ್ತು ಜೀರ್ಣಕ್ರಿಯೆಗೆ ಪ್ರಯೋಜನಕಾರಿ ಪಾನೀಯವಾಗಿದೆ.

ಹಾಗಾದರೆ ತುಪ್ಪದ ಚಹಾ ಕುಡಿಯುವುದರಿಂದ ಯಾವ ರೀತಿಯ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು. ಇಲ್ಲಿದೆ ಸಂಪೂರ್ಣ ಮಾಹಿತಿ. ತುಪ್ಪದಲ್ಲಿ ಆರೋಗ್ಯಕರ ಕೊಬ್ಬಿದ್ದು ಇದು ನಿಮ್ಮ ದೇಹಕ್ಕೆ ಅಗತ್ಯವಿರುವ ಶಕ್ತಿಯನ್ನು ಪೂರೈಸುತ್ತದೆ. ಬೆಳಿಗ್ಗೆ ತುಪ್ಪದ ಚಹಾವನ್ನು ಸೇವಿಸುವ ಮೂಲಕ ನೀವು ದಿನವಿಡೀ ಅಗತ್ಯವಿರುವ ಶಕ್ತಿಯನ್ನು ಪಡೆದುಕೊಳ್ಳಬಹುದು.

ಸಾಮಾನ್ಯವಾಗಿ ತುಪ್ಪದಲ್ಲಿರುವ ಕೊಬ್ಬಿನ ಅಂಶವನ್ನು ದೇಹವು ವೇಗವಾಗಿ ಹೀರಿಕೊಳ್ಳುತ್ತದೆ, ಸಕ್ಕರೆ ಮಟ್ಟವನ್ನು ಕಡಿಮೆ ಮಾಡದೆಯೇ ನಿಮ್ಮ ಸ್ನಾಯು ಮತ್ತು ಮೆದುಳಿಗೆ ಶಕ್ತಿಯನ್ನು ಪೂರೈಸುತ್ತದೆ.

ತುಪ್ಪದಲ್ಲಿ ಕಂಡು ಬರುವ ಬ್ಯೂಟಿರೇಟ್ ಎನ್ನುವ ಕೊಬ್ಬಿನಾಮ್ಲವು, ಕರುಳಿನ ಒಳಪದರವನ್ನು ರಕ್ಷಿಸುವ ಮೂಲಕ ಉರಿಯೂತವನ್ನು ಕಡಿಮೆ ಮಾಡಿ ಕರುಳಿನ ಆರೋಗ್ಯವನ್ನು ಉತ್ತೇಜಿಸುತ್ತದೆ. ಅದಲ್ಲದೆ ತುಪ್ಪದ ಚಹಾ ಮಾಡಲು ನೀವು ಹಾಲನ್ನು ಕೂಡ ಬಳಕೆ ಮಾಡಬಹುದು.

ಹಾಲು ಮತ್ತು ತುಪ್ಪ ಮಲಬದ್ಧತೆಯನ್ನು ತಡೆಯಲು ಸಹಾಯ ಮಾಡುತ್ತವೆ. ತುಪ್ಪ ಅಥವಾ ಇತರ ಆರೋಗ್ಯಕರ ಕೊಬ್ಬುಗಳನ್ನು ಸೇವನೆ ಮಾಡುವುದರಿಂದ ತೂಕ ಇಳಿಸಿಕೊಳ್ಳಬಹುದು.

ತುಪ್ಪದ ಚಹಾವು ಹೊಟ್ಟೆ ತುಂಬಿದ ಭಾವನೆಯನ್ನು ನೀಡುವುದರಿಂದ, ಇದು ಹಸಿವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಹೆಚ್ಚುವರಿಯಾಗಿ, ಇದು ಚಯಾಪಚಯ ಕ್ರಿಯೆಯನ್ನು ಹೆಚ್ಚಿಸುತ್ತದೆ, ಇದರಿಂದ ದೇಹದಲ್ಲಿರುವ ಅನಗತ್ಯ ಕೊಬ್ಬು ಪರಿಣಾಮಕಾರಿಯಾಗಿ ಕಡಿಮೆಯಾಗುತ್ತದೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande