ಸಿದ್ದಲಿಂಗ ಶ್ರೀಗಳಿಗೆ ಮದುವೆಗೆ ಆಹ್ವಾನಿಸಿದ ನಟ ಡಾಲಿ ಧನಂಜಯ್
ತುಮಕೂರು,3 ಜನವರಿ (ಹಿ.ಸ.) : ಆ್ಯಂಕರ್ : ಕನ್ನಡ ಚಿತ್ರರಂಗದ ಖ್ಯಾತ ನಟ 'ಡಾಲಿ' ಧನಂಜಯ್ ಮತ್ತು ಚಿತ್ರದುರ್ಗ ಮೂಲದ ವೈದ್ಯೆ ಡಾ.ಧನ್ಯತಾ ಅವರ ಮದುವೆಯು ಫೆಬ್ರವರಿ 16ರಂದು ಮೈಸೂರಿನಲ್ಲಿ ಅದ್ದೂರಿಯಾಗಿ ನಡೆಯಲಿದೆ.ಈಗಾಗಲೇ ನಟ ಡಾಲಿ ಧನಂಜಯ್‌‌‌ ಮನೆಯಲ್ಲಿ ಮದುವೆ ಶಾಸ್ತ್ರ ಪ್ರಾರಂಭವಾಗಿದ್ದು, ಸದ್ಯ
ಸಿದ್ದಲಿಂಗ


ತುಮಕೂರು,3 ಜನವರಿ (ಹಿ.ಸ.) :

ಆ್ಯಂಕರ್ : ಕನ್ನಡ ಚಿತ್ರರಂಗದ ಖ್ಯಾತ ನಟ 'ಡಾಲಿ' ಧನಂಜಯ್ ಮತ್ತು ಚಿತ್ರದುರ್ಗ ಮೂಲದ ವೈದ್ಯೆ ಡಾ.ಧನ್ಯತಾ ಅವರ ಮದುವೆಯು ಫೆಬ್ರವರಿ 16ರಂದು ಮೈಸೂರಿನಲ್ಲಿ ಅದ್ದೂರಿಯಾಗಿ ನಡೆಯಲಿದೆ.ಈಗಾಗಲೇ ನಟ ಡಾಲಿ ಧನಂಜಯ್‌‌‌ ಮನೆಯಲ್ಲಿ ಮದುವೆ ಶಾಸ್ತ್ರ ಪ್ರಾರಂಭವಾಗಿದ್ದು, ಸದ್ಯ ಚಲನಚಿತ್ರದ ಕಲಾವಿದರಿಗೆ, ರಾಜಕೀಯ ಗಣ್ಯರಿಗೆ ಆಮಂತ್ರಣ ನೀಡುತ್ತಿದ್ದಾರೆ.

ತುಮಕೂರಿನ ಸಿದ್ದಗಂಗಾ ಮಠಕ್ಕೆ ನಟ ಡಾಲಿ ಧನಂಜಯ್‌ ಭೇಟಿ ನೀಡಿದ್ದಾರೆ.ಮೊದಲು ಶಿವಕುಮಾರ ಶ್ರೀಗಳ ಗದ್ದುಗೆಗೆ ಪೂಜೆ ಸಲ್ಲಿಸಿದರು. ಲಗ್ನ ಪತ್ರಿಕೆ ಪೂಜೆ ಮಾಡಿಸಿದರು. ಬಳಿಕ ಅವರು ಸಿದ್ದಗಂಗಾ ಮಠಾಧ್ಯಕ್ಷ ಸಿದ್ದಲಿಂಗ ಸ್ವಾಮಿಗಳಿಗೆ ತಮ್ಮ ಮದುವೆಯ ಕರೆಯೋಲೆ ನೀಡಿ, ಆಶೀರ್ವಾದ ಪಡೆದರು. ಈ ವೇಳೆ ಸ್ನೇಹಿತರು ಜೊತೆಗಿದ್ದರು.

---------------

ಹಿಂದೂಸ್ತಾನ್ ಸಮಾಚಾರ್ / ಡಾ.ಪಿ.ವಿ.ಪ್ರಸಾದ ರಾವ್ ಪಿ .ವಿ


 rajesh pande