ನವದೆಹಲಿ, 6 ಜನವರಿ (ಹಿ.ಸ.) :
ಆ್ಯಂಕರ್ : ದೇಶಾದ್ಯಂತ ಇಂದು ಶ್ರೀ ಗುರು ಗೋಬಿಂದ್ ಸಿಂಗ್ ಜಿ ಮಹಾರಾಜ್ ಅವರ 358 ನೇ ಜನ್ಮ ವರ್ಷಾಚರಣೆ, ಪ್ರಕಾಶ್ ಪರ್ವವನ್ನು ಆಚರಿಸಲಾಗುತ್ತಿದೆ.
ಗುರು ಗೋಬಿಂದ್ ಸಿಂಗ್ ಒಂಬತ್ತನೇ ಸಿಖ್ ಗುರು ತೇಜ್ ಬಹದ್ದೂರ್ ಅವರ ಏಕೈಕ ಪುತ್ರ. ಅವರ ತಾಯಿಯ ಹೆಸರು ಮಾತಾ ಗುಜ್ರಿ. ಅವರು ಭಾರತದ ಬಿಹಾರದ ಪಾಟ್ನಾದಲ್ಲಿ ಜನಿಸಿದರು. ಅವರ ಮೂಲ ಹೆಸರು ಗೋಬಿಂದ್ ರೈ .1699 ರಲ್ಲಿ ಖಾಲ್ಸಾ ರಚನೆಯೊಂದಿಗೆ ಅವರು ಗುರು ಗೋಬಿಂದ್ ಸಿಂಗ್ ಎಂದು ಕರೆಯಲ್ಪಟ್ಟರು.
ಬಿಹಾರದ ಪಾಟ್ನಾ ಸಾಹೀಬ್‌ನಲ್ಲಿ ಸಾಂಪ್ರದಾಯಿಕ ಸಂಭ್ರಮಾಚರಣೆಗಳು ಕಳೆಗಟ್ಟಿವೆ. ಪಂಜಾಬ್‌ನ ಅಮೃತ್‌ಸರ್‌ದಲ್ಲಿರುವ ಹರಿಮಂದಿರ್ ಸಾಹೀಬ್ ಸ್ವರ್ಣ ದೇವಾಲಯದಲ್ಲಿ ನಮನ ಸಲ್ಲಿಸಲು ದೇಶ-ವಿದೇಶಗಳಿಂದ ಇಂದು ಭಕ್ತಾದಿಗಳು ಆಗಮಿಸುತ್ತಾರೆ. ಪ್ರಕಾಶ್ ಪರ್ವದ ಸಂದರ್ಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು, ದೇಶದ ಜನತೆಗೆ ಶುಭಾಶಗಳನ್ನು ಕೋರಿದ್ದು, ಮನುಕುಲದ ಒಳಿತಿಗಾಗಿ ಇದ್ದ ಗುರು ಗೋಬಿಂದ್ ಸಿಂಗ್‌ರ ನಿಸ್ವಾರ್ಥ ಶ್ರದ್ಧೆ ಎಲ್ಲರಿಗೂ ಸ್ಫೂರ್ತಿದಾಯಕ ಎಂದು ಸಾಮಾಜಿಕ ಮಾಧ್ಯಮದಲ್ಲಿ ತಿಳಿಸಿದ್ದಾರೆ.
ಪ್ರಕಾಶ್ ಪರ್ವ ಹಿನ್ನೆಲೆ ಪ್ರಧಾನಿ ನರೇಂದ್ರ ಮೋದಿ, ಗುರು ಗೋಬಿಂದ್ ಸಿಂಗ್‌ರಿಗೆ ಗೌರವ ನಮನ ಸಲ್ಲಿಸಿದ್ದು, ಗುರು ಗೋಬಿಂದ್ ಸಿಂಗ್‌ರ ಚಿಂತನೆಗಳು ಅಭಿವೃದ್ಧಿಪರ ಸಮೃದ್ಧ ಸಮಾಜ ನಿರ್ಮಾಣಕ್ಕೆ ನಾಗರಿಕರನ್ನು ಎಂದಿಗೂ ಪ್ರೇರೇಪಿಸುತ್ತದೆ ಎಂದಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / ಡಾ.ಪಿ.ವಿ.ಪ್ರಸಾದ ರಾವ್ ಪಿ .ವಿ