ಕಿತ್ತಳೆ ಸಿಪ್ಪೆಯ‌ ಉಪಯೋಗಗಳು
ಹುಬ್ಬಳ್ಳಿ, 05 ಜನವರಿ (ಹಿ.ಸ.) : ಆ್ಯಂಕರ್ : ಸಾಮಾನ್ಯವಾಗಿ ಕಿತ್ತಳೆ ಹಣ್ಣನ್ನು ಎಲ್ಲರೂ ಇಷ್ಟ ಪಟ್ಟು ತಿನ್ನುತ್ತಾರೆ. ಇದು ವಿಟಮಿನ್ ಸಿ ಯ ಉತ್ತಮ ಮೂಲವಾಗಿದೆ. ಅದರಲ್ಲಿಯೂ ಚಳಿಗಾಲದಲ್ಲಿ ಜನರು ಸಾಕಷ್ಟು ಕಿತ್ತಳೆ ಹಣ್ಣುಗಳನ್ನು ಸೇವಿಸುತ್ತಾರೆ. ಇದನ್ನು ತಿನ್ನುವುದರಿಂದ ನಮ್ಮ ಚರ್ಮ ಆರೋಗ್ಯವಾಗಿರುತ್
Orange


ಹುಬ್ಬಳ್ಳಿ, 05 ಜನವರಿ (ಹಿ.ಸ.) :

ಆ್ಯಂಕರ್ : ಸಾಮಾನ್ಯವಾಗಿ ಕಿತ್ತಳೆ ಹಣ್ಣನ್ನು ಎಲ್ಲರೂ ಇಷ್ಟ ಪಟ್ಟು ತಿನ್ನುತ್ತಾರೆ. ಇದು ವಿಟಮಿನ್ ಸಿ ಯ ಉತ್ತಮ ಮೂಲವಾಗಿದೆ. ಅದರಲ್ಲಿಯೂ ಚಳಿಗಾಲದಲ್ಲಿ ಜನರು ಸಾಕಷ್ಟು ಕಿತ್ತಳೆ ಹಣ್ಣುಗಳನ್ನು ಸೇವಿಸುತ್ತಾರೆ. ಇದನ್ನು ತಿನ್ನುವುದರಿಂದ ನಮ್ಮ ಚರ್ಮ ಆರೋಗ್ಯವಾಗಿರುತ್ತದೆ. ಆದರೆ ಈ ಹಣ್ಣನ್ನು ತಿಂದು ಅದರ ಸಿಪ್ಪೆಯನ್ನು ಎಸೆಯುತ್ತಾರೆ. ಆದರೆ ಇದರಲ್ಲಿ ಅನೇಕ ರೀತಿಯ ಆರೋಗ್ಯ ಗುಣಗಳಿವೆ. ಇದನ್ನು ಸರಿಯಾದ ರೀತಿಯಲ್ಲಿ ಉಪಯೋಗ ಮಾಡಿದರೆ ಆರೋಗ್ಯಕ್ಕೆ ತುಂಬಾ ಪ್ರಯೋಜನಗಳಿವೆ. ಇದರಲ್ಲಿ ಆಂಟಿಆಕ್ಸಿಡೆಂಟ್ಗಳು, ವಿಟಮಿನ್ ಸಿ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಗಳಿವೆ. ಇದು ನಮ್ಮ ಆರೋಗ್ಯಕ್ಕೆ ಮಾತ್ರವಲ್ಲದೆ ದೈನಂದಿನ ದಿನಚರಿಯಲ್ಲೂ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಅದಲ್ಲದೆ ಕಿತ್ತಳೆ ಸಿಪ್ಪೆಯನ್ನು ಮನೆಯನ್ನು ಸ್ವಚ್ಛಗೊಳಿಸಲು ಮತ್ತು ಇತರ ಕೆಲಸಗಳಿಗೆ ಬಳಸಲಾಗುತ್ತದೆ.

ಹಾಗಾದರೆ ಉಪಯುಕ್ತವಾಗಿ ಕಿತ್ತಳೆ ಸಿಪ್ಪೆಯನ್ನು ಹೇಗೆ ಬಳಸಬಹುದು ಎಂಬುದನ್ನು ತಿಳಿದುಕೊಳ್ಳಿ. ಸಾಮಾನ್ಯವಾಗಿ ಕಿತ್ತಳೆ ಸಿಪ್ಪೆಯ ಪುಡಿ ನೈಸರ್ಗಿಕ ಸ್ಕ್ರಬ್ ಆಗಿ ಕಾರ್ಯ ನಿರ್ವಹಿಸುತ್ತದೆ. ಇದು ಚರ್ಮದಿಂದ ಟ್ಯಾನಿಂಗ್ ಅನ್ನು ತೆಗೆಯುತ್ತದೆ, ಇದರೊಂದಿಗೆ ಮೊಡವೆಗಳನ್ನು ಕಡಿಮೆ ಮಾಡಲು ಮತ್ತು ಚರ್ಮವನ್ನು ಹೊಳೆಯುವಂತೆ ಮಾಡಲು ಸಹಾಯ ಮಾಡುತ್ತದೆ.

ನೀವು ಕಿತ್ತಳೆ ಸಿಪ್ಪೆಯ ಪುಡಿಯನ್ನು ತಯಾರಿಸಿ ಫೇಸ್ ಪ್ಯಾಕ್ ತಯಾರಿಸಿ ಚರ್ಮಕ್ಕೆ ಬಳಸಬಹುದು. ಕಿತ್ತಳೆ ಸಿಪ್ಪೆಯಲ್ಲಿ ಆಮ್ಲೀಯ ಗುಣಗಳಿವೆ. ಇದು ಅಡುಗೆ ಮನೆಯಲ್ಲಿರುವ ಕಲೆಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಹಾಗೆಯೇ ಕಿತ್ತಳೆ ಸಿಪ್ಪೆಯು ನೈಸರ್ಗಿಕ ಸುವಾಸನೆಗಳನ್ನು ಹೊಂದಿರುವುದರಿಂದ ಇದು ಮನೆಯನ್ನು ಪರಿಮಳಯುಕ್ತವಾಗಿಸಲು ಸಹಾಯ ಮಾಡುತ್ತದೆ. ಜೊತೆಗೆ ಕೆಟ್ಟ ವಾಸನೆಗಳಿಂದ ಮುಕ್ತಿ ನೀಡುತ್ತದೆ.

ಕಿತ್ತಳೆ ಸಿಪ್ಪೆಯನ್ನು ಚೆನ್ನಾಗಿ ಒಣಗಿಸಿ ಬಳಿಕ ಅದನ್ನು ಪುಡಿ ಮಾಡಿ ಇಟ್ಟುಕೊಳ್ಳಬಹುದು. ಇದರಿಂದ ನೀವು ಚಹಾ, ಕಷಾಯ ಮಾಡಿ ಕುಡಿಯಬಹುದು. ಈ ರೀತಿ ಮಾಡುವುದರಿಂದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬಹುದು.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande