ಉತ್ತರ ಕರ್ನಾಟಕದ ಜನರು ಹೃದಯವಂತರು;ಜನವರಿ 10ರಂದು ಸಂಜು ವೆಡ್ಸ್ ಗೀತಾ 2 ಚಿತ್ರ ಬಿಡುಗಡೆ
ಕೊಪ್ಪಳ, 03 ಜನವರಿ (ಹಿ.ಸ.) : ಆ್ಯಂಕರ್ : ಕನ್ನಡ ಸಿನಿಮಾರಂಗದಲ್ಲಿ ಫಾನ್ಸ್ ವಾರ್ ಆಗಾಗ ಆಗುತ್ತಲೇ ಇರುತ್ತವೆ. ಸ್ಟಾರ್ ಗಳೇ ಯಾವುದೇ ಗಲಾಟೆ ಮಾಡಿಕೊಳ್ಳದೆ ಖುಷಿಯಾಗಿರುತ್ತಾರೆ ಆದರೆ ಕೆಲ ಅಭಿಮಾನಿಗಳು ಮಾತ್ರ ಇದು ಸರಿ ಅಲ್ಲ ಅದು ಸರಿ ಅಲ್ಲ ಕೊಂಕು ತೆಗೆಯುತ್ತಲೇ ಇರುತ್ತಾರೆ. ಅಭಿಮಾನಿಗಳು ಎಲ್ಲರ ಚಿತ
ಉತ್ತರ ಕರ್ನಾಟಕದ ಜನರು ಹೃದಯವಂತರು;ಜನವರಿ 10ರಂದು ಸಂಜು ವೆಡ್ಸ್ ಗೀತಾ 2 ಚಿತ್ರ ಬಿಡುಗಡೆ


ಉತ್ತರ ಕರ್ನಾಟಕದ ಜನರು ಹೃದಯವಂತರು;ಜನವರಿ 10ರಂದು ಸಂಜು ವೆಡ್ಸ್ ಗೀತಾ 2 ಚಿತ್ರ ಬಿಡುಗಡೆ


ಕೊಪ್ಪಳ, 03 ಜನವರಿ (ಹಿ.ಸ.) :

ಆ್ಯಂಕರ್ : ಕನ್ನಡ ಸಿನಿಮಾರಂಗದಲ್ಲಿ ಫಾನ್ಸ್ ವಾರ್ ಆಗಾಗ ಆಗುತ್ತಲೇ ಇರುತ್ತವೆ. ಸ್ಟಾರ್ ಗಳೇ ಯಾವುದೇ ಗಲಾಟೆ ಮಾಡಿಕೊಳ್ಳದೆ ಖುಷಿಯಾಗಿರುತ್ತಾರೆ ಆದರೆ ಕೆಲ ಅಭಿಮಾನಿಗಳು ಮಾತ್ರ ಇದು ಸರಿ ಅಲ್ಲ ಅದು ಸರಿ ಅಲ್ಲ ಕೊಂಕು ತೆಗೆಯುತ್ತಲೇ ಇರುತ್ತಾರೆ. ಅಭಿಮಾನಿಗಳು ಎಲ್ಲರ ಚಿತ್ರಗಳನ್ನ ನೋಡಬೇಕು ಫ್ಯಾನ್ಸ್ ವಾರ್ ಸರಿಯಲ್ಲ ಎಂದು ಕೊಪ್ಪಳದಲ್ಲಿ ನಟ ಶ್ರೀನಗರ ಕಿಟ್ಟಿ ಹೇಳಿದರು.

ಸಂಜು ವೆಡ್ಸ್ ಗೀತಾ 2 ಸಿನಿಮಾದ ಚಿತ್ರಗೀತೆ ಬಿಡುಗಡೆಗೆ ಕೊಪ್ಪಳಕ್ಕೆ ಆಗಮಿಸಿದ ಸಂದರ್ಭದಲ್ಲಿ ನಗರದ ಪತ್ರಿಕಾ ಭವನದಲ್ಲಿ ಸುದ್ದಿಗಾರರೊಂದಿಗೆ ನಟ ಶ್ರೀನಗರ ಕಿಟ್ಟಿ ಮಾತನಾಡಿ, ನಿರ್ದೇಶಕ ನಾಗಶೇಖರ್ ರವರ ನಿರ್ದೇಶನದಲ್ಲಿ 2011ರಲ್ಲಿ ತೆರೆಕಂಡಿದ್ದ ಸಿನಿಮಾ 'ಸಂಜು ವೆಡ್ಸ್ ಗೀತಾ', ನಾನು ಹಾಗೂ ರಮ್ಯಾ ಕಾಂಬಿನೇಶನ್‌ನಲ್ಲಿ ಮೂಡಿಬಂದಿದ್ದ ಈ ಸಿನಿಮಾ ರಾಜ್ಯದಲ್ಲಿ ದೊಡ್ಡ ಮಟ್ಟದ ಹಿಟ್ ಆಗಿತ್ತು.

ಇದೀಗ 14 ವರ್ಷಗಳ ಬಳಿಕ 'ಸಂಜು ವೆಡ್ಸ್ ಗೀತಾ-2' ಚಿತ್ರವು ತೆರೆ ಮೇಲೆ ತರುತ್ತಿದ್ದಾವೆ. ರಾಜಕಾರಣದಲ್ಲಿ ನಟಿ ರಮ್ಯಾ ಬಿಜಿಯಾಗಿರುವ ಕಾರಣ, ರಚಿತಾ ರಾಮ್ ಜೋಡಿಯಾಗಿದ್ದಾರೆ. ಅಲ್ಲದೇ, ಸಂಜು ವಾಟ್ಸ್ ಗೀತಾ ಮೊದಲ ಭಾಗದಲ್ಲಿ ಪೂರ್ತಿ ಲವ್‌ಸ್ಟೋರಿಯಾಗಿತ್ತು. ಎರಡನೇ ಭಾಗದಲ್ಲಿ ರೇಷ್ಮೆ ಬೆಳಗಾರರ ವಿಷಯವನ್ನಿಟ್ಟುಕೊಂಡು ನವೀರು ಪ್ರೇಮಕಥೆ ಹೇಳುವ ಮೂಲಕ ನಾಗಶೇಖ‌ರ್ ವಿಭಿನ್ನತೆ ಮೆರೆದಿದ್ದಾರೆ.

ಜನವರಿ 10ರಂದು ಸಿನಿಮಾ ರಾಜ್ಯದಲ್ಲಿ ಬಿಡುಗಡೆಯಾಗಲಿದೆ.ಶಿಡ್ಲಘಟ್ಟದಿಂದ ಆರಂಭವಾಗುವ ಕಥೆ ಸ್ವಿಜರ್‌ಲ್ಯಾಂಡ್‌ಗೆ ಹೋಗುತ್ತದೆ. ಇದು ಬೇರೆಯದೇ ಪ್ಯಾಟ್ರನ್ ಸಿನಿಮಾ, ಈ ಹಿಂದೆ ಎರಡು ಸಾಂಗ್ ಬಿಟ್ಟೆದ್ದೆವು. ಇದೀಗ, ಮತ್ತೊಂದು ಸಾಂಗ್ ಬಿಡುಗಡೆಗೊಳಿಸಿದ್ದೇವೆ. ಚಿತ್ರದ 'ಮಳೆಯಂತೆ..' ಹಾಡು ಬಿಡುಗಡೆಯಾಗಿದೆ. ಮಳೆಯಂತೆ ಹಾಡು ನೋಡಿದ ವೀಕ್ಷಕರು ಶುಭ ಹಾರೈಸಿದ್ದಾರೆ.

ವಿ. ಶ್ರೀಧರ್ ಸಂಭ್ರಮ್ ಸಂಗೀತ ನೀಡಿದ್ದಾರೆ. ಇನ್ನು ಚೇತನ್ ಚಂದ್ರ, ರಂಗಾಯಣ ರಘು, ಸಾಧು ಕೋಕಿಲ, ತಬಲಾ ನಾಣಿ, ಗಿಚ್ಚಿಗಿಲಿಗಿಲಿ ವಿನೋದ್, ಸಂಪತ್‌ಕುಮಾ‌ರ್ ತಾರಾಗಣದಲ್ಲಿದ್ದಾರೆ ಎಂದು ಮಾಹಿತಿ ನೀಡಿದರು.ನಂತರ ಕೊಪ್ಪಳದ ಹಿರಿಯ ಸಾಹಿತಿ ಮಾಹಾಂತೇಶ ಮಲ್ಲನಗೌಡರ್ ಮಾತನಾಡಿ, ಕನ್ನಡ ಚಿತ್ರರಂಗದ ಹೆಸರಾಂತ ನಟ ಶ್ರೀನಗರ ಕಿಟ್ಟಿ ರವರು ಕೊಪ್ಪಳ ನಗರಕ್ಕೆ ಬಂದು ಚಿತ್ರದ ಚಿತ್ರಗೀತೆ ಬಿಡುಗಡೆ ಮಾಡಿದ್ದು ಸಂತಸ ತಂದಿದೆ.

ಸಂಜು ವೆಡ್ಸ್ ಗೀತಾ ಚಿತ್ರ ಭರ್ಜರಿ ಯಶಸ್ವಿ ಕಂಡಿತ್ತು.ರೇಷ್ಮೆ ಬೆಳಗಾರರ ವಿಷಯದ ಮೇಲೆ ಪ್ರೇಮಕಥೆ ಹೇಳುವ ಸಂಜು ವೆಡ್ಸ್ ಗೀತಾ 2 ಚಿತ್ರ ರಾಜ್ಯಾದ್ಯಂತ ಯಶಸ್ವಿಯಾಗಲಿ. ಉತ್ತರ ಕರ್ನಾಟಕದ ಸಿನಿಮಾ ಪ್ರೇಕ್ಷಕ ಹೃದಯವಂತರು ಹಾಗೂ ಕೊಪ್ಪಳದ ಸಿನಿಮಾ ಪ್ರೇಕ್ಷಕರು ಜನವರಿ ಹತ್ತರಂದು ಸಿನಿಮಾ ಮಂದಿರಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಚಿತ್ರವನ್ನ ನೋಡಿ ಪ್ರೋತ್ಸಾಹಿಸಬೇಕು ಎಂದು ಮನವಿ ಮಾಡಿದರು. ಈ ಸಂದರ್ಭದಲ್ಲಿ ಸಿನಿಮಾದ ನಿರ್ಮಾಪಕ ಚಲವಾದಿ ಕುಮಾರ್, ಮುಖಂಡರಾದ ಕನಕ ಮೂರ್ತಿ ಚಲವಾದಿ, ಕಾಶಪ್ಪ ಚಲವಾದಿ, ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande